For Quick Alerts
ALLOW NOTIFICATIONS  
For Daily Alerts
 

WPL 2023: ಕೊನೆಗೂ ಮಹಿಳಾ ತಂಡದ ನಾಯಕಿ, ಉಪನಾಯಕಿಯನ್ನು ಘೋಷಿಸಿದ ಡೆಲ್ಲಿ ಕ್ಯಾಪಿಟಲ್ಸ್

WPL 2023: Meg Lanning Appointed As The Captain Of Delhi Capitals

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್(WPL) ಪಂದ್ಯಾವಳಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಇದೇ ಶನಿವಾರ, ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಉದ್ಘಾಟನಾ ಟೂರ್ನಿಯ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.

ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿರುವ ಐದು ತಂಡಗಳೆಂದರೆ, ಈಗಾಗಲೇ ಪುರುಷ ಐಪಿಎಲ್ ತಂಡಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಹೊಸ ಸೇರ್ಪಡೆಯಾಗಿವೆ.

WPL 2023: ಮಹಿಳಾ ಪ್ರೀಮಿಯರ್ ಲೀಗ್ ಟಿಕೆಟ್ ಬುಕ್ಕಿಂಗ್ ಎಲ್ಲಿ, ಹೇಗೆ?; ಟಿಕೆಟ್ ಬೆಲೆಗಳ ಸಂಪೂರ್ಣ ಮಾಹಿತಿ

2023ರ ಮಹಿಳಾ ಪ್ರೀಮಿಯರ್ ಲೀಗ್ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರೆಬೋರ್ನ್ ಸ್ಟೇಡಿಯಂಗಳಲ್ಲಿ ಒಟ್ಟು 22 ಪಂದ್ಯಗಳನ್ನು ಆಡಿಸಲಾಗುತ್ತದೆ. ಈಗಾಗಲೇ ಎಲ್ಲಾ ಐದೂ ತಂಡಗಳು ಮುಂಬೈ ತಲುಪಿವೆ.

ಎಲ್ಲಾ ಐದೂ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ನಾಲ್ಕು ತಂಡಗಳು ತಮ್ಮ ನಾಯಕಿಯನ್ನು ಘೋಷಿಸಿದ್ದವು. ಇದೀಗ ಅಂತಿಮವಾಗಿ ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ವಿಜೇತ ನಾಯಕಿ ಮೆಗ್ ಲ್ಯಾನ್ನಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದ್ದು, ಇವರಿಗೆ ಉಪನಾಯಕಿಯಾಗಿ ಭಾರತ ಜೆಮಿಮಾ ರೋಡ್ರಿಗಸ್ ಅವರನ್ನು ನೇಮಕ ಮಾಡಲಾಗಿದೆ.

WPL 2023: Meg Lanning Appointed As The Captain Of Delhi Capitals

ಮಹಿಳಾ ಪ್ರೀಮಿಯರ್ ಮೆಗ್ ಲ್ಯಾನ್ನಿಂಗ್‌ರನ್ನು 1.1 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಅವರು ಆಸ್ಟ್ರೇಲಿಯಾ ತಂಡಕ್ಕೆ ಅತ್ಯದ್ಭುತ ನಾಯಕಿಯಾಗಿದ್ದು, ಕೇಪ್ ಟೌನ್‌ನಲ್ಲಿ 2023ರ ಮಹಿಳಾ ಟಿ20 ವಿಶ್ವಕಪ್ ವಿಜಯಕ್ಕೆ ಕಾರಣರಾದರು. ಆಸ್ಟ್ರೇಲಿಯಾ ಮಹಿಳಾ ತಂಡದ ರನ್ ಮಷಿನ್ ಆಗಿರುವ ಮೆಗ್ ಲ್ಯಾನ್ನಿಂಗ್, ಅಂತಾರಾಷ್ಟ್ರೀಯ ವೈಟ್-ಬಾಲ್ ಕ್ರಿಕೆಟ್‌ನಲ್ಲಿ 17 ಶತಕಗಳೊಂದಿಗೆ 8,000ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.

ಮೆಗ್ ಲ್ಯಾನ್ನಿಂಗ್ ಮುನ್ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 2.2 ಕೋಟಿಗೆ ತಂಡದ ಅತ್ಯಂತ ದುಬಾರಿ ಆಟಗಾರ್ತಿಯಾಗಿರುವ ಜೆಮಿಮಾ ರೋಡ್ರಿಗಸ್ ಮತ್ತು ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಶಫಾಲಿ ವರ್ಮಾ ಇದ್ದಾರೆ. ಇವರ ಜೊತೆಗೆ 1.5 ಕೋಟಿ ರೂ.ಗೆ ಖರೀದಿಸಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರಿಝನ್ನೆ ಕಾಪ್ ತಂಡದ ಅತ್ಯುತ್ತಮ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ.

WPL 2023: Meg Lanning Appointed As The Captain Of Delhi Capitals

WPL 2023ರ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ತಂಡ
ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್ (ನಾಯಕಿ), ಜೆಮಿಮಾ ರೋಡ್ರಿಗಸ್ (ಉಪನಾಯಕಿ), ಆಲಿಸ್ ಕ್ಯಾಪ್ಸೆ, ಶಿಖಾ ಪಾಂಡೆ, ಜೆಸ್ ಜೊನಾಸ್ಸೆನ್, ಲಾರಾ ಹ್ಯಾರಿಸ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತನಿಯಾ ಭಾಟಿಯಾ, ಮಿನ್ನು ಮಣಿ, ಪೂನಂ ಯಾದವ್, ಸ್ನೇಹಾ ದೀಪ್ತಿ, ಟಿಟಾಸ್ ಸಾಧು, ತಾರಾ ನಾರ್ರಿಸ್, ಜಸಿಯಾ ಅಖ್ತರ್, ಅಪರ್ಣಾ ಮೊಂಡಲ್.

Story first published: Thursday, March 2, 2023, 15:33 [IST]
Other articles published on Mar 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+