For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023: ನೆದರ್ಲೆಂಡ್ಸ್ ವಿರುದ್ಧ ಗೆದ್ದು ಪಾಕಿಸ್ತಾನಕ್ಕೆ ಗುದ್ದಿದ ಅಫ್ಘಾನಿಸ್ತಾನ: ಅಂಕಪಟ್ಟಿಯಲ್ಲಿ ಕೋಲಾಹಲ!!

ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಅಮೋಘ ಪ್ರದರ್ಶನ ಮುಂದುವರಿದಿದೆ. ನೆದರ್ಲೆಂಡ್ಸ್ ವಿರುದ್ಧವೂ ಅದ್ಭುತ ಪ್ರದರ್ಶನ ನೀಡಿರುವ ಅಫ್ಘನ್ ಪಡೆ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ ಅಬ್ಬರಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿರುವ ಅಫ್ಘನ್ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ತಂಡ ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನೆದರ್ಲೆಂಡ್ಸ್ ವಿರುದ್ಧ ಸಾಧಿಸಿರುವ ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ಆಡಿರುವ 7 ಪಂದ್ಯಗಳಲ್ಲಿ -0.330 ನೆಟ್‌ರನ್‌ರೇಟ್‌ನೊಂದಿಗೆ 8 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಇನ್ನು 8ನೇ ಸ್ಥಾನಕ್ಕಿಂತ ಕೆಳಕ್ಕೆ ಕುಸಿಯುವುದು ಅಸಾಧ್ಯವಾಗಿರುವ ಕಾರಣ 2025ರ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಪಡೆದುಕೊಂಡಂತಾಗಿದೆ.

World cup, match 34: Afghanistan win against Netherlands by 7 wickets: Highlights

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬೌಲಿಂಗ್ ದಾಳಿ ನಡೆಸುವ ಸವಾಲು ಪಡೆದ ಅಫ್ಘಾನಿಸ್ತಾನ ತಂಡ 179 ರನ್‌ಗಳಿಗೆ ನೆದರ್ಲೆಂಡ್ಸ್ ತಂಡವನ್ನು ಆಲೌಟ್ ಮಾಡಿತ್ತು. ಹೀಗಾಗಿ ಗೆಲುವಿಗೆ 180 ರನ್‌ಗಳ ಸುಲಭ ಸವಾಲು ಪಡೆದ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಗುರ್ಬಾಜ್ 10 ರನ್‌ಗಳಿಸಿ ತಂಡದ ಮೊತ್ತ 27 ಆಗಿದ್ದಾಗ ವಿಕೆಟ್ ಕಳೆದುಕೊಂಡರೆ ಇಬ್ರಾಹಿಮ್ ಜದ್ರಾನ್ 20 ರನ್‌ಗಳಿಸಿ ತಂಡದ ಮೊತ್ತ 55 ರನ್‌ಗಳಾಗಿದ್ದಾಗ ವಿಕೆಟ್ ಕಳೆದುಕೊಂಡಿದ್ದರು.

ನಂತರ ರಹ್ಮತ್ ಶಾ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ ಉತ್ತಮ ಜೊತೆಯಾಟ ನೀಡುವ ಊಲಕ ಮಿಂಚಿದರು. ರಹ್ಮತ್ ಶಾ 54 ಎಸೆತಗಳಲ್ಲಿ 52 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಒಮರ್ಜಾಯ್ ನಾಯಕನಿಗೆ ಸಾಥ್ ನೀಡಿದರು. ಈ ಜೋಡಿ ಅಜೇಯವಾಗುಳಿದು ಗೆಲುವಿನ ಪ್ರಕ್ರಿಯೆ ಪೂರ್ತಿಗೊಳಿಸಿದರು. ನಾಯಕ ಶಾಹಿದಿ 56 ರನ್‌ಗಳಿಸಿ ಅಜೇಯವಾಗುಳಿದಿದ್ದು ಒಮರ್ಜಾಯ್ 31 ರನ್‌ಗಳನ್ನು ಗಳಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದ ನೆದರ್ಲೆಂಡ್ಸ್ ಬ್ಯಾಟಿಂಗ್ ನಡೆಸಿ ಆರಂಭಿಕ ವಿಕೆಟನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಎರಡನೇ ವಿಕೆಟ್‌ಗೆ ಮ್ಯಾಕ್ಸ್ ಒಡೌಡ್ ಹಾಗೂ ಕಾಲಿನ್ ಅಕರ್ಮನ್ 70 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಬಲ ನೀಡಿದರು. ಒಡೌಡ್ 42 ರನ್‌ಗಳ ಕೊಡುಗೆ ನಿಡಿದರೆ ಅಕರ್ಮನ್ 29ರನ್‌ಗಳಿಸಿದರು. ನಂತರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಏಕಾಂಗಿ ಹೋರಾಟ ನಡೆಸಿದರಾದರೂ ಅವರಿಗೆ ಮತ್ತೊಂದು ತುದಿಯಲ್ಲಿ ಯಾವುದೇ ಬೆಂಬಲ ದೊರೆಯಲಿಲ್ಲ.

ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 58 ರನ್‌ಗಳನ್ನು ಗಳಿಸಿ ಅಫ್ಘನ್ ಬೌಲಿಂಗ್ ದಾಳಿಗೆ ಹೋರಾಟದ ಪ್ರದರ್ಶನ ನೀಡಿದರು. ಹೀಗಾಗಿ ನೆದರ್ಲೆಂಡ್ಸ್ ತಂಡ ಈ ಪಂದ್ಯದಲ್ಲಿ 46.3 ಓವರ್‌ಗಳಲ್ಲಿ 179 ರನ್‌ಗಳನ್ನು ಮಾತ್ರವೇ ಗಳಿಸಿ ಆಲೌಟ್ ಆಯಿತು.

ಇನ್ನು ಈ ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡದ ಪರವಾಗಿ ನಬಿ ಮೂರು ವಿಕೆಟ್ ಕಿತ್ತು ಅಬ್ಬರಿಸಿದರೆ ನೂರ್ ಅಹ್ಮದ್ ಎರಡು ಹಾಗೂ ಮುಜೀಬ್ ಉರ್ ರಹ್ಮಾನ್ ಒಂದು ವಿಕೆಟ್ ಪಡೆದರು. ನಾಲ್ವರು ಆಟಗಾರರು ರನೌಟ್ ಆಗಿ ಫೆವಿಲಿಯನ್ ಸೇರಿಕೊಂಡರು.

ನೆದರ್ಲೆಂಡ್ಸ್ ಆಡುವ ಬಳಗ: ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್‌ಮನ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಬೆಂಚ್: ವಿಕ್ರಮಜಿತ್ ಸಿಂಗ್, ಶರೀಜ್ ಅಹ್ಮದ್, ತೇಜಾ ನಿಡಮನೂರು, ರಯಾನ್ ಕ್ಲೈನ್

ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್
ಬೆಂಚ್: ನವೀನ್-ಉಲ್-ಹಕ್, ರಿಯಾಜ್ ಹಸನ್, ಅಬ್ದುಲ್ ರೆಹಮಾನ್, ನಜೀಬುಲ್ಲಾ ಜದ್ರಾನ್

Story first published: Friday, November 3, 2023, 20:48 [IST]
Other articles published on Nov 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+