For Quick Alerts
ALLOW NOTIFICATIONS  
For Daily Alerts
 

ಧೋನಿ ಕುಡಿಯೋ ನೀರಿನ ಬಾಟಲ್ ಬೆಲೆಯೆಷ್ಟು ಗೊತ್ತಾ?!

You will be surprised to know the cost of MS Dhoni’s drinking water

ಚೆನ್ನೈ, ಮೇ 5: ಸೆಲೆಬ್ರಿಟಿಗಳ ಸಣ್ಣ ಸಣ್ಣ ಸಂಗತಿಗಳೂ ನಮಗೆ ದೊಡ್ಡದೆ. ಅವರೇನೇ ಮಾಡಿದರೂ ನಮಗೊಂಥರಾ ಕುತೂಹಲ, ಅಚ್ಚರಿಯೇ. ಹೆಲಿಕ್ಯಾಪ್ಟರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ಮ್ಯಾಚ್ ವೇಳೆ ಕುಡಿಯುವ ನೀರಿನ ಬಾಟಲ್ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿ ಅನ್ನಿಸಬಹುದು.

ಐಪಿಎಲ್ ನಂಥ ಚುಟುಕು ಓವರ್ ಕ್ರಿಕೆಟ್ ಸಂದರ್ಭ ಸಣ್ಣ ವಿರಾಮ ನೀಡಲಾಗುತ್ತದೆ. ಆಗ ಆಟಗಾರರು ತಂಪು ಪಾನೀಯ ಅಥವಾ ನೀರನ್ನು ಸೇವಿಸಿ ಸಣ್ಣೇ ಸಣ್ಣಗೆ ದಣಿವಾರಿಸಿಕೊಳ್ಳುತ್ತಾರೆ. ಆ ಹೊತ್ತಿನಲ್ಲಿ ನಮ್ಮ ಕೂಲ್ ಕ್ಯಾಪ್ಟನ್ ಹೆಸರಾಂತ ಧೋನಿ ಸೇವಿಸೋ ನೀರಿನ ಬಾಟಲ್ ಬರೀ 20 ರೂಪಾಯಿಯದ್ದು!

ಪಂದ್ಯ ವಿರಾಮದ ವೇಳೆ ಉಳಿದ ಆಟಗಾರರು ದೊಡ್ಡ ದೊಡ್ಡ ಬ್ಯಾಂಡ್ ನ ಕಾಸ್ಟ್ಲಿ ನೀರಿನ ಬಾಟಲ್ ಗಳ ಮೊರೆ ಹೋದರೆ, ಧೋನಿ 'ಬೈಲೇ' ಎನ್ನುವ ಕಂಪನಿಯ ಬಾಟಲ್ ನೀರನ್ನು ಕುಡಿಯುತ್ತಾರೆ. 1 ಲೀಟರ್ ಈ ನೀರಿನ ಈ ಬಾಟಲ್ ಬೆಲೆ 20 ರೂಪಾಯಿ.

ಹಾಗಾದರೆ ಉಳಿದೋರು ಅದೆಷ್ಟು ಕಾಸ್ಟ್ಲಿ ಬಾಟಲ್ ನೀರು ಕುಡೀಬೋದು? ಅಬ್ಬಬ್ಬಾಂದ್ರೆ ನೂರಿನ್ನೂರು ರೂಪಾಯಿಯ ಬಾಟಲ್ ನೀರು ತೆಗೆದುಕೊಳ್ಳಬಹುದಷ್ಟೇ ಅಂತ ನೀವಂದುಕೊಳ್ಳಬಹುದು. ಅಂದ್ಹಾಗೆ ನಮ್ಮ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕುಡಿಯುವ 1 ಲೀಟರ್ ನೀರಿನ ಬಾಟಲ್ ಬೆಲೆ ಜಸ್ಟ್ 500 ರೂಪಾಯಿಯಷ್ಟೇ!

ಕೊಹ್ಲಿ ಫ್ರಾನ್ಸ್ ನಿಂದ 'ಇವಿಯನ್' ಬ್ರ್ಯಾಂಡ್ ನ ನೀರಿನ ಬಾಟಲಿಗಳನ್ನು ಆಮದು ಮಾಡಿಕೊಂಡಿದ್ದಾರೆ. ಇದು ಕೊಂಚ ದುಬಾರಿ ನೀರಿನ ಬಾಟಲ್. ಕಾಸ್ಟ್ಲಿಯೋ ಚೀಪೋ ಒಟ್ಟಿನಲ್ಲಿ ನೀರು ನೀರೇ ಅಂತೀರಾ? ಅದ್ ಸರೀನೆ. ಆದ್ರೆ ಧೋನಿಯ ಸಿಂಪ್ಲಿಸಿಟಿಯನ್ನು ನಾವಿಲ್ಲಿ ಗಮನಿಸಲೇಬೇಕು.

ಧೋನಿ ಇಂಥದ್ದೇ ಇನ್ನೊಂದಿಷ್ಟು ಸರಳತೆಗಳಿಂದ ಗುರುತಿಸಿಕೊಂಡಿದ್ದಾರೆ. ಅನುಭವಿ ಆದರೆ ಈಗಲೂ ಬ್ಯಾಟಿಂಗ್ ಪ್ರಖರತೆಯನ್ನು ಉಳಿಸಿಕೊಂಡಿರುವ ಧೋನಿ ಇದಕ್ಕೇ ಯಾವತ್ತಿಗೂ ಕೂಲ್ ಕ್ಯಾಪ್ಟನ್ ಅನ್ನಿಸಿಕೊಳ್ಳೋದು ಅಲ್ಲವೆ?

Story first published: Saturday, May 5, 2018, 2:09 [IST]
Other articles published on May 5, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+