Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ವಿರುದ್ಧ ಸೂಪರ್ ಓವರ್‌ನಲ್ಲಿ ಪಂದ್ಯ ಗೆದ್ದ ಜಿಂಬಾಬ್ವೆ

Zimbabwe Won The Super Over Against Pakistan

ರಾವಲ್ಪಿಂಡಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ತಂಡವು ಸೂಪರ್‌ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ತಂಡವು ಸೇನ್ ವಿಲಿಯಮ್ಸನ್ ಅಜೇಯ ಶತಕ (118) ಹಾಗೂ ಬ್ರೆಂಡನ್ ಟೇಲರ್ 56 ರನ್‌ಗಳ ಜೊತೆಗೆ ಕೊನೆಯಲ್ಲಿ ರಾಜ್ಹಾ 45ರನ್‌ಗಳ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 278ರನ್ ಕಲೆಹಾಕಿತು.

ಜಿಂಬಾಬ್ವೆ ನೀಡಿದ 279ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 278 ರನ್‌ಗಳಿಸಿದ ಪರಿಣಾಮ ಪಂದ್ಯ ಟೈ ಆಯಿತು. ಪರಿಣಾಮ 50 ಓವರ್‌ಗಳ ಪಂದ್ಯದಲ್ಲಿ ಬಹಳ ಸಮಯದ ಬಳಿಕ ಪಂದ್ಯ ಟೈ ಕಂಡಿತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಎದುರಾಳಿ ತಂಡದ ಬ್ಲೆಸ್ಸಿಂಗ್ ಮುಜರ್ಬಾನಿ ಬೌಲಿಂಗ್‌ಗೆ ಮೊದಲೆರಡು ವಿಕೆಟ್ ಕಳೆದುಕೊಂಡು ಕೇವಲ ಎರಡು ರನ್‌ಗಳಿಸಿತು. ಪರಿಣಾಮ ಮೂರು ರನ್‌ಗಳ ಸುಲಭ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಜಿಂಬಾಬ್ವೆ, ಮೂರು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದು ಬೀಗಿತು.

ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ ಅದಾಗಲೇ ಮೊದಲೆರಡು ಪಂದ್ಯ ಗೆದ್ದು ವಶಪಡಿಸಿಕೊಂಡಿತ್ತು. ಕೊನೆಯ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ರೋಚಕ ಗೆಲುವು ಪಡೆದುಕೊಂಡಿದೆ.

Story first published: Tuesday, November 3, 2020, 22:46 [IST]
Other articles published on Nov 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+