ಕ್ರಿಕೆಟ್ ನೋಡಿದ್ದಕ್ಕೆ, ಆಡುತ್ತಿರುವುದಕ್ಕೆ ನೀವೇ ಕಾರಣ: ಸಚಿನ್ ಹುಟ್ಟುಹಬ್ಬಕ್ಕೆ ಯುವ ಕ್ರಿಕೆಟಿಗನ ವಿಭಿನ್ನ ವಿಶ್

ಸಚಿನ್ ತೆಂಡೂಲ್ಕರ್, ಮಾಸ್ಟರ್ ಬ್ಲಾಸ್ಟರ್ ಹಾಗೂ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಹೊಂದಿರುವಂತ ದಿಗ್ಗಜ ಕ್ರಿಕೆಟಿಗ. ಕ್ರಿಕೆಟ್‌ನಲ್ಲಿ ಯಾರೂ ಮುರಿಯಲಾಗದಂತ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ನಿರ್ಮಿಸಿರುವ ಸಚಿನ್ ತೆಂಡೂಲ್ಕರ್ ಬಹುತೇಕ ಎಲ್ಲಾ ಕ್ರಿಕೆಟಿಗರಿಗೂ ಬಾಲ್ಯದ ಹೀರೋ ಆಗಿದ್ದವರು. ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಅದೆಷ್ಟೋ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿರುವ ಸಚಿನ್ ತೆಂಡೂಲ್ಕರ್ ಇಂದಿಗೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಇನ್ನು ಇಂದು ( ಏಪ್ರಿಲ್ 24 ) ಸಚಿನ್ ತೆಂಡೂಲ್ಕರ್ ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಟ್ವಿಟರ್ ತುಂಬಾ ಕ್ರಿಕೆಟ್ ದೇವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕ್ರಿಕೆಟಿಗರು, ಐಪಿಎಲ್ ಫ್ರಾಂಚೈಸಿಗಳು, ಕ್ರಿಕೆಟ್ ಬೋರ್ಡ್‌ಗಳು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಶುಭಾಶಯಗಳ ಹೊಳೆಯನ್ನೇ ಹರಿಸಿದ್ದಾರೆ.
ಹೀಗೆ ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬಕ್ಕೆ ಹರಿದುಬಂದಿರುವ ಟ್ವೀಟ್‌ಗಳ ಪಟ್ಟಿ ಈ ಕೆಳಕಂಡಂತಿದೆ.
ಸ್ಟ್ರೈಟ್ ಡ್ರೈವ್ ಹೊಡೆತಗಳನ್ನು ಲೀಲಾಜಾಲವಾಗಿ ಬಾರಿಸುವುದಕ್ಕೆ ಸಚಿನ್ ತೆಂಡೂಲ್ಕರ್ ಹೆಸರುವಾಸಿಯಾಗಿರುವ ಕಾರಣ ಅವರ ಕೆಲವೊಂದಷ್ಟು ಸ್ಟ್ರೈಟ್ ಡ್ರೈವ್ ಚಿತ್ರಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಕೋಟ್ಯಾಂತರ ಹೃದಯಗಳಿಗೆ ಸ್ಟ್ರೈಟ್ ಡ್ರೈವ್ ಆದವರು ಎಂದು ಬರೆದುಕೊಂಡು ತುಂಬಾ ವಿಭಿನ್ನವಾಗಿ ಸಚಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.
ಸಚಿನ್ ತೆಂಡೂಲ್ಕರ್ ಅವರ ಅಂತರರಾಷ್ಟ್ರೀಯ ಬೃಹತ್ ಅಂಕಿಅಂಶಗಳನ್ನು ಟ್ವೀಟ್ ಮಾಡಿರುವ ಬಿಸಿಸಿಐ ಶುಭಾಶಯಗಳನ್ನು ತಿಳಿಸಿದೆ. 664 ಅಂತರರಾಷ್ಟ್ರೀಯ ಪಂದ್ಯಗಳು, 34357 ಅಂತರರಾಷ್ಟ್ರೀಯ ರನ್‌ಗಳು, 100 ಅಂತರರಾಷ್ಟ್ರೀಯ ಶತಕಗಳು ಹಾಗೂ 201 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದು ಸ್ಪೂರ್ತಿಯಾಗಿರುವ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಬರೆದುಕೊಂಡಿದೆ.
ಸಚಿನ್ ತೆಂಡೂಲ್ಕರ್ ಅವರ ಬೃಹತ್ ಕ್ರಿಕೆಟ್ ದಾಖಲೆಗಳ ಅಂಕಿಅಂಶಗಳನ್ನು ಪ್ರಕಟಿಸುವ ಮೂಲಕ ಕ್ರಿಕೆಟ್ ಪ್ರೇಮಿಯೋರ್ವರು ಈ ಕೆಳಕಂಡಂತೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಕ್ರಿಕೆಟ್ ನೋಡಲು, ಕ್ರಿಕೆಟ್ ಆಡಲು ಹಾಗೂ ಇಂದಿಗೂ ಕ್ರಿಕೆಟ್‌ನ್ನು ಬೆಂಬಲಿಸಲು ಕಾರಣವಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ನೇಪಾಳಿ ಕ್ರಿಕೆಟಿಗ ಸಂದೀಪ್ ಲಮಿಚ್ಚನೆ ಬರೆದುಕೊಂಡಿದ್ದಾರೆ.
ಹೀಗೆ ಇನ್ನೂ ಹಲವಾರು ಕ್ರಿಕೆಟಿಗರು ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ಅಭಿಮಾನಿಗಳ ಶುಭಹಾರೈಕೆ ಟ್ವಿಟ್ಟರ್‌ನಾದ್ಯಂತ ತುಂಬಿ ತುಳುಕುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications