WPL 2023: ಐದು ಪಂದ್ಯಗಳಲ್ಲಿ ಸತತ ಸೋಲು: ಆರ್‌ಸಿಬಿ ತಂಡದ ಪ್ರದರ್ಶನಕ್ಕೆ ಆಕಾಶ್ ಚೋಪ್ರ ಕಿಡಿ

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಆಡಿರುವ ಮೊದಲ ಐದು ಪಂದ್ಯಗಳಲ್ಲಿಯೂ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ಸೋಲಿನ ಮೇಲೆ ಸೋಲು ಕಂಡಿದ್ದು ಈವರೆಗೂ ಟೂರ್ನಿಯಲ್ಲಿ ಗೆಲುವಿನ ರುಚಿ ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದು ಆರ್‌ಸಿಬಿ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಆಕಾಶ್ ಚೋಪ್ರ ಈ ಸೋಲಿಗೆ ಆರ್‌ಸಿಬಿ ಆಟಗಾರ್ತಿಯರು ತಮ್ಮನ್ನೇ ಹಿಣೆ ಮಾಡಿಕೊಳ್ಳಬೇಕು ಎಂದಿದ್ದಾರೆ. "ಐದು ಪಂದ್ಯಗಳ ಬಳಿಕವೂ ಆರ್‌ಸಿಬಿ ತಂಡ ಕನಿಷ್ಠ ಒಂದು ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಈ ಪಂದ್ಯದಲ್ಲಿಯೂ ಮತ್ತೆ ಈ ಹಿಂದಿನಂತೆಯೇ ಪುನರಾವರ್ತನೆಯಾಗಿದೆ. ಆರ್‌ಸಿಬಿ ಈ ಪಂದ್ಯದಲ್ಲಿ ಮೂರು ಬದಲಾವಣೆ ಮಾಡಿಕೊಂಡಿತು. ಯಾರು ಇಷ್ಟು ಬದಲಾವಣೆ ಮಾಡಿಕೊಳ್ಳುತ್ತಾರೆ? ನಿಮಗೆ ನಿಮ್ಮ ತಂಡದ ಹೊಂದಾಣಿಕೆ ತಿಳಿದಿಲ್ಲವಾದರೆ ಮಾತ್ರವೇ ಈ ರೀತಿಯಾಗುತ್ತದೆ. ತಂಡದ ಆಟಗಾರ್ತಿಯರ ಬಲದ ಬಗ್ಗೆ ಅವರಿಗೆ ಇನ್ನೂ ಜ್ಞಾನವಿಲ್ಲ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ.
ಸೋಲಿಗೆ ನಾನೇ ಹೊಣೆ ಹೋರುತ್ತೇನೆ: 5ನೇ ಸೋಲಿನ ಬಳಿಕ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಹೇಳಿಕೆ
ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೋಲು ಕಂಡಿತ್ತು. ಸಾಕಷ್ಟು ಪೈಪೋಟಯಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮ ಹಂತದವರೆಗೆ ಹೋರಾಡಿದ್ದ ಮಂಧಾನ ಬಳಿಗ ಅಂತಿಮ ಕೊನೆಯ ಎರಡು ಎಸೆತಗಳು ಬಾಕಿಯಿರುವಂತೆಯೇ ಸೋಲು ಕಂಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಭಾರೀ ಹಿನ್ನಡೆ ಕಂಡಿತು.
"ದಿಶಾ ಕಸತ್ ಆರಂಭದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅದಾದ ಬಳಿಕ ಅವರನ್ನು ಆಡುವ ಬಳಗದಿಂದ ಕೈಬಿದಲಾಗಿತ್ತು. ಇದೀಗ ಮತ್ತೆ ಅವರು ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗೆ ಬ್ಯಾಟಿಂಗ್ ದೊರೆತಿಲ್ಲ. ಅವರನ್ನು ಮತ್ತೆ ಆಡಿಸಿದ ಉದ್ದೇಶವೇನು? ಒಂದು ಉತ್ತಮ ಸಂಗತಿಯೆಂದರೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಕ್ರಮಾಂಕ ಸೂಕ್ತವಾಗಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ ಚೋಪ್ರ.
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆಯೂ ಮಾತನಾಡಿದ್ದಾರೆ. "ಸ್ಮೃತಿ ಮಂಧಾನ ಬ್ಯಾಟ್‌ನಿಂದ ರನ್ ಹರಿಸು ಬರುತ್ತಿಲ್ಲ. ಅವರು ತಮ್ಮ ಫಾರ್ಮ್‌ಗೆ ಫ್ರೆಂಡ್ ರಿಕ್ಷೆಸ್ಟ್ ಕಳಿಸಿದ್ದರು ಕೂಡ ಈವರೆಗೂ ಅದು ಸ್ವೀಕೃತವಾಗಿಲ್ಲ" ಎಂದು ಆಕಾಶ್ ಚೋಪ್ರ ಸ್ಮೃತಿ ಮಂಧಾನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾರ್ಚ್ 13 ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪೈಪೋಟಿಯ ಪ್ರದರ್ಶನ ನೀಡಿದರೂ ಆರ್‌ಸಿಬಿ ಸೋಲಿ ಕಂಡಿತ್ತು. ಬ್ಯಾಟಿಂಗ್‌ನಲ್ಲಿ ಹಿನ್ನಡೆ ಕಂಡ ಆರ್‌ಸಿಬಿ ತಂಡ ಮೊದಲ 14 ಓವರ್‌ಗಳಲ್ಲಿ ಕೇವಲ 68 ರನ್ ಮಾತ್ರವೇ ಗಳಿಸಿತ್ತು. ಈ ಅವಧಿಯಲ್ಲಿ 4.85ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡ ಮೂರು ಪ್ರಮುಖ ವಿಕೆಟ್‌ಗಳನ್ನು ಕೂಡ ಕಳೆದುಕೊಂಡಿತ್ತು. ಸ್ಮೃತಿ ಮಂಧಾನ, ಸೋಫಿ ಡಿವೈನ್ ಹಾಗೂ ಹೋದರ್ ನೈಟ್ ಅದಾಗಲೇ ವಿಕೆಟ್ ಕಳೆದುಕೊಂಡಿದ್ದರು.
ಆದರೆ ಅದಾದ ಬಳಿಕ ಎಲೀಸ್ ಪೆರ್ರಿ ಹಾಗೂ ರಿಚಾ ಘೋಷ್ ಉತ್ತಮ ಪ್ರದರ್ಶನ ನೀಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಕೆಲ ಕಠಿಣ ಸಂದರ್ಭಗಳನ್ನು ಎದುರಿಸಿತು. ಆದರೆ ಅಂತಿಮವಾಗಿ ಎರಡು ಎಸೆತಗಳು ಇರುವಂತೆಯೇ ಡಿಸಿ ಗೆದ್ದು ಬೀಗಿದೆ. ಈ ಹೋರಾಟಕ್ಕೆ ತಂಡದ ಬೌಲರ್‌ಗಳ ಪ್ರದರ್ಶನವನ್ನು ಕೊಂಡಾಡಿದ್ದಾರೆ ನಾಯಕಿ ಸ್ಮೃತಿ ಮಂಧಾನ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications