For Quick Alerts
ALLOW NOTIFICATIONS  
For Daily Alerts
 

IPL ಆರಂಭವಾದ 15 ವರ್ಷಗಳ ಬಳಿಕ WPL: ಚೊಚ್ಚಲ ಆವೃತ್ತಿಯ ಐಪಿಎಲ್‌ನ ನಾಯಕರು ಈಗ ಎಲ್ಲಿದ್ದಾರೆ?

WPL inauguration after 15 years of IPL 1st season: 1st ipl season captains and Where Are They Now

ಭಾರತೀಯ ಕ್ರಿಕೆಟ್ ವಿಶ್ವ ಕ್ರಿಕೆಟ್‌ಗೆ ಐಪಿಎಲ್ ಪರಿಚಯಿಸಿದ 15 ವರ್ಷಗಳ ಬಳಿಕ ಮಹಿಳಾ ಕ್ರಿಕೆಟಿಗರಿಗಾಗಿ ಡಬ್ಲ್ಯುಪಿಎಲ್ ಆಯೋಜಿಸುತ್ತಿದೆ. ಸಾಕಷ್ಟು ವರ್ಷಗಳ ಬೇಡಿಕೆಯ ಬಳಿಕ ಕಡೆಗೂ ಈ ಬಹು ನಿರೀಕ್ಷಿತ ಟೂರ್ನಿಯ ಆಯೋಜನೆಗೆ ನಿರ್ಧರಿಸಿದ್ದು ಟೂರ್ನಿಗೆ ಈಗ ಚಾಲನೆಯೂ ದೊರೆತಿದೆ. ವಿಶ್ವ ಕ್ರಿಕೆಟ್‌ನಲ್ಲಿ ಐಪಿಎಲ್ ಈಗ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿರುವಂತೆಯೇ ಚೊಚ್ಚಲ ಆವೃತ್ತಿಯ ಆರಂಭವಾಗುತ್ತಿದ್ದಂತೆಯೇ ಡಬ್ಲ್ಯುಪಿಎಲ್ ಕೂಡ ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಮೈಲಿಗಲ್ಲುಗಳನ್ನು ದಾಖಲಿಸಿದೆ.

ಆದರೆ ಐಪಿಎಲ್ ಈಗ ಕೇವಲ ಕ್ರಿಕೆಟ್ ಮಾತ್ರವಲ್ಲ ಒಟ್ಟಾರೆ ಕ್ರೀಡಾ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಕೂಟ ಎನಿಸಿಕೊಳ್ಳಲಿದೆ ಎಂಬುದು ಕೆಲ ಕ್ರೀಡಾ ತಜ್ಞರ ಅಭಿಪ್ರಾಯ.

ವುಮೆನ್ಸ್ ಪ್ರೀಮಿಯರ್ ಲೀಗ್ ಐದು ತಂಡಗಳ ಟೂರ್ನಿಯಾಗಿ ಆರಂಭವಾಗುತ್ತಿದ್ದರೆ ಇಂಡಿಯನ್ ಪ್ರೀಮಿಯರ್ ಲೀಗ್ 2008ರಲ್ಲಿ 8 ತಂಡಗಳ ಟೂರ್ನಿಯಾಗಿ ಆರಂಭವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಕಿಂಗ್ಸ್ xi ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆರಂಭದ ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ಐಪಿಎಲ್‌ನ ಆರಂಭಿಕ ಆವೃತ್ತಿಯ ಟೂರ್ನಿಯಲ್ಲಿ ತಂಡಗಳನ್ನು ನಾಯಕರಾಗಿ ಮುನ್ನಡೆಸಿದ್ದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ? ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಮುಂದೆ ಓದಿ.

1. ಶೇನ್ ವಾರ್ನ್- ರಾಜಸ್ಥಾನ ರಾಯಲ್ಸ್

1. ಶೇನ್ ವಾರ್ನ್- ರಾಜಸ್ಥಾನ ರಾಯಲ್ಸ್

ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಮೊದಲ ಆವೃತ್ತಿಯ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಚೊಚ್ಚಲ ಆವೃತ್ತಿಯ ಚಾಂಪಿಯನ್ ಎನಿಸಿಕೊಂಡಿತ್ತು. ಶೇನ್ ವಾರ್ನ್ ಹಾಗೂ ಯೂಸುಫ್ ಪಠಾಣ್ ಈ ಟೂರ್ನಿಯಲ್ಲಿ ಹೀರೋಗಳು ಆರ್‌ಆರ್ ತಂಡ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ನಿವೃತ್ತಿಯ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇನ್ ವಾರ್ನ್ 2022ರ ಮಾರ್ಚ್ 4ರಂದು ಹೃದಯಾಘಾತದಿಂದ ನಿಧನರಾದರು.

2. ಎಂಎಸ್ ಧೋನಿ- ಚೆನ್ನೈ ಸೂಪರ್ ಕಿಂಗ್ಸ್

2. ಎಂಎಸ್ ಧೋನಿ- ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಮೊದಲ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೇರಿಸುವಲ್ಲಿ ಸಫಲವಾಗಿದ್ದರು. ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಧೋನಿ ನಾಲ್ಕು ಬಾರಿ ಚೆನ್ನೈ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧೋನಿ ಈಗಲೂ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದು ಐಪಿಎಲ್ ಆರಂಭವಾದರೆ 16ನೇ ಆವೃತ್ತಿಯಲ್ಲೂ ಚೆನ್ನೈ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

3. ಯುವರಾಜ್ ಸಿಂಗ್-ಕಿಂಗ್ಸ್ XI ಪಂಜಾಬ್

3. ಯುವರಾಜ್ ಸಿಂಗ್-ಕಿಂಗ್ಸ್ XI ಪಂಜಾಬ್

ಟಿ20 ಮಾದರಿಗೆ ಹೇಳಿ ಮಾಡಿಸಿದಂತಾ ಆಟಗಾರ ಎಂದು ಯುವರಾಜ್ ಸಿಂಗ್ ಅವರು ಖ್ಯಾತವಾಗಿದ್ದರೂ ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ ಎಂಬುದು ನಂಬಲು ಕಷ್ಟವಾದರೂ ಸತ್ಯ. ಮೊದಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಓವರ್‌ನ ಎಲ್ಲಾ ಎಸೆಗಳಲ್ಲಿ ಸಿಕ್ಸರ್ ಚಚ್ಚಿ ಟಿ20 0ಕ್ರಿಕೆಟ್‌ನಲ್ಲಿ ಸೆನ್ಸೇಶನ್ ಮೂಡಿಸಿದ್ದ ಯುವರಾಜ್ ಸಿಂಗ್ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಚೊಚ್ಚಲ ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಸೆಮಿ ಫೈನಲ್‌ವರೆಗೆ ತಲುಪಿಸುವಲ್ಲಿಯೂ ಯಶಸ್ವಿಯಾಗಿದ್ದರು. ಸದ್ಯ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ.

4. ವೀರೇಂದ್ರ ಸೆಹ್ವಾಗ್- ಡೆಲ್ಲಿ ಡೇರ್ ಡೆವಿಲ್ಸ್

4. ವೀರೇಂದ್ರ ಸೆಹ್ವಾಗ್- ಡೆಲ್ಲಿ ಡೇರ್ ಡೆವಿಲ್ಸ್

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಎಂದು ಹೆಸರು ಬದಲಾಯಿಸಿಕೊಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಚೊಚ್ಚಲ ಆವೃತ್ತಿಯಲ್ಲಿ ನಾಯಕನಾಗಿದ್ದವರು ವೀರೇಂದ್ರ ಸೆಹ್ವಾಗ್. ಅನೇಕ ಪ್ರತಿಭಾನ್ವಿತ ಆಟಗಾರರ ಪಡೆಯನ್ನು ಹೊಂದಿತ್ತು ಡೆಲ್ಲಿ ತಂಡ. ಗೌತಮ್ ಗಂಭೀರ್, ಎಬಿ ಡಿವಿಲಿಯರ್ಸ್, ಶೋಯೆಬ್ ಮಲಿಕ್ ಅವರಂತಾ ಆಟಗಾರರು ತಂಡದಲ್ಲಿದ್ದರು. ಸೆಹ್ವಾಗ್ ನಾಯಕತ್ವದಲ್ಲಿ ಮೊದಲ ಆವೃತ್ತಿಯಲ್ಲಿ ಡೆಲ್ಲಿ ತಂಡ ಸೆಮಿ ಫೈನಲ್ ಪ್ರವೇಶಿಸುವಲ್ಲಿಯೂ ಯಶಸ್ವಿಯಾಗಿತ್ತು. 2015ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿರುವ ಸೆಹ್ವಾಗ್ ಸಚಿನ್ ತೆಂಡೂಲ್ಕರ್ ರೀತಿಯಲ್ಲೇ ಅನೇಕ ಪ್ರದರ್ಶನ ಪಂದ್ಯಗಳನ್ನು ಆಡುತ್ತಿದ್ದಾರೆ. ಅಲ್ಲದೆ ಕಾಮೆಂಟೇಟರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

5. ಸಚಿನ್ ತೆಂಡೂಲ್ಕರ್- ಮುಂಬೈ ಇಂಡಿಯನ್ಸ್

5. ಸಚಿನ್ ತೆಂಡೂಲ್ಕರ್- ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರೆಂಜ್ ಟೋಫಿಯನ್ನು ಧರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಆರಂಭಕ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಸಚಿನ್ ಕೆಲ ಪಂದ್ಯಗಳಲ್ಲಿ ಆಡಿರಲಿಲ್ಲ. ಮೊದಲ ಆವೃತ್ತಿಯಲ್ಲಿ ಮುಂಬೈ ಸೆಮಿ ಫೈನಲ್ ಪ್ರವೇಶಿವಲ್ಲಿಯೂ ವಿಫಲವಾಗಿತ್ತು. ಇನ್ನು ಸದ್ಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದುಕೊಂಡಿರುವ ಸಚಿನ್ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿದ್ದು ಕೆಲ ಚಾರಿಟಿ ಪಂದ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ.

6. ಸೌರವ್ ಗಂಗೂಲಿ- ಕೊಲ್ಕತ್ತಾ ನೈಟ್ ರೈಡರ್ಸ್

6. ಸೌರವ್ ಗಂಗೂಲಿ- ಕೊಲ್ಕತ್ತಾ ನೈಟ್ ರೈಡರ್ಸ್

ಫ್ರಿನ್ಸ್ ಆಫ್ ಕೊಲ್ಕತ್ತಾ ಎಂದೇ ಖ್ಯಾತರಾಗಿರುವ ಸೌರವ್ ಗಂಗೂಲಿ ಮೊದಲ ಆವೃತ್ತಿಯಲ್ಲಿ ಶಾರೂಖ್ ಖಾನ್ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಟೂರ್ನಿಯ ಆರಂಭದಲ್ಲಿನ ಅಬ್ಬರದ ಹೊರತಾಗಿಯೂ ಮೊದಲ ಟೂರ್ನಿಯಲ್ಲಿ ಕೊಲ್ಕತ್ತಾ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದ್ದು ವಿಪರ್ಯಾಸ. ಬಳಿಕ ಕೊಲ್ಕತ್ತಾ ತಂಡವನ್ನು ತೊರೆದ ಗಂಗೂಲಿ ಪುಣೆ ತಂಡದ ಭಾಗವಾಗಿ ಕೆಲ ವರ್ಷ ಇದ್ದರು. ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಸೌರವ್ ಗಂಗೂಲಿ ಆ ಜವಾಬ್ಧಾರಿಯಿಂದ ಕೆಲವೇ ತಿಂಗಳ ಹಿಂದೆ ಹೊರಬಂದಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಮುಖ ಹುದ್ದೆ ವಹಿಸಿಕೊಂಡಿದ್ದಾರೆ.

7. ರಾಹುಲ್ ದ್ರಾವಿಡ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

7. ರಾಹುಲ್ ದ್ರಾವಿಡ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

ಪ್ರಥಮ ಆವೃತ್ತಿಯಲ್ಲಿ ಅನೇಕ ಸ್ಟಾರ್ ಆಟಗಾರರ ಪಡೆಯನ್ನು ಹೊಂದಿದ್ದರೂ ಆರ್‌ಸಿಬಿ ತಂಡ ನಿರಾಸೆಯನ್ನು ಅನುಭವಿಸಿತ್ತು. ಅನುಭವಿ ಆಟಗಾರ ರಾಹುಲ್ ದ್ರಾವಿಡ್ ನಾಯಕತ್ವ ತಂಡಕ್ಕಿದ್ದರೂ ತಂಡಕ್ಕೆ ಯಶಸ್ಸು ದೊರೆತಿರಲಿಲ್ಲ. ಆ ಆವೃತ್ತಿಯಲ್ಲಿ ಆರ್‌ಸಿಬಿ 7ನೇ ಸ್ಥಾನದೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಿತ್ತು. ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದ ದ್ರಾವಿಡ್ ಬಳಿಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿಕೊಂಡರು. ಸದ್ಯ ನಿವೃತ್ತಿ ಹೊಂದಿರುವ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ಧಾರಿ ನಿರ್ವಹಿಸುತ್ತಿದ್ದಾರೆ.

8. ವಿವಿಎಸ್ ಲಕ್ಷ್ಮಣ್- ಡೆಕ್ಕನ್ ಚಾರ್ಜರ್ಸ್

8. ವಿವಿಎಸ್ ಲಕ್ಷ್ಮಣ್- ಡೆಕ್ಕನ್ ಚಾರ್ಜರ್ಸ್

ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದ ಫ್ರಾಂಚೈಸಿಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಕೂಡ ಒಂದಾಗಿದ್ದು ಮೊದಲ ಆವೃತ್ತಿಯಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದವರು ವಿವಿಎಸ್ ಲಕ್ಷ್ಮಣ್. ಆದರೆ ಮೊದಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಅಂತಿಮ ಸ್ಥಾನವನ್ನು ಗಳಿಸಿತ್ತು. ಲಕ್ಷ್ಮಣ್ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ವಿಫಲವಾಗಿದ್ದರು. ಹೀಗಾಗಿ ಎರಡನೇ ಆವೃತ್ತಿಗೆ ಲಕ್ಷ್ಮಣ್ ನಾಯಕನಾಗಿ ಮುಂದುವರಿಯಲಿಲ್ಲ. ಮೊದಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕರಾಗಿದ್ದ ಲಕ್ಷ್ಮಣ್ ಸದ್ಯ ಬಿಸಿಸಿಐನಲ್ಲಿ ಮಹತ್ವದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ 'ಎನ್‌ಸಿಎ'ನ ಮುಖ್ಯಸ್ಥರಾಗಿ ಲಕ್ಷಣ್ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

Story first published: Saturday, March 4, 2023, 16:44 [IST]
Other articles published on Mar 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+