ಭಾರತ v/s ವಿಂಡೀಸ್ ಏಕದಿನ ಸರಣಿ: ಅಹಮದಾಬಾದ್‌ಗೆ ಆಗಮಿಸಿದ ವೆಸ್ಟ್ ಇಂಡೀಸ್ ತಂಡ

ಭಾರತ ವಿರುದ್ಧದ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂದು ಅಹಮದಾಬಾದ್‌ಗೆ ಆಗಮಿಸಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯ ಮೂಲಕ ಈ ವಿಷಯವನ್ನು ಪ್ರಕಟಿಸಿದೆ. ವಿಂಡೀಸ್ ಕ್ರಿಕೆಟ್ ಬೋರ್ಡ್ ಆಟಗಾರರು ಅಹಮದಾಬಾದ್ ಏರ್‌ಪೋರ್ಟ್‌ಗೆ ಬಂದಿಳಿದ ವೀಡಿಯೋವನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟಿಗರು ಅಹಮದಾಬಾದ್‌ನಲ್ಲಿ 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುತ್ತಾರೆ. ಭಾರತ ತಂಡ ಸೋಮವಾರ ಅಹಮದಾಬಾದ್ ತಲುಪಿದ್ದು, ಈಗಾಗಲೇ ಕ್ವಾರಂಟೈನ್‌ನಲ್ಲಿದೆ. ಉಭಯ ತಂಡಗಳ ನಡುವಿನ ಮೂರು ಏಕದಿನ ಪಂದ್ಯಗಳು ಫೆಬ್ರವರಿ 6, 9 ಮತ್ತು 11 ರಂದು ನಡೆಯಲಿವೆ.
ಎಲ್ಲಾ ಮೂರು ಪಂದ್ಯಗಳು ಗುಜರಾತ್‌ನ ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅಲ್ಲದೆ ಕೊರೊನಾದಿಂದಾಗಿ ಏಕದಿನ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನದಲ್ಲಿ ಅವಕಾಶವಿರಲಿಲ್ಲ. ಇದನ್ನು ಗುಜರಾತ್ ಕ್ರಿಕೆಟ್ ಸಂಸ್ಥೆ ಮಂಗಳವಾರ ಖಚಿತಪಡಿಸಿದೆ.
ಅಹಮದಾಬಾದ್‌ನಲ್ಲೇ 3 ಏಕದಿನ ಪಂದ್ಯ ನಡೆಯಲಿದೆ
ಮೂಲ ವೇಳಾಪಟ್ಟಿಯ ಪ್ರಕಾರ ಅಹಮದಾಬಾದ್, ಜೈಪುರ ಮತ್ತು ಕೋಲ್ಕತ್ತಾದಲ್ಲಿ 3 ಏಕದಿನ ಪಂದ್ಯಗಳು ನಡೆಯಬೇಕಿತ್ತು. ಇನ್ನು ಮೂರು ಟಿ20 ಪಂದ್ಯಗಳು ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಲ್ಲಿ ನಡೆಯಲು ಯೋಜಿಸಲಾಗಿತ್ತು. ಆದರೆ ಕೊರೊನಾದಿಂದಾಗಿ ಬಿಸಿಸಿಐ ಒಂದೇ ಸ್ಟೇಡಿಯಂನಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆ. ಅಹಮದಾಬಾದ್‌ನಲ್ಲಿ 3 ಏಕದಿನ ಪಂದ್ಯಗಳು ಮತ್ತು ಕೋಲ್ಕತ್ತಾದಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ.

ಟಿ20 ಸರಣಿಯಲ್ಲಿ ಶೇ. 75ರಷ್ಟು ಪ್ರೇಕ್ಷಕರಿಗೆ ಅವಕಾಶ
ಏಕದಿನ ಸರಣಿಯಲ್ಲಿ ವೀಕ್ಷಕರಿಗೆ ಅವಕಾಶವಿಲ್ಲದಿದ್ದರೂ ಕೋಲ್ಕತ್ತಾದಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದನ್ನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.
ಒಟ್ಟು ಪ್ರೇಕ್ಷಕರಲ್ಲಿ 75% ರಷ್ಟು ಜನರನ್ನು ಅನುಮತಿಸಲಾಗುತ್ತದೆ. ಫೆಬ್ರವರಿ 16, 18 ಮತ್ತು 20ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಟಿ20 ಸರಣಿಗೆ ಅಭಿಮಾನಿಗಳಿಗೆ ನೇರವಾಗಿ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಿದೆ.

1000ನೇ ಏಕದಿನ ಪಂದ್ಯವನ್ನಾಡಲಿರುವ ಭಾರತ
ಮತ್ತೊಂದೆಡೆ ಇದೇ 6ರಂದು ನಡೆಯಲಿರುವ ಏಕದಿನ ಪಂದ್ಯದ ಮೂಲಕ ಟೀಂ ಇಂಡಿಯಾ 1000 ಏಕದಿನ ಪಂದ್ಯಗಳ ಮೈಲುಗಲ್ಲು ತಲುಪಲಿದೆ. ಇದುವರೆಗೆ 999 ಏಕದಿನ ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಇದೇ 6ರಂದು ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ 1000 ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಅಪರೂಪದ ಸಾಧನೆ ಮಾಡಲಿದೆ.

ವೆಸ್ಟ್ ಇಂಡೀಸ್ ಏಕದಿನ ಸ್ಕ್ವಾಡ್
ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 16 ಮಂದಿಯ ತಂಡವನ್ನು ಆಯ್ಕೆ ಮಾಡಿದೆ.
ವೆಸ್ಟ್ ಇಂಡೀಸ್ ODI ತಂಡ: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್ಕ್ರುಮಾ ಬೊನ್ನರ್, ಡ್ಯಾರೆನ್ ಬ್ರಾವೋ, ಶೇಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶೇ ಹೋಪ್, ಅಕಿಲ್ಸ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮೆರೊ ಸ್ಮಿತ್, ಓಡಿಯನ್ ಝಾಪರ್ಡ್, ಓಡಿಯನ್ ಶೆಫರ್ಡ್.

ಟೀಂ ಇಂಡಿಯಾ ಏಕದಿನ ಸ್ಕ್ವಾಡ್
ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ 18 ಸದಸ್ಯರ ಹೆಸರು ಈ ಕೆಳಗಿನಂತಿದೆ.
ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications