For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏಷ್ಯನ್ ಗೇಮ್ಸ್ 2023: ಭಾರತೀಯ ಫುಟ್ಬಾಲ್ ಪುರುಷರ ತಂಡದ ವೇಳಾಪಟ್ಟಿ; ಪೂರ್ಣ ತಂಡ

ಭಾರತೀಯ ಪುರುಷರ ಫುಟ್ಬಾಲ್ ತಂಡವು ಐದು ವರ್ಷಗಳ ನಂತರ ಫಿಫಾ ಶ್ರೇಯಾಂಕದ ಅಗ್ರ 100ರೊಳಗೆ ಪ್ರವೇಶಿಸಿದೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಮುಖ್ಯ ತರಬೇತುದಾರ ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ.

ಭಾರತ ಫುಟ್ಬಾಲ್ ತಂಡ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕುವೈತ್ ಅನ್ನು ಸೋಲಿಸಿದ್ದು ಸೇರಿದಂತೆ, ಮೂರು ಅಂತಾರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಿದೆ.

Asian Games 2023: Indian Football Mens Team Schedule And Full Squad

ಸೆಪ್ಟೆಂಬರ್ 19-ಅಕ್ಟೋಬರ್ 7: 19ನೇ ಏಷ್ಯನ್ ಗೇಮ್ಸ್ (ಹ್ಯಾಂಗ್‌ಝೌ, ಚೀನಾ)
ಬಹು ನಿರೀಕ್ಷಿತ 2023ರ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತದ ಫುಟ್ಬಾಲ್ ಅಭಿಯಾನವು ಉದ್ಘಾಟನಾ ಸಮಾರಂಭಕ್ಕೆ ನಾಲ್ಕು ದಿನಗಳ ಮೊದಲು, ಸೆಪ್ಟೆಂಬರ್ 19ರಂದು ಹುವಾಂಗ್ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ಆತಿಥೇಯ ಚೀನಾ ವಿರುದ್ಧದ ಪಂದ್ಯದೊಂದಿಗೆ ಚಾಲನೆ ಪಡೆಯಲಿದೆ. ಈ ಮೂಲಕ ಒಂಬತ್ತು ವರ್ಷಗಳ ನಂತರ ಪಂದ್ಯಾವಳಿಗೆ ಮರಳಲಿದೆ.

ಪುರುಷರ ಮುಖ್ಯ ತರಬೇತುದಾರ ಇಗೊರ್ ಸ್ಟಿಮ್ಯಾಕ್ ಏಷ್ಯನ್ ಗೇಮ್ಸ್‌ಗೆ ಪ್ರಬಲ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಂಡರ್-23 ಯುವ ಆಟಗಾರರ ತಂಡದಲ್ಲಿ ಸುನಿಲ್ ಛೆಟ್ರಿ, ಸಂದೇಶ್ ಜಿಂಗನ್ ಮತ್ತು ಗುರ್‌ಪ್ರೀತ್ ಸಿಂಗ್ ಸಂಧು ಸೇರಿದ್ದಾರೆ.

ಭಾರತ ಫುಟ್ಬಾಲ್ ತಂಡ ಏಷ್ಯಾದಲ್ಲಿ 18ನೇ ಸ್ಥಾನದಲ್ಲಿದೆ, ಇದು ಏಷ್ಯನ್ ಗೇಮ್ಸ್ ಅರ್ಹತೆಗಾಗಿ ಮಿತಿ ಶ್ರೇಯಾಂಕಗಿಂತ ಹೊರಗಿತ್ತು. ಆದರೆ, ಕೇಂದ್ರ ಕ್ರೀಡಾ ಸಚಿವಾಲಯವು ವಿಶೇಷ ವಿನಾಯಿತಿಯ ಮೂಲಕ ಪುರುಷರ ಮತ್ತು ಮಹಿಳಾ ತಂಡಗಳು ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ಪಡೆದವು.

ಪುರುಷರ ಸ್ಪರ್ಧೆಯಲ್ಲಿ ಆರು ಗುಂಪುಗಳಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಮತ್ತು ನಾಲ್ಕು ಅತ್ಯುತ್ತಮ ಮೂರನೇ ಸ್ಥಾನ ಪಡೆದ ತಂಡಗಳು 16ರ ಸುತ್ತಿಗೆ ಮುನ್ನಡೆಯುತ್ತವೆ.

ಪುರುಷರ ಫುಟ್ಬಾಲ್‌ನಲ್ಲಿ ಭಾರತವು ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಯಶಸ್ಸನ್ನು ಸಾಧಿಸಿದೆ. 1951ರ ಉದ್ಘಾಟನಾ ಆವೃತ್ತಿಯಲ್ಲಿ ಚಿನ್ನ ಗೆದ್ದಿತು ಮತ್ತು 1962ರಲ್ಲಿ ಆ ಸಾಧನೆಯನ್ನು ಪುನರಾವರ್ತಿಸಿತು.

ಈ ಬಾರಿ ಭಾರತದ ಸಾರ್ವಕಾಲಿಕ ಅತ್ಯಧಿಕ ಗೋಲ್ ಸ್ಕೋರರ್ ಸುನಿಲ್ ಛೆಟ್ರಿ ಅವರು ಹ್ಯಾಂಗ್‌ಝೌ ಗೇಮ್ಸ್‌ಗಾಗಿ ಭಾರತ ಫುಟ್ಬಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ 60 ವರ್ಷಗಳ ಹಿಂದೆ ಭಾರತ ಸಾಧಿಸಿದ ಫಲಿತಾಂಶಗಳನ್ನು ಮರುಕಳಿಸಲು ಪ್ರಯತ್ನಿಸಲಿದ್ದಾರೆ.

2023ರ ಏಷ್ಯನ್ ಗೇಮ್ಸ್ ಭಾರತೀಯ ಪುರುಷರ ಫುಟ್ಬಾಲ್ ತಂಡದ ವೇಳಾಪಟ್ಟಿ

ಸೆಪ್ಟೆಂಬರ್ 19: ಚೀನಾ vs ಭಾರತ - (ಭಾರತೀಯ ಕಾಲಮಾನ ಸಂಜೆ 5 ಗಂಟೆ, ಹ್ಯಾಂಗ್‌ಝೌ)
ಸೆಪ್ಟೆಂಬರ್ 21: ಭಾರತ ವಿರುದ್ಧ ಬಾಂಗ್ಲಾದೇಶ (ಭಾರತೀಯ ಕಾಲಮಾನ ಮಧ್ಯಾಹ್ನ 1.30, Xiaoshan)
ಸೆಪ್ಟೆಂಬರ್ 24: ಮ್ಯಾನ್ಮಾರ್ ವಿರುದ್ಧ ಭಾರತ (ಭಾರತೀಯ ಕಾಲಮಾನ ಸಂಜೆ 5 ಗಂಟೆ, Xiaoshan)

ಸೆಪ್ಟೆಂಬರ್ 27 ಅಥವಾ 28: ಪುರುಷರ 16 ಸುತ್ತು
ಅಕ್ಟೋಬರ್ 1: ಪುರುಷರ ಕ್ವಾರ್ಟರ್-ಫೈನಲ್
ಅಕ್ಟೋಬರ್ 4: ಪುರುಷರ ಸೆಮಿಫೈನಲ್
ಅಕ್ಟೋಬರ್ 7: ಪುರುಷರ ಚಿನ್ನ/ಕಂಚಿನ ಪದಕದ ಪಂದ್ಯ

ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತೀಯ ಪುರುಷರ ತಂಡ

ಗೋಲ್‌ಕೀಪರ್‌ಗಳು: ಗುರ್‌ಪ್ರೀತ್ ಸಿಂಗ್ ಸಂಧು, ಗುರ್ಮೀತ್ ಸಿಂಗ್, ಧೀರಜ್ ಸಿಂಗ್ ಮೊಯರಂಗಥೆಮ್.

ಡಿಫೆಂಡರ್ಸ್: ಸಂದೇಶ್ ಜಿಂಗನ್, ಅನ್ವರ್ ಅಲಿ, ನರೇಂದ್ರ ಗಹ್ಲೋಟ್, ಲಾಲ್ಚುಂಗ್ನುಂಗಾ, ಆಕಾಶ್ ಮಿಶ್ರಾ, ರೋಷನ್ ಸಿಂಗ್, ಆಶಿಶ್ ರೈ.

ಮಿಡ್‌ಫೀಲ್ಡರ್ಸ್: ಜೀಕ್ಸನ್ ಸಿಂಗ್ ತೌನೊಜಮ್, ಸುರೇಶ್ ಸಿಂಗ್ ವಾಂಗ್ಜಮ್, ಅಪುಯಾ ರಾಲ್ಟೆ, ಅಮರ್‌ಜಿತ್ ಸಿಂಗ್ ಕಿಯಾಮ್, ರಾಹುಲ್ ಕೆಪಿ, ನವೋರೆಮ್ ಮಹೇಶ್ ಸಿಂಗ್.

ಫಾರ್ವರ್ಡ್ಸ್: ಶಿವಶಕ್ತಿ ನಾರಾಯಣನ್, ರಹೀಮ್ ಅಲಿ, ಅನಿಕೇತ್ ಜಾಧವ್, ವಿಕ್ರಮ್ ಪರತಾಪ್ ಸಿಂಗ್, ರೋಹಿತ್ ದಾನು, ಸುನಿಲ್ ಛೆಟ್ರಿ.

ಮುಖ್ಯ ಕೋಚ್: ಇಗೊರ್ ಸ್ಟಿಮ್ಯಾಕ್.

Story first published: Wednesday, August 9, 2023, 22:37 [IST]
Other articles published on Aug 9, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+