ಶಾಕಿಂಗ್ ನ್ಯೂಸ್: ವಿಶ್ವಕಪ್ ನಿಂದ ಸ್ಟಾರ್ ಆಟಗಾರ ಔಟ್
ಕಾಂಪಿನಾಸ್(ಬ್ರೆಜಿಲ್) ಜೂ.19: 20ನೇ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಿಂದ ಒಂದೇ ದಿನ ಮೂರು ತಂಡಗಳು ನಿರ್ಗಮಿಸಿದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಬಾರಿ ವಿಶ್ವಕಪ್ ನ ಸ್ಟಾರ್ ಆಟಗಾರ ಪೋರ್ಚುಗಲ್ ನ ನಾಯಕ ರೊನಾಲ್ಡೋ ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.
[ಫೀಫಾ ವಿಶ್ವಕಪ್ ಸುದ್ದಿ ಸಂಗ್ರಹ ಸುದ್ದಿ]
ವಿಶ್ವಕಪ್ ಆರಂಭಕ್ಕೂ ಮುನ್ನವೇ ರಿಯಲ್ ಮ್ಯಾಡ್ರಿಡ್ ನ ಕ್ರಿಶ್ಚಿಯಾನೋ ರೊನಾಲ್ಡೊ ಮೊಣಕಾಲಿಗೆ ಭಾರಿ ಪೆಟ್ಟಾಗಿತ್ತು. ಗಾಯದ ನೋವು ನಿವಾರಣೆಯಾಗುವುದಕ್ಕೂ ಮುನ್ನವೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಪೋರ್ಚುಗಲ್ ಪರ ರೊನಾಲ್ಡೋ ಆಡಬೇಕಾಯಿತು. [ಫುಟ್ಬಾಲ್ ಕ್ರೇಜಿ ಫ್ಯಾನ್ಸ್ ಚಿತ್ರಗಳು]

ಜಿ ಗುಂಪಿನ ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಕಣಕ್ಕಿಳಿದ ರೊನಾಲ್ಡೊ ಪೂರ್ತಿ 90 ನಿಮಿಷ ಆಡಲೇಬೇಕಾಯಿತು. ಪೆಪೆ ರೆಡ್ ಕಾರ್ಡ್, ಒಂದರ ಮೇಲೊಂದು ಗೋಲು ಹೊಡೆಸಿಕೊಂಡಿದ್ದು ಎಲ್ಲದರಿಂದ ರೊನಾಲ್ಡೋ ಖಿನ್ನರಾಗಿದ್ದು ಮುಚ್ಚಿಡಲಾಗಿರಲಿಲ್ಲ.
ನಂತರ ನಡೆದ ತರಬೇತಿ ಶಿಬಿರದಲ್ಲಿ ರೊನಾಲ್ಡೊ ಭಾಗವಹಿಸಿರಲಿಲ್ಲ ಗಾಯ ಉಲ್ಬಣಗೊಂಡಿದ್ದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ರೊನಾಲ್ಡೊ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಮಂದಿನ ಲೀಗ್ ಪಂದ್ಯ ಆಡುವುದು ಅನುಮಾನ. [ಪೋರ್ಚುಗಲ್ ಹೀನಾಯ ಸೋಲಿನ ಸುದ್ದಿ]
ಟೂರ್ನಿಯಿಂದ ಹೊರಗುಳಿಯುವುದೆ ಇದಕ್ಕೆ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ರೊನಾಲ್ಡೊ ವಿಶ್ವಕಪ್ ಟೂರ್ನಿಯನ್ನು ಅರ್ಧದಲ್ಲೆ ಮೊಟಕುಗೊಳಿಸಿ ತೆರಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಸರ್ಜನ್ ಜೋಸ್ ಕಾರ್ಲೊಸ್ ನರೊನ್ಹಾ ಅವರು ರೊನಾಲ್ಡೊಗೆ ಸಲಹೆ ನೀಡಿ ಮೊಣಕಾಲಿಗೆ ವಿಶ್ರಾಂತಿ ಅಗತ್ಯವಿದೆ. ಇಲ್ಲದಿದ್ದರೆ ಶಾಶ್ವತವಾದ ಸಮಸ್ಯೆ ಉಂಟಾಗಲಿದೆ. ಕೆಲ ತಿಂಗಳು ಮೈದಾನದಿಂದ ಹೊರಗುಳಿಯುವುದು ಒಳಿತು ಎಂದಿದ್ದಾರೆ. ಪೋರ್ಚುಗಲ್ ತನ್ನ ಮುಂದಿನ ಪಂದ್ಯವನ್ನು ಜೂ.22 ರಂದು ಯುಎಸ್ಎ ವಿರುದ್ಧ ಆಡಲಿದೆ [ಜಿ ಗುಂಪಿನ ವೇಳಾಪಟ್ಟಿ ನೋಡಿ]
ರೊನಾಲ್ಡೊ ಅವರಿಗೆ ಇದು ಮೂರನೇ ವಿಶ್ವಕಪ್ ಟೂರ್ನಿಯಾಗಿದೆ. 2006ರಲ್ಲಿ ಪೋರ್ಚುಗಲ್ ನಾಲ್ಕನೇ ಸ್ಥಾನ ಹಾಗೂ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಅಂತಿಮ 16ರ ಹಂತದ ತನಕ ತಂಡವನ್ನು ರೊನಾಲ್ಡೋ ಕೊಂಡೊಯ್ದಿದ್ದರು. ಈ ಬಾರಿ ರೊನಾಲ್ಡೊ ಇಲ್ಲದಿದ್ದರೆ ಪೋರ್ಚುಗಲ್ ತಂಡ ಸ್ಥಿತಿ ಅಯೋಮಯವಾಗುವುದರಲ್ಲಿ ಸಂಶಯವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications