
ನವದೆಹಲಿ, ಮೇ 29: ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಕ್ರೀಸ್‌ಗಂಟಿ ನಿಂತರೆ ಆ ಪಂದ್ಯದಲ್ಲಿ ಭಾರತ ಬಹುತೇಕ ಗೆದ್ದಂತೆ. ಆದರೆ ರೋಹಿತ್-ಧವನ್ ಹೆಚ್ಚಿನ ಪಂದ್ಯಗಳಲ್ಲಿ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೂ ಧವನ್-ರೋಹಿತ್ ಆರಂಭಿಕ ಜೋಡಿ ಟೀಮ್ ಇಂಡಿಯಾದ ಬಲುದೊಡ್ಡ ಶಕ್ತಿ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಆರಂಭಿಕರಾದ ಬಲ ಗೈ ಬ್ಯಾಟ್ಸ್ಮನ್ ರೋಹಿತ್ ಮತ್ತು ಎಡಗೈ ಬ್ಯಾಟ್ಸ್ಮನ್ ಧವನ್ ತಂಡಕ್ಕೆ ರನ್ ಕೊಡುಗೆ ನೀಡಿದರೆ ಮಧ್ಯಮ ಕ್ರಮಾಂಕದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆದರೆ ವಿಶ್ವಕಪ್ ಎರಡೂ ಅಭ್ಯಾಸ ಪಂದ್ಯಗಳಲ್ಲೂ ಧವನ್-ರೋಹಿತ್ ಅಂಥ ಬ್ಯಾಟಿಂಗ್ ತೋರಿಸಿಲ್ಲ.
ರೋಹಿತ್ ಮತ್ತು ಧವನ್ ಅವರ ಆರಂಭಿಕ ಬ್ಯಾಟಿಂಗ್ ಕ್ರಮಾಂಕದ ಯಾಕೆ ಪ್ರಮುಖವಾದುದು ಎಂದು ವಿವರಿಸುತ್ತ ಸಚಿನ್, 'ಎಡ-ಬಲ ಬ್ಯಾಟಿಂಗ್ ಕಾಂಬಿನೇಶನ್ ಎದುರಾಳಿ ತಂಡದ ಬೌಲರ್‌ಗಳನ್ನು ತೊಂದರೆಗೊಳಪಡಿಸುತ್ತದೆ. ಅಲ್ಲದೆ ಕ್ಯಾಪ್ಟನ್ ಕೂಡ ಫೀಲ್ಡರ್‌ಗಳನ್ನು ಬದಲಿಸುತ್ತಿರಬೇಕಿರುತ್ತೆ. ಇದು ತಂಡಕ್ಕೆ ಅನುಕೂಲವನ್ನೊದಗಿಸುತ್ತೆ' ಎಂದಿದ್ದಾರೆ.
ಮಾತು ಮುಂದುವರೆಸಿದ ಮಾಸ್ಟರ್ ಬ್ಲಾಸ್ಟರ್, 'ಒಂದು ವೇಳೆ ನಮ್ಮಲ್ಲಿ ಅದ್ಭುತ ಬ್ಯಾಟ್ಸ್ಮನ್‌ಗಳಿದ್ದಾಗ ಎಡ-ಬಲ ಬ್ಯಾಟಿಂಗ್ ಕಾಂಬಿನೇಶನ್ ವಿಷಯವೇ ಅಲ್ಲ. ನಮ್ಮ ತಂಡದಲ್ಲಿ ಅಂಥ ಸ್ಫೋಟಕ ಬ್ಯಾಟ್ಸ್ಮನ್‌ಗಳಿದ್ದಾರೆ' ಎಂದು ತಿಳಿಸಿದರು. ಜೂನ್ 5ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕ್ರಿಕೆಟ್ ವಿಶ್ವಕಪ್ ಮೊದಲ ಪಂದ್ಯವನ್ನಾಡಲಿದೆ.