ವಿಶ್ವಕಪ್ ಹೊತ್ತಿನಲ್ಲೆ ಸ್ಪೇನ್ ಗೆ ಕೈಕೊಟ್ಟ ಕೋಚ್ ಲೋಪೆಟೆಗುಯಿ

ನವದೆಹಲಿ, ಜೂ. 13: ನಾಳೆಯೇ ರಷ್ಯಾದಲ್ಲಿ ಫೀಫಾ ವಿಶ್ವಕಪ್ ಆರಂಭಗೊಳ್ಳಲಿದೆ. ಇಂತಹ ಪ್ರಮುಖ ಹೊತ್ತಿನಲ್ಲೇ ಸ್ಪೇನ್ ಫುಟ್ಬಾಲ್ ತಂಡಕ್ಕೆ ಕೋಚ್ ಜೂಲೆನ್ ಲೋಪೆಟೆಗುಯಿ ಅಘಾತ ನೀಡಿದ್ದಾರೆ. ಲೋಪೆಟೆಗುಯಿ ಅವರು ಸ್ಪೇನ್ ತಂಡವನ್ನು ತೊರೆದು ರಿಯಲ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಂಡಿದ್ದಾರೆ.
ಚಾಂಪಿಯನ್ಸ್ ಲೀಗ್ ನಲ್ಲಿ ರಿಯಲ್ ಮ್ಯಾಡ್ರೀಡ್ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಳಿಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಕೋಚ್ ಕಮ್ ಮ್ಯಾನೇಜರ್ ಜಿನೆದನ್ ಜಿದಾನೆ ಅವರು ಕ್ಲಬ್ಬಿಗೆ ವಿದಾಯ ಹೇಳಿದ್ದರು. ಖಾಲಿಯಿದ್ದ ಆ ಸ್ಥಾನವನ್ನು ಲೋಪೆಟೆಗುಯಿ ತುಂಬಿಕೊಂಡಿದ್ದಾರೆ.
51ರ ಹರೆಯದ ಲೋಪೆಟೆಗುಯಿ ಅವರು ರಿಯಲ್ ಮ್ಯಾಡ್ರಿಡ್ ತಂಡದ ಮುಖ್ಯಕೋಚ್ ಆಗಿ ಜವಾಬ್ದಾರಿ ವಹಿಸುವ ಒಪ್ಪಂದಕ್ಕೆ ಸಹಿ ಮಾಡಿದ್ದು, ಫೀಫಾ ವಿಶ್ವಕಪ್ ಬಳಿಕ ತಂಡದ ಸಂಪೂರ್ಣ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗಿದೆ.
ಮಹತ್ವದ ಪಂದ್ಯ ಎದುರಿರುವಾಗಲೇ ಸ್ಪೇನ್ ತಂಡವನ್ನು ತೊರೆದಿರುವ ಲೋಪೆಟೆಗುಯಿ ನಿಲುವಿಗೆ ಸ್ಪ್ಯಾನಿಷ್ ಫುಟ್ಬಾಲ್ ಫೆಡರೇಶನ್ ನ ಮುಖ್ಯಸ್ಥ ಲೂಯಿಸ್ ರುಬಿಯಾಲೆಸ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಲೋಪೆಟೆಗುಯಿ ಈ ನಿರ್ಧಾರ 'ಉಗ್ರ ಮತ್ತು ಅಷ್ಟೇ ಬೇಸರ ತರಿಸುವಂತದ್ದು' ಎಂದು ಹೇಳಿದ್ದಾರೆ.
ಫೀಫಾದಂತಹ ಮಹತ್ವದ ಪಂದ್ಯ ಸಮೀಪವಿದ್ದಾಗಲೇ ಲೋಪೆಟೆಗುಯಿ ಅವರು ಸ್ಪೇನ್ ತಂಡವನ್ನು ತೊರೆದಿದ್ದು, ಪ್ರತಿಷ್ಠಿತ ಪಂದ್ಯದಲ್ಲಿ ತಂಡದ ಪ್ರದರ್ಶನದ ಮೇಲೆ ಹೇಗೆ ಪರಿಣಾಮ ಬೀರಲಿದೆಯೋ ಎಂಬ ಪ್ರಶ್ನೆ ಫುಟ್ಬಾಲ್ ಅಭಿಮಾನಿಗಳದ್ದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications