Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲಂಡ್ vs ಪಾಕಿಸ್ತಾನ ಮುಖಾಮುಖಿ: Live ಸ್ಕೋರ್

ವಿಶ್ವಕಪ್ ಟೂರ್ನಿಯಲ್ಲಿ ಇಂದು 35ನೇ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದುಕೊಂಡಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.

ಇನ್ನು ಈ ಪಂದ್ಯದ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಕೇಮ್ ವಿಲಿಯಮ್ಸನ್ ಮರಳಿದ್ದಾರೆ. ಹೀಗಾಗಿ ತಂಡದ ನಾಯಕತ್ವದ ಜವಾಬ್ಧಾರಿ ಕೇನ್ ವಿಲಿಯಮ್ಸನ್‌ಗೆ ದೊರೆತಿದೆ. ಎರಡು ಬದಲಾವಣೆಗಳೊಂದಿಗೆ ಕಿವೀಸ್ ಪಡೆ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದು ವಿಲ್ ಯಂಗ್ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಮ್ಯಾಟ್ ಹೆನ್ರಿ ಬದಲಿಗೆ ಇಶ್ ಸೋಧಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಪಾಕಿಸ್ತಾನ ತಂಡದಲ್ಲಿಯೂ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಉಸಮ ಮಿರ್ ಆಡುವ ಬಳಗದಿಂದ ಹೊರಬಿದ್ದಿದ್ದು ಹಸನ್ ಆಲಿ ತಂಡಕ್ಕೆ ಸೇರಿಕೊಂಡಿದ್ದಾರೆ.

World cup, match 35, New Zealand vs Pakistan, Toss report, playing XI and Live score

Live ಸ್ಕೋರ್ ಹೀಗಿದೆ

1
57799

ಪ್ರಸ್ತುತ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಈ ಸ್ಥಾನವನ್ನು ಭದ್ರಗೊಳಿಸಬೇಕಿದ್ದರೆ ಪಾಕಿಸ್ತಾನದ ವಿರುದ್ಧದ ಈ ಪಂದ್ಯದಲ್ಲಿ ಕಿವಿಸ್ ಪಡೆಗೆ ಗೆಲುವು ಅಗತ್ಯ. ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದ ನ್ಯೂಜಿಲೆಂಡ್ ತಮಡ ಬಳಿಕ ಮೂರು ಪಂದ್ಯಗಳಲ್ಲಿ ಸತತವಾಗಿ ಸೋಲು ಅನುಭವಿಸಿದೆ.ಹೀಗಾಗಿ ಈ ಸೋಲಿನ ಸರಪಳಿ ಕಡಿದುಕೊಳಳಬೇಕಿದ್ದು ಸೆಮಿಫೈನಲ್ ಕನಸು ಜೀವಂತವಾಗಿರಿಸಲು ಗೆಲುವಿಗಾಗಿ ಸರ್ವ ಪ್ರಯತ್ನ ನಡೆಸಲಿದೆ.

ಪಾಕಿಸ್ತಾನ ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡದ ಕಳೆದ ಮೂರು ಪಂದ್ಯಗಳ ಸೋಲು ಪಾಕ್ ತಂಡಕ್ಕೆ ಸೆಮಿಫೈನಲ್ ಸ್ಪರ್ಧೆಯಲ್ಲಿ ಇನ್ನೂ ಉಳಿದುಕೊಳ್ಳುವಂತೆ ಮಾಡಿದೆ. ಇನ್ನು ಕಳೆದ ಪಂದ್ಯದಲ್ಲಿ ಪಾಕ್ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿಯನ್ನು ಕಡಿದುಕೊಂಡಿದೆ. ಪಾಕಿಸ್ತಾನಕ್ಕೆ ಉಳಿದುಕೊಂಡಿರುವ ಕೊನೆಯ ಎರಡು ಪಂದ್ಯಗಳಲ್ಲಿಯೂ ಗೆದ್ದರೆ ಮಾತ್ರವೇ ಸೆಮಿ ಫೈನಲ್ ಕನಸು ಜೀವಂತವಾಗುಳಿಯಲಿದೆ.

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್

ಬೆಂಚ್: ಲಾಕಿ ಫರ್ಗುಸನ್, ಕೈಲ್ ಜೇಮಿಸನ್, ವಿಲ್ ಯಂಗ್, ಜೇಮ್ಸ್ ನೀಶಮ್

ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್
ಬೆಂಚ್: ಉಸಾಮಾ ಮಿರ್, ಶಾದಾಬ್ ಖಾನ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್

Story first published: Saturday, November 4, 2023, 10:26 [IST]
Other articles published on Nov 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+