ಜಾಸ್ತಿ ಯೋಚನೆ ಮಾಡ್ಬೇಡ, 4 ಓವರ್ ಮುಗಿಸಿ ತಣ್ಣಗಿರು ಎಂದಿದ್ದ ಮಾಹಿ: ಯುಜವೇಂದ್ರ ಚಹಾಲ್

ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಿಂದ ತಾನು ಸಾಕಷ್ಟು ಕಲಿತಿರುವುದಾಗಿ ತಿಳಿಸಿದ್ದಾರೆ. ತನ್ನ ಬೌಲಿಂಗ್ ಯಶಸ್ಸಿನ ಹಿಂದೆ ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನ ಬಿಚ್ಚಿಟ್ಟಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನ ಆರಂಭಿಕ ವರ್ಷಗಳಲ್ಲಿ ಯುಜವೇಂದ್ರ ಚಹಾಲ್ ಮತ್ತು ವ್ರಿಸ್ಟ್ ಸ್ಪಿನ್ನರ್ ಕುಲ್‌ದೀಪ್‌ಯಾದವ್‌ಗೆ ಮಹೇಂದ್ರ ಸಿಂಗ್ ಧೋನಿ ಅನೇಕ ಅವಕಾಶಗಳನ್ನ ನೀಡಿದ್ದರು.
ಮಹೇಂದ್ರ ಸಿಂಗ್ ಧೋನಿ ಆಟಗಾರರನ್ನ ಹೇಗೆ ಬೆಂಬಲಿಸುತ್ತಿದ್ದರು ಎಂಬುದಕ್ಕೆ ಚಹಾಲ್ ತಾನು ಎದುರಿಸಿದ ಕಷ್ಟದ ಸ್ಪೆಲ್ ಕುರಿತು ವಿವರಿಸಿದ್ದಾರೆ.
2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ಸೆಂಚುರಿಯನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಯುಜವೇಂದ್ರ ಚಹಾಲ್ ಒಂದೇ ಒಂದು ವಿಕೆಟ್ ಪಡೆಯದೇ 64 ರನ್‌ಗಳ ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ 30 ಎಸೆತಗಳಲ್ಲಿ ಏಳು ಸಿಕ್ಸರ್ ಸಹಿತ 69 ರನ್ ಸಿಡಿಸಿದ್ರು.
ಹೆನ್ರಿಕ್ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಭಾರತ ನೀಡಿದ 189 ರನ್‌ಗಳನ್ನ 18.4 ಓವರ್‌ಗಳಲ್ಲೇ ಚೇಸ್ ಮಾಡಿ ಗೆದ್ದು ಬೀಗಿತು. ಈ ಪಂದ್ಯದಲ್ಲಿ ದುಬಾರಿ ಬೌಲರ್ ಎನಿಸಿದ ಚಹಾಲ್ ಟಿ20 ಫಾರ್ಮೆಟ್‌ನಲ್ಲಿ ಪಂದ್ಯವೊಂದ್ರಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತದ ಬೌಲರ್ ಹಾಗೂ ವಿಶ್ವದ 10ನೇ ದುಬಾರಿ ಎಂಬ ಕುಖ್ಯಾತಿಗೆ ಕಾರಣವಾದ್ರು.
ಇದಷ್ಟೇ ಅಲ್ಲದೆ ಚಹಾಲ್ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯವೊಂದ್ರಲ್ಲಿ 10 ಓವರ್‌ಗಳಿಗೆ 88 ರನ್‌ಗಳನ್ನ ಬಿಟ್ಟುಕೊಡುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಅತ್ಯಂತ ದುಬಾರಿ ಬೌಲರ್ ಎಂದು ಟೀಕೆಗೆ ಒಳಗಾಗಿದ್ರು.

ಧೋನಿ ಬೌಲರ್‌ಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದರು!
ಆರ್. ಅಶ್ವಿನ್ ಯೂಟ್ಯೂಶ್ ಶೋ ''ಡಿಆರ್‌ಎಸ್ ವಿತ್ ಆಶ್'' ಮಾತನಾಡಿದ ಯುಜವೇಂದ್ರ ಚಹಾಲ್, ಮಾಜಿ ನಾಯಕ ಮಹೆಂದ್ರ ಸಿಂಗ್ ಧೋನಿ ವಿಕೆಟ್ ಹಿಂಬದಿಯಲ್ಲಿ ಬೌಲರ್‌ಗಳಿಗೆ ಸಹಾಯ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಬೌಲರ್‌ಗಳು ರನ್‌ಗಳನ್ನ ಬಿಟ್ಟುಕೊಟ್ಟಾಗ ಅಮೂಲ್ಯ ಸಲಹೆಗಳನ್ನ ನೀಡುತ್ತಿದ್ದರು. ಅವರಿಂದ ಕೆಲವು ತಂತ್ರಗಳನ್ನು ನಾನು ಕಲಿಯಲು ಸಾಧ್ಯವಾಯಿತು ಎಂದು ಚಹಾಲ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯದಲ್ಲಿ ಧೋನಿ ಮಾತುಗಳಿಂದ ಸ್ಫೂರ್ತಿ ತುಂಬಿತು
"ಒಮ್ಮೆ, ನಾನು ದಕ್ಷಿಣ ಆಫ್ರಿಕಾದಲ್ಲಿ ಟಿ20ಯಲ್ಲಿ 64 ರನ್‌ಗಳಿಗೆ ಬಿಟ್ಟುಕೊಟ್ಟಾಗ ಮತ್ತು (ಹೆನ್ರಿಚ್) ಕ್ಲಾಸೆನ್ ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿದಾಗ, ಮಹಿ ಭಾಯ್ ನನಗೆ ವಿಕೆಟ್ ಹಿಂಬದಿಯಿಂದ ಬೌಲಿಂಗ್ ಬರಲು ಹೇಳಿದ್ದರು. ನಾನು ಅದನ್ನು ಮಾಡಿದ್ದೇನೆ ಆದ್ರೆ , ಮತ್ತೊಮ್ಮೆ ಹೆನ್ರಿಚ್ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್ ಹೊಡೆದರು. ಆಗ ಮಾಹಿ ಭಾಯ್ ನನ್ನ ಬಳಿಗೆ ಬಂಗಾಗ ಮಾಹಿ ಭಾಯ್, ಅಬ್ ಕ್ಯಾ ಕರ್ನಾ ಹೈ? (ನಾನು ಈಗ ಏನು ಮಾಡಬೇಕು?) ಎಂದು ಕೇಳಿದೆ. ಅವರು 'ಕುಚ್ ನಹಿ, ಮೈ ತೊ ವೈಸೇಹಿ ಆಗಾಯ ತೇರೆ ಪಾಸ್. (ಏನೂ ಇಲ್ಲ, ನಾನು ನಿನ್ನನ್ನು ಪರೀಕ್ಷಿಸಲು ಬಂದಿದ್ದೇನೆ) ಇದು ನಿನ್ನ ದಿನವಲ್ಲ ಎಂದು ನನಗೆ ತಿಳಿದಿದೆ, ನೀವು ಪ್ರಯತ್ನಿಸುತ್ತಿದ್ದೀರಿ ಆದರೆ ಅದು ಆಗುತ್ತಿಲ್ಲ. ಜ್ಯಾದಾ ಸೋಚ್ನಾ ನಹಿ, ಅಪ್ನೆ ಚಾರ್ ಕಾ ಕೋಟಾ ಖತಮ್ ಕರ್ ಔರ್ ಚಿಲ್ ಕರ್ (ಹೆಚ್ಚು ಯೋಚಿಸಬೇಡಿ, ನಿಮ್ಮ ನಾಲ್ಕು ಓವರ್‌ಗಳನ್ನು ಮುಗಿಸಿ ಮತ್ತು ತಣ್ಣಗಿರಿ)" ಎಂದು ಅತ್ಯಂತ ಸರಳವಾಗಿ ವಿವರಿಸಿದ್ದರು.
ಭಾರತ v/s ವಿಂಡೀಸ್ ಏಕದಿನ ಸರಣಿ: ಅಹಮದಾಬಾದ್‌ಗೆ ಆಗಮಿಸಿದ ವೆಸ್ಟ್ ಇಂಡೀಸ್ ತಂಡ

ಈ ಘಟನೆ ಬಳಿಕ ಪಾಠ ಕಲಿತಿದ್ದೇನೆ: ಚಹಾಲ್
ಈ ಘಟನೆಯು ಅಂತರಾಷ್ಟ್ರೀಯ ವೃತ್ತಿಜೀವನದ ಏರಿಳಿತಗಳು ಮತ್ತು ಅಂತ ಕಠಿಣ ಸಂದರ್ಭಗಳಲ್ಲಿ ಬೌಲರ್ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಪ್ರಮುಖ ಪಾಠವನ್ನು ಕಲಿಸಿದೆ ಎಂದು ಚಹಾಲ್ ಹೇಳಿದರು. ಆ ಸಮಯದಲ್ಲಿ ಯಾರಾದರೂ ನಿಮ್ಮನ್ನು ಗದರಿಸಿದರೆ ನಿಮ್ಮ ಆತ್ಮವಿಶ್ವಾಸದ ಮಟ್ಟವು ಇನ್ನೂ ಕಡಿಮೆಯಾಗುತ್ತದೆ. ಆದರೆ ಮಹೇಂದ್ರ ಸಿಂಗ್ ಧೋನಿ ಹಾಗೆ ಮಾಡಲಿಲ್ಲ. ಇದು ನಿಜಕ್ಕೂ ನನಗೆ ಸ್ಫೂರ್ತಿ ತುಂಬಿತು ಎಂದು ಚಹಾಲ್ ವಿವರಿಸಿದ್ದಾರೆ.

ಧೋನಿ ನಿವೃತ್ತಿ ಬಳಿಕ ಕುಗ್ಗಿದ ಚಹಾಲ್ ಮತ್ತು ಕುಲ್‌ದೀಪ್
2020 ಆಗಸ್ಟ್ 15ರಂದು ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಯುಜವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ತಮ್ಮ ಫಾರ್ಮ್ ಕಳೆದುಕೊಂಡಿದ್ದು ಕಾಕತಾಳೀಯವಾಗಿದೆ. ಇದರ ಜೊತೆಗೆ ಚಹಾಲ್ ಮತ್ತು ಕುಲದೀಪ್ ಇಬ್ಬರೂ ತಮ್ಮ ಫಾರ್ಮ್‌ನಲ್ಲಿ ಕುಸಿತವನ್ನು ಕಂಡ ಪರಿಣಾಮ ಅಂತಿಮವಾಗಿ ಭಾರತೀಯ ವೈಟ್-ಬಾಲ್ ತಂಡಗಳಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು.
ಆದ್ರೀಗ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಯುಜವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications