ಸಚಿನ್ ತೆಂಡೂಲ್ಕರ್ ದಾಖಲೆಯ ಮೇಲೆ ಯಶಸ್ವಿ ಜೈಸ್ವಾಲ್ ಕಣ್ಣು
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್. ಟೆಸ್ಟ್ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸಿರುವ ಆಟಗಾರ. ಪ್ರಸಕ್ತ ವರ್ಷವಂತೂ ಯಶಸ್ವಿ ಜೈಸ್ವಾಲ್ ಅವರ ಆರ್ಭಟ ಜೋರಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಒಂದೊಂದೆ ಮೈಲಿಗಲ್ಲು ನಿರ್ಮಿಸುತ್ತಲೇ ಇದ್ದಾರೆ. ಈಗ ತಮ್ಮ ರೋಲ್ ಮಾಡೆಲ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಭಾರತದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಎಲ್ಲರ ಚಿತ್ತ ಕದ್ದಿದ್ದರು. ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಯಶಸ್ವಿ ಜೈಸ್ವಾಲ್ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಜೈಸ್ವಾಲ್ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ಯಶಸ್ವಿ ಜೈಸ್ವಾಲ್ ಈಗ ಸಚಿನ್ ತೆಂಡೂಲ್ಕರ್ ಅವರ ಹಳೆಯ ದಾಖಲೆಯನ್ನು ಮುರಿಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ದಾಖಲೆಯ ಮೇಲೆ ಯಶಸ್ವಿ ಕಣ್ಣು
ಈ ವರ್ಷ ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಸಾಲು ಸಾಲು ಟೆಸ್ಟ್ ಸರಣಿಗಳನ್ನು ಆಡಬೇಕಿದೆ. ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಫಿಟ್ ಆಗಿದ್ದಲ್ಲಿ, ಇವರಿಗೆ ಸ್ಥಾನ ಸಿಗುವುದು ಫಿಕ್ಸ್. ಈಗ ಸಿಗುವ ಬೆರಳೆಣಿಕೆ ಪಂದ್ಯಗಳಲ್ಲಿ ಜೈಸ್ವಾಲ್ ರನ್ ಮಹಲ್ ಕಟ್ಟಲ್ಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದೇ ಅಕ್ಟೋಬರ್ 16ರಿಂದ ಭಾರತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾದಾಟವನ್ನು ನಡೆಸಲಿದೆ. ಇನ್ನು ಈ ಸರಣಿ ಮುಗಿದ ಬಳಿಕ ಬ್ಲ್ಯೂ ಬಾಯ್ಸ್ ಆಸೀಸ್ ಪ್ರವಾಸವನ್ನು ಬೆಳೆಸಲಿದ್ದಾರೆ.
ಸಚಿನ್ ದಾಖಲೆಯ ಹತ್ತಿರದಲ್ಲಿ ಯಶಸ್ವಿ
ಯಶಸ್ವಿ ಜೈಸ್ವಾಲ್ ಈ ವರ್ಷ ಗರಿಷ್ಠ ರನ್ ಬಾರಿಸಿದ ಭಾರತದ ಆಟಗಾರ. ಇವರು ಈ ವರ್ಷ ಆಡಿದ 9 ಟೆಸ್ಟ್ ಪಂದ್ಯಗಳಲ್ಲಿ 929 ರನ್ ಸಿಡಿಸಿದ್ದಾರೆ. ಇವರು ಈಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 2010ರಲ್ಲಿ ಒಂದೇ ವರ್ಷ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಆಟಗಾರ. ಇವರು 14 ಟೆಸ್ಟ್ ಪಂದ್ಯಗಳನ್ನು ಆಡಿ 1562 ರನ್ ಗಳಿಸಿದ್ದಾರೆ. ಈ ಸಾಧನೆಯನ್ನು ಅಳಿಸಿ ಹಾಕುವ ಕನಸು ಯಶಸ್ವಿ ಜೈಸ್ವಾಲ್ ಅವರದ್ದಾಗಿದೆ.

ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್. ಈ ಮೊದಲು ಅಥವಾ ನಂತರ ಇವರ ರನ್ ಅಕ್ಕಪಕ್ಕದಲ್ಲೂ ಯಾವೊಬ್ಬ ಬ್ಯಾಟರ್ ಬಂದಿಲ್ಲ. ಯಶಸ್ವಿ ಜೈಸ್ವಾಲ್ ಅವರಿಗೆ ಈ ಸಾಧನೆ ಮುರಿಯಲು ಸುವರ್ಣ ಅವಕಾಶ ಲಭಿಸಿದೆ. ಇವರಿಗಿಂತ ಜೈಸ್ವಾಲ್ ಅವರಿಗೆ ಹೆಚ್ಚು ರನ್ ಬಾರಿಸುವ ಅವಕಾ ಇದೆ. ಈ ವರ್ಷ ಜೈಸ್ವಾಲ್ ಕನಿಷ್ಠ ಐದು ಟೆಸ್ಟ್ ಪಂದ್ಯಗಳನ್ನು ಆಡಬಹುದು. ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಜೈಸ್ವಾಲ್ ಅವರಿಗೆ ಇನ್ನೂ 634 ರನ್ ಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications