WTC Final: ಇಂಗ್ಲೆಂಡ್ ತಲುಪಿದ ಟೀಮ್ ಇಂಡಿಯಾ ಆಟಗಾರರ ಫೋಟೋಗಳು ವೈರಲ್

ಜೂನ್ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ಈಗಾಗಲೇ ಸೌತಂಪ್ಟನ್ ತಲುಪಿದೆ.
ನ್ಯೂಜಿಲೆಂಡ್‌ಗೆ ಅನುಕೂಲ ಹೆಚ್ಚು ಎನ್ನುವವರು ಯಾವುದೇ ಕಾರಣಕ್ಕೂ ವಿಮಾನ ಹತ್ತಬೇಡಿ ಎಂದಿದ್ದ ವಿರಾಟ್ ಕೊಹ್ಲಿ!
ಮುಂಬೈನಲ್ಲಿ ಕ್ವಾರಂಟೈನ್ ನಿಯಮವನ್ನು ಅನುಸರಿಸಿ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್ ತಲುಪಿರುವ ಟೀಮ್ ಇಂಡಿಯಾ ಆಟಗಾರರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಂಡದ ಆಟಗಾರ ವೃದ್ಧಿಮಾನ್ ಸಾಹ ಸೌತಾಂಪ್ಟನ್ ಕ್ರೀಡಾಂಗಣದ ಜೊತೆಗಿನ ಸೆಲ್ಫಿ ಚಿತ್ರವನ್ನು ಹಂಚಿಕೊಂಡಿದ್ದರೆ, ರೋಹಿತ್ ಶರ್ಮಾ ರಿಷಬ್ ಪಂತ್ ಜೊತೆಗಿನ ಚಿತ್ರವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಕನ್ನಡಿಗ ಕೆಎಲ್ ರಾಹುಲ್ ವಿಮಾನ ನಿಲ್ದಾಣದಲ್ಲಿನ ಚಿತ್ರವನ್ನು ಹಂಚಿಕೊಂಡಿದ್ದರೆ, ತಂಡದ ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ ಸೌತಂಪ್ಟನ್ ಕ್ರೀಡಾಂಗಣದಲ್ಲಿನ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಆಟಗಾರರ ಜೊತೆ ಇಶಾಂತ್ ಶರ್ಮಾ ಮತ್ತು ಅವರ ಪತ್ನಿಯ ಚಿತ್ರ, ಪ್ರಸಿದ್ಧ್ ಕೃಷ್ಣ ಸೆಲ್ಫಿ ಚಿತ್ರ ಹಾಗೂ ಮಯಾಂಕ್ ಅಗರ್ವಾಲ್ ಚಿತ್ರಗಳು ಕೂಡ ವೈರಲ್ ಆಗಿವೆ.
ನೋಡಿ, ಆತನೇ ಬೇರೆ ನಾನೇ ಬೇರೆ; ಕೊಹ್ಲಿ ಜೊತೆ ಹೋಲಿಕೆ ಮಾಡುವವರಿಗೆ ಬಾಬರ್ ಅಜಮ್ ಹೇಳಿದ್ದಿಷ್ಟು
ಮೂಲಗಳ ಪ್ರಕಾರ ಐದು ದಿನಗಳ ಕಾಲ ಟೀಮ್ ಇಂಡಿಯಾ ಆಟಗಾರರು ಕ್ವಾರಂಟೈನ್ ನಿಯಮವನ್ನು ಅನುಸರಿಸಲಾಗಿದ್ದು ತದನಂತರ 3 ಕೊರೊನಾ ಪರೀಕ್ಷೆಗಳಲ್ಲಿ ನೆಗೆಟಿವ್ ರಿಪೋರ್ಟ್ ಬಂದರೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಅಭ್ಯಾಸ ನಡೆಸಲು ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications