ಬೆನ್ ಕಟಿಂಗ್ ಇಂಟರ್‌ವ್ಯೂ ಕೆಡಿಸಿದ ಯುವರಾಜ್ ಸಿಂಗ್: ವೈರಲ್ ವಿಡಿಯೋ

ಒಟ್ಟಾವಾ, ಜುಲೈ 30: ಬಿರುಸಿನ ಬ್ಯಾಟಿಂಗ್‌ಗೆ ಹೆಸರಾದವರು ಯುವರಾಜ್ ಸಿಂಗ್. ಪಂದ್ಯಗಳ ವೇಳೆ ತನ್ನ ಸಿಡುಕನ್ನು ಬ್ಯಾಟ್ ಮೂಲಕ ತೋರಿಸುತ್ತಿದ್ದ ಸಿಕ್ಸರ್ ಕಿಂಗ್ ಯುವಿಗೆ 'ಕೆಚ್ಚೆದೆಯ ಮಹರಾಜ' ಎಂಬ ಪ್ರೀತಿಯ ಹೆಸರೂ ಇದೆ. ಅದೇ ಭಾರತದ ನೆಚ್ಚಿನ ಕ್ರಿಕೆಟರ್ ಯುವಿ ಬೆನ್ ಕಟಿಂಗ್ ಅವರ ಸಂದರ್ಶನ ಕೆಡಿಸಿ ಈಗ ಮತ್ತೆ ಸುದ್ದಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಬಳಿಕ ಸಿಂಗ್ 'ಗ್ಲೋಬಲ್ ಟಿ20 ಕೆನಡಾ'ದ ಮೂಲಕ ಮೊದಲ ವಿದೇಶಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲಿ ಮೊದಲ ಪಂದ್ಯದಲ್ಲಿ ಯುವಿ ಔಟಿಲ್ಲದೆಯೂ ಔಟ್ ಆಗಿ ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು.
ಗ್ಲೋಬಲ್ ಟಿ20 ಟೂರ್ನಿ ವೇಳೆ ಆಸ್ಟ್ರೇಲಿಯಾ ಕ್ರಿಕೆಟರ್ ಬೆನ್ ಕಟಿಂಗ್ ಸಂದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾಗ ಯುವಿ ಸಂದರ್ಶನವನ್ನು ಹಾಳು ಮಾಡಿದ್ದು ನಿಜ. ಆದರೆ ಇದು ತಮಾಷೆಯಾಗಿ. ಯುವಿ ತರಲೆಗೆ ಸಂದರ್ಶಕಿ ಜೊತೆ ಕಟಿಂಗ್ ಕೂಡ ಗಹಗಹಿಸಿ ನಗಬೇಕಾಗಿ ಬಂತು.

ಬೆನ್ ಕಟ್ಟಿಂಗ್ ಸಂದರ್ಶನ
ಜುಲೈ 27ರಂದು ಈ ವಿಡಿಯೋ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದೆ. ಬೆನ್ ಕಟಿಂಗ್ ಅವರನ್ನು ಸಂದರ್ಶಕಿಯೊಬ್ಬರು ಮಾತನಾಡಿಸುತ್ತಿದ್ದರು. ಆ ಸಂದರ್ಶಕಿ ಬೇರ್ಯಾರೂ ಅಲ್ಲ; ಬೆನ್ ಕಟಿಂಗ್ ಅವರ ಪ್ರೇಯಸಿ ಎರಿನ್ ಹಾಲೆಂಡ್ ಆಕೆ. ಕಟಿಂಗ್ ಮತ್ತು ಹಾಲೆಂಡ್ ಮದುವೆಯ ನಿರ್ಧಾರಕ್ಕೂ ಬಂದಿದ್ದು, ಮುಂದಿನ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುವುದರಲ್ಲಿದ್ದಾರೆ.
ತರಲೆಗಿಳಿದ ಯುವಿ
ಎಲ್ಲಾ ಕ್ರಿಕೆಟಿಗರೊಂದಿಗೆ ಆತ್ಮೀಯವಾಗಿ ಬೆರೆಯುವ ಯುವಿಗೆ ಬೆನ್ ಕಟಿಂಗ್ ಮತ್ತು ಎರಿನ್ ಹಾಲೆಂಡ್ ಮದುವೆಯಾಗುತ್ತಿರುವ ವಿಚಾರ ಗೊತ್ತಿದೆ. ಭಾವಿ ಪತಿಯನ್ನು ಹಾಲೆಂಡ್ ಸಂದರ್ಶನ ಮಾಡುತ್ತಿರೋದನ್ನು ಗಮನಿಸಿದ ಯುವಿ, ನಡುವೆ ಇಣುಕಿ, 'ನಿಮ್ಮಿಬ್ಬರ ಮದುವೆ ಯಾವಾಗ? (ವೆನ್ ಇಸ್ ದ ವೆಡ್ಡಿಂಗ್ ಗಾಯ್ಸ್?),' ಎಂದು ಪ್ರಶ್ನಿಸಿದ್ದಾರೆ. ಯುವಿ ತರಲೆಗೆ ಕಟಿಂಗ್ ಮತ್ತು ಹಾಲೆಂಡ್ ಹಲ್ಲು ಬಿಡಲೇಬೇಕಾಯ್ತು. ಅಲ್ಲಿಗೆ ಇಂಟರ್‌ವ್ಯೂ ಕತೆ ಎಕ್ಕುಟ್ಟೋಯ್ತು.
ಓಟಿಲ್ಲದೆ ಔಟಾದ ಸಿಂಗ್
ಗ್ಲೋಬಲ್ ಟಿ20 ಕೆನಡಾದ ಟೊರೊಂಟೋ ನ್ಯಾಷನಲ್ಸ್-ವ್ಯಾಂಕೋವರ್ ನೈಟ್ಸ್ ಪಂದ್ಯದಲ್ಲಿ ಯುವರಾಜ್ ನಿಜಕ್ಕೂ ಔಟ್ ಆಗಿರಲಿಲ್ಲ. ಯುವಿ ಬ್ಯಾಟ್ ತಪ್ಪಿಸಿಕೊಂಡ ಚೆಂಡು ಕೀಪರ್ ಕೈ ತಾಗಿ ಸ್ಟಂಪ್‌ಗೆ ತಾಗುವಾಗ, ಯುವಿ ಇನ್ನೂ ಕ್ರೀಸ್‌ನಲ್ಲೇ ಇದ್ದರು. ಆದರೆ ರಿವ್ಯೂಗಾಗಿ ಕಾಯುವ ಬದಲು ಯುವಿ ಔಟ್ ಎಂದು ತಾನೇ ನಿರ್ಧರಿಸಿ ಮೈದಾನದಿಂದ ಹೊರನಡೆದಾಗಿತ್ತು.
ತಲೆಕೆಡಿಸಿಕೊಳ್ಳಬೇಡ
'ನಿಮ್ಮ ಮದುವೆ ಯಾವಾಗ?' ಎಂದು ಸಂದರ್ಶನದ ನಡುವೆ ಇಣುಕಿ ಪ್ರಶ್ನಿಸಿ ತರಲೆ ಮಾಡಿದ್ದ ಯುವಿಗೆ ಕಟ್ಟಿಂಗ್ ಭಾವೀ ಪತ್ನಿ ಹಾಲೆಂಡ್ ತಮಾಷೆಯಾಗೇ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿರುವ ಹಾಲೆಂಡ್, 'ತಲೆ ಕೆಡಿಸಿಕೊಳ್ಳಬೇಡ ಯುವರಾಜ್. ಬೆನ್ ಕಟ್ಟಿಂಗ್ ಮತ್ತು ನಾನು ನಿನ್ನನ್ನ ಮದುವೆಗೆ ಆಹ್ವಾನಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications