For Quick Alerts
ALLOW NOTIFICATIONS  
For Daily Alerts
 

ವೀರೇಂದ್ರ ಸೆಹ್ವಾಗ್ ಓಪನಿಂಗ್ ಬ್ಯಾಟರ್ ಆಗಲು ಸೂಚಿಸಿದ್ದು ಇವರೇ; ಬಹಿರಂಗಪಡಿಸಿದ ಡೆಲ್ಲಿ ಡ್ಯಾಶರ್

Zaheer Khan Suggested Virender Sehwag Name To Sourav Ganguly To Become Indias Opening Batsman

ಭಾರತ ಕ್ರಿಕೆಟ್‌ನಲ್ಲಿ ತನ್ನದೇ ಆದ ಚರಿಶ್ಮಾವನ್ನು ಹೊಂದಿರುವ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ಸಿಡಿಸಿರುವ ಏಕೈಕ ಆಟಗಾರರಾಗಿದ್ದಾರೆ. ವೀರೇಂದ್ರ ಸೆಹ್ವಾಗ್ ಭಾರತದ ಪರ ಆಡಿದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್ ಎಂದು ಅವರ ದಾಖಲೆಗಳೇ ಹೇಳುತ್ತವೆ ಮತ್ತು ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.

ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 8586 ರನ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 8273 ರನ್ ಕಲೆಹಾಕಿರುವ ವೀರೇಂದ್ರ ಸೆಹ್ವಾಗ್ 38 ಶತಕಗಳನ್ನು ದಾಖಲಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್, ದೇಶಕ್ಕಾಗಿ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವ ಅವಕಾಶವನ್ನು ನೀಡಿದಾಗ ತಕ್ಷಣವೇ ಒಪ್ಪಿಕೊಂಡು ಹಿಟ್ಟಿಂಗ್ ಶಾಟ್‌ಗಳ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ತಮ್ಮ ಆರಂಭವನ್ನು ಮಾಡಿದರು, ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಪ್ರಕಾಶಮಾನವಾಗಿ ಮಿಂಚಿದರು.

Zaheer Khan Suggested Virender Sehwag Name To Sourav Ganguly To Become Indias Opening Batsman

ಅವರ ಆಕ್ರಮಣಕಾರಿ ಸ್ಟ್ರೋಕ್ ಆಟವು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಹ್ಲಾದಕರ ದೃಶ್ಯವನ್ನು ನೀಡುತ್ತಿತ್ತು. ಅವರು ಮೈದಾನದಲ್ಲಿ ಇರುವವರೆಗೂ ಪ್ರೇಕ್ಷಕರು ಬೌಂಡರಿ, ಸಿಕ್ಸರ್‌ಗಳನ್ನು ನಿರೀಕ್ಷಿಸುತ್ತಿದ್ದರು ಮತ್ತು ಅವರು ಮೊದಲ ಎಸೆತದಿಂದಲೇ ಬೌಂಡರಿ ಗೆರೆ ದಾಟಿಸಲು ಎದುರು ನೋಡುತ್ತಿದ್ದರು. ಇದು ಎದುರಾಳಿ ಬೌಲರ್‌ಗಳಿಗೆ ದುಃಸ್ವಪ್ನಕ್ಕಿಂತ ಕಡಿಮೆಯಾಗಿ ಕಾಡುತ್ತಿರಲಿಲ್ಲ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವು ಹಲವಾರು ಬಾರಿ ವೀರೇಂದ್ರ ಸೆಹ್ವಾಗ್ ಅವರ ಮಾಸ್ಟರ್‌ಕ್ಲಾಸ್‌ ಆಟಗಳನ್ನು ಸ್ವೀಕರಿಸಿದೆ ಮತ್ತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸೆಹ್ವಾಗ್ ಜೊತೆಗಿನ ಚಾಟ್‌ನಲ್ಲಿ ಅದನ್ನು ಒಪ್ಪಿಕೊಂಡಿದ್ದಾರೆ.

ಪ್ರಸಾರಕರು ಟ್ವಿಟ್ಟರ್‌ನಲ್ಲಿ ಕಾರ್ಯಕ್ರಮದ ಕಿರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಜೋಡಿಯು ಹಿಂದಿನ ಮತ್ತು ಎದುರಾಳಿ ತಂಡಗಳಲ್ಲಿ ಪರಸ್ಪರ ಆಡಿದ ದಿನಗಳನ್ನು ನೆನಪಿಸಿಕೊಳ್ಳುವುದನ್ನು ಕಾಣಬಹುದು.

ಈ ಚಿಟ್‌ಚಾಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಆಗಿನ ಭಾರತ ತಂಡದ ನಾಯಕ ಸೌರವ್ ಗಂಗೂಲಿ ಅವರಿಗೆ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡುವ ಬಗ್ಗೆ ಸಲಹೆ ನೀಡಿದ ಭಾರತೀಯ ಆಟಗಾರನ ಹೆಸರನ್ನು ಬಹಿರಂಗಪಡಿಸಿದರು.

Zaheer Khan Suggested Virender Sehwag Name To Sourav Ganguly To Become Indias Opening Batsman

ನಿಮ್ಮನ್ನು ಆರಂಭಿಕರಾಗಿ ಬ್ಯಾಟಿಂಗ್ ತೆರೆಯಲು ಹೇಳಿದ್ದು ಯಾರು? ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ವೀರೇಂದ್ರ ಸೆಹ್ವಾಗ್ ಅವರನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, "ಇದು ಮಾಜಿ ವೇಗಿ ಜಹೀರ್ ಖಾನ್ ಅವರ ಆಲೋಚನೆ. ನನ್ನ ಹೆಸರನ್ನು ಆಗ ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿಗೆ ಸೂಚಿಸಿದರು ಮತ್ತು ಅವರು ಬ್ಯಾಟಿಂಗ್ ತೆರೆಯಲು ನನ್ನನ್ನು ಕೇಳಿದರು. ಇದಕ್ಕೂ ಮೊದಲು ನಾನು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದೆ. 1999ರಲ್ಲಿ ಮೊದಲ ಬಾರಿಗೆ ನಾನು ನಿಮ್ಮನ್ನು (ಶೋಯೆಬ್ ಅಖ್ತರ್) ಎದುರಿಸಿದಾಗ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದೆ," ಎಂದು ಬಹಿರಂಗಪಡಿಸಿದರು.

Story first published: Thursday, August 18, 2022, 23:01 [IST]
Other articles published on Aug 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+