ರೊನಾಲ್ಡೋಗೆ 2014ರ ಅತ್ಯುತ್ತಮ ಆಟಗಾರ ಪಟ್ಟ
ಜ್ಯೂರಿಚ್, ಜ.13: ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋಗೆ 2014ನೇ ಸಾಲಿನ ಅತ್ಯುತ್ತಮ ಫುಟ್ಬಾಲ್ ಆಟಗಾರ ಪ್ರಶಸ್ತಿ ಲಭಿಸಿದೆ. ಸಮೀಪದ ಪ್ರತಿಸ್ಪರ್ಧಿ ಲಿಯೊನೆಲ್ ಮೆಸ್ಸಿ ಅವರನ್ನು ಎರಡನೇ ಸ್ಥಾನಕ್ಕೆ ರೋನೊಲ್ಡೋ ತಳ್ಳಿ ಫೀಫಾ ಬ್ಯಾಲಾನ್ ಡಿ ಒರ್ ಪ್ರಶಸ್ತಿ ಗಳಿಸಿದ್ದಾರೆ.
ಸ್ಪೇನಿನಲ್ಲಿ ರಿಯಲ್ ಮ್ಯಾಡ್ರಿಡ್ ಪರ ಆಡುವ ರೊನಾಲ್ಡೋ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೂರನೇ ಬಾರಿಗೆ ರೊನಾಲ್ಡೊ ಪಡೆದುಕೊಂಡಿದ್ದಾರೆ. ಬಾರ್ಸಿಲೋನಾದ ಲಿಯೊನೆಲ್ ಮೆಸ್ಸಿ ಹಾಗೂ ಬಾಯನ್ ಮ್ಯೂನಿಚ್ ಗೋಲ್ ಕೀಪರ್ ಮ್ಯಾನ್ಯುಯಲ್ ನೋಯರ್ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದರು.
2014ರಲ್ಲಿ ರೋನಾಲ್ಡೋ ಉತ್ತಮ ಆಟ ಪ್ರದರ್ಶಿಸಿ ರಿಯಲ್ ಮ್ಯಾಡ್ರಿಡ್ ತಂಡ 10ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಗೆಲ್ಲುವಂತೆ ಮಾಡಿದ್ದಲ್ಲದೆ 17 ಗೋಲುಗಳನ್ನು ಗಳಿಸಿದರು. ಶೇ 37.66 ರಷ್ಟು ಮತಗಳು ರೋನಾಲ್ಡೋಗೆ ಲಭಿಸಿದೆ. 29ವರ್ಷ ವಯಸ್ಸಿನ ರೋನಾಲ್ಡೋ ಲೀಗಾದಲ್ಲಿ 30 ಪಂದ್ಯಗಳಲ್ಲಿ 31 ಗೋಲು ಗಳಿಸಿ ಅಗ್ರಪಂಕ್ತಿಗೆ ಸೇರಿದ್ದಾರೆ. ಲೂಯಿಸ್ ಸ್ವಾರೇಜ್ ಜೊತೆಗೆ ಯುರೋಪಿಯನ್ ಗೋಲ್ಡನ್ ಶೂ ವಿಜೇತರಾಗಿದ್ದಾರೆ.

ಮೆಸ್ಸಿಗೂ ಪ್ರಶಸ್ತಿ: ಲಾ ಲೀಗಾ ಹಾಗೂ ಚಾಂಪಿಯನ್ಸ್ ಲೀಗ್ ನಲ್ಲಿ ಅತಿಹೆಚ್ಚು ಗೋಲು ಗಳಿಸಿರುವ ಮೆಸ್ಸಿ ಅವರು ಏಳನೇ ಬಾರಿಗೆ ಟಾಪ್ ಗೋಲ್ ಸ್ಕೋರರ್ ಪ್ರಶಸ್ತಿ ಪಡೆದುಕೊಂಡರು.
ಉತ್ತಮ ಕೋಚ್ ಪ್ರಶಸ್ತಿ ಜರ್ಮನಿಯ ಜೋಕಿಮ್ ಲೊ ಪಾಲಾದರೆ, ಉತ್ತಮ ಗೋಲು ಗಳಿಕೆ ಪುಸ್ಕಸ್ ಪ್ರಶಸ್ತಿ ಕೋಲಂಬಿಯಾದ ಯುವ ಪ್ರತಿಭೆ ಜೇಮ್ಸ್ ರೋಡ್ರಿಗೇಜ್ ಗೆ ಲಭಿಸಿತು. ಫೀಫಾ ಮಹಿಳಾ ಆಟಗಾರ್ತಿ ಪ್ರಶಸ್ತಿ ಜರ್ಮನಿಯ ನಾಡಿನೆ ಕೆಸ್ಲರ್ ಪಾಲಾಯಿತು.
ಬಾರ್ಸಿಲೋನಾಗೆ ಗೆಲುವು: ಲಿಯೊನೆಲ್ ಮೆಸ್ಸಿ, ನೇಮಾರ್ ಹಾಗೂ ಲೂಯಿಸ್ ಸ್ವಾರೇಜ್ ದಾಖಲಿಸಿದ ತಲಾ ಒಂದು ಗೋಲು ನೆರವಿನಿಂದ ಬಾರ್ಸಿಲೋನ ತಂಡ ಸ್ಪಾನಿಶ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು 3-1 ಅಂತರದಿಂದ ಮಣಿಸಿದೆ.
ಈ ಗೆಲುವಿನೊಂದಿಗೆ ಬಾರ್ಸಿಲೋನ ಲೀಗ್‌ನಲ್ಲಿ ಎರಡನೆ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮೊದಲ ಸ್ಥಾನದಲ್ಲಿರುವ ರಿಯಲ್ ಮ್ಯಾಡ್ರಿಡ್‌ಗಿಂತ ಒಂದು ಅಂಕದಿಂದ ಹಿಂದಿದೆ. ಅಟ್ಲೆಟಿಕೊ ತಂಡ 3ನೆ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications