ಬೆಂಗಾಲ್‌ನಿಂದ NOC ಪಡೆದ ವೃದ್ದಿಮಾನ್ ಸಾಹಾ: ತ್ರಿಪುರಾದ ಮೆಂಟರ್ ಹಾಗೂ ಕ್ಯಾಪ್ಟನ್ ಆಗಿ ನೇಮಕ

ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹಾ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್‌ನಿಂದ ಶನಿವಾರ (ಜುಲೈ 2) ನಿರಾಕ್ಷೇಪಣಾ ಪ್ರಮಾಣಪತ್ರ (ಎಒಸಿ) ಪಡೆದಿದ್ದಾರೆ. ಕ್ರಿಕೆಟ್ ಮಂಡಳಿಯೊಂದಿಗಿನ ವೈಮನಸ್ಸಿನ ಹಿನ್ನಲೆಯಲ್ಲಿ ಈ ಹಿಂದೆ ಸಾಹಾ ಎನ್‌ಒಸಿಯನ್ನ ಕೋರಿದ್ದರು.
ಎಒಸಿಯನ್ನ ಪಡೆದ ನಂತರ ವೃದ್ದಿಮಾನ್ ಸಾಹಾ ಇನ್ಮುಂದೆ ತ್ರಿಪುರ ಪರ ಆಡಲಿದ್ದು, ತಂಡದ ಮೆಂಟರ್ ಹಾಗೂ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ.

ಬೆಂಗಾಲ್ ತಂಡದ ಪರ ಬದ್ಧತೆಯನ್ನ ಪ್ರಶ್ನಿಸಿದ್ದ ಸಿಎಬಿ ಕಾರ್ಯದರ್ಶಿ
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹಾ ಬದ್ಧತೆಯ ಕುರಿತಾಗಿ ಸಿಎಬಿ ಜಂಟಿ ಕಾರ್ಯದರ್ಶಿ ದೇಬಬ್ರತ ದಾಸ್ ಅವರು ಪ್ರಶ್ನಿಸಿದ್ದರು. ಇದು ಅನುಭವಿ ಬ್ಯಾಟರ್‌ಗೆ ಸಾಕಷ್ಟು ಬೇಸರ ತರಿಸಿದ್ದಲ್ಲದೆ, ರಾಜ್ಯಕ್ಕಾಗಿ ಹಲವು ವರ್ಷಗಳ ಆಡಿದರೂ ಇಂತಹ ಹೇಳಿಕೆಯನ್ನ ಕೇಳಬೇಕಾಯಿತು ಎಂದು ಅವರು ಹೇಳಿದ್ದರು.

ರಣಜಿ ಟ್ರೋಫಿಯಿಂದ ಹಿಂದೆ ಸರಿದಿದ್ದರು
ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು ಕಳೆದ ರಣಜಿ ಋತುವಿನಲ್ಲಿ ದೂರ ಉಳಿಯಲು ಬಯಸಿದ್ದರು. ಟೀಂ ಇಂಡಿಯಾಗೆ ಸಹಾ ಅವರ ಸೇವೆ ಅಗತ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾವಿಸಿರುವ ಹಿನ್ನೆಲೆಯಲ್ಲಿ ಸಾಹಾ ಈ ನಿರ್ಧಾರ ಕೈಗೊಂಡಿದ್ದರು. ಆದ್ರೆ ಇದನ್ನ ತಪ್ಪಾಗಿ ಭಾವಿಸಿದ ಸಿಎಬಿ ಟೀಕೆಗಳು ಸಾಹಾ ಅವರನ್ನ ರಾಜ್ಯದ ತಂಡದಿಂದ ಹೊರಬರುವಂತೆ ಮಾಡಿತು.
ಟೆಸ್ಟ್ ಕ್ರಿಕೆಟ್: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್, ರನ್ ನೀಡಿದ ಬೌಲರ್ಸ್ ಪಟ್ಟಿ

ವೃದ್ದಿಮಾನ್ ಸಾಹಾಗೆ ಶುಭ ಕೋರಿದ ಸಿಎಬಿ
"ಮಿ. ವೃದ್ಧಿಮಾನ್ ಸಹಾ ಅವರು ಸಿಎಬಿಗೆ ಬಂದರು ಮತ್ತು ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ ಸಂಘದಿಂದ ಎನ್ಒಸಿ ಕೋರಿದರು. ಸಿಎಬಿ ಸಹಾ ಅವರ ಕೋರಿಕೆಗೆ ಒಪ್ಪಿಗೆ ನೀಡಿದ್ದು, ಬೇರೆ ರಾಜ್ಯಕ್ಕಾಗಿ ಆಡುವುದಕ್ಕಾಗಿ ಅವರಿಗೆ ಎನ್‌ಒಸಿ ಅನ್ನು ಒದಗಿಸಿತು. ಸಿಎಬಿ ಸಹ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದೆ" ಎಂದು ಸಿಎಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 35ರನ್ ನೀಡಿದ ಸ್ಟುವರ್ಟ್ ಬ್ರಾಡ್: ಬುಮ್ರಾ ವಿಶ್ವದಾಖಲೆ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಹಾ ರೆಕಾರ್ಡ್
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಹಾ ಅವರ ಅಂಕಿ-ಅಂಶಗಳನ್ನ ನೋಡಿದ್ರೆ, ಬಲಗೈ ಬ್ಯಾಟರ್ 122 ಪಂದ್ಯಗಳನ್ನು ಆಡಿದ್ದಾರೆ ಮತ್ತು ಸುಮಾರು 42 ರ ಅತ್ಯುತ್ತಮ ಸರಾಸರಿಯಲ್ಲಿ ಒಟ್ಟು 6423 ರನ್ ಗಳಿಸಿದ್ದಾರೆ. ಇವರ ವೃತ್ತಿಜೀವನದಲ್ಲಿ 38 ಅರ್ಧಶತಕ ಮತ್ತು 13 ಶತಕಗಳನ್ನು ಸಹ ಹೊಡೆದಿದ್ದಾರೆ. ಗರಿಷ್ಠ ಅಜೇಯ 203ರನ್ ಕಲೆಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications