ಲುಂಗಿಯುಟ್ಟ ಅಜ್ಜನ ಚೆಂಡಾಟಕ್ಕೆ ಫುಟ್ಬಾಲ್ ಫ್ಯಾನ್ಸ್ ಫಿದಾ!


ಬೆಂಗಳೂರು, ಜೂನ್ 13: ಫೀಫಾ ವಿಶ್ವಕಪ್ 2018ರ ಸಂದರ್ಭದಲ್ಲಿ ಫುಟ್ಬಾಲ್ ಕ್ರೇಜ್ ಹೆಚ್ಚಾಗುತ್ತಿದೆ. ಸುನಿಲ್ ಛೆಟ್ರಿ ನೇತೃತ್ವದ ಭಾರತ ತಂಡವು ಇಂಟರ್ ಕಾಂಟಿನೆಂಟಲ್ ಕಪ್ ಗೆದ್ದ ಸಂಭ್ರಮ ಮನೆ ಮಾಡಿದೆ.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಿರಣ್ ಕೆಎಸ್ ಎಂಬುವವರು ಒಂದು ಸಣ್ಣ ವಿಡಿಯೋಕ್ಲಿಪ್ಪಿಂಗ್ ಹಾಗೂ ಅದಕ್ಕೊಂದು ಟಿಪ್ಪಣಿ ಬರೆದು ಹಾಕಿರುವುದು ಎಲ್ಲರ ಗಮನ ಸೆಳೆದಿದೆ.
ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು
ಈ ವಿಡಿಯೋದಲ್ಲಿ 65 ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ ವ್ಯಕ್ತಿಯೊಬ್ಬರು ಲುಂಗಿಯುಟ್ಟುಕೊಂಡು ಫುಟ್ಬಾಲ್ ಅಭ್ಯಾಸದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ.
ಈ ವೃದ್ಧ ದಂಪತಿಯ ಫುಟ್‌ಬಾಲ್ ಪ್ರೀತಿಗೆ ವಯಸ್ಸೇ ಆಗಿಲ್ಲ
ಚೆಂಡನ್ನು ಎರಡು ಕಾಲುಗಳಲ್ಲಿ ನಿಯಂತ್ರಿಸುವುದು, ಪುಟಿದೇಳುವಂತೆ ಮಾಡುವುದು, ಬೆನ್ನ ಮೇಲೆ ಚೆಂಡು ನಿಲ್ಲಿಸಿಕೊಳ್ಳುವುದು, ಹೆಡ್ ಮಾಡುವುದು ಹೀಗೆ ವೃತ್ತಿಪರರು ಅಭ್ಯಾಸ ಮಾಡುವಾಗ ಅನುಸರಿಸುವ ಎಲ್ಲಾ ವರಸೆಗಳನ್ನು ಸುಲಭವಾಗಿ ಈ ವ್ಯಕ್ತಿ ಮಾಡುತ್ತಾರೆ. ಈತ ಯಾರು ಏನು ಎತ್ತ ಎಂಬುದರ ಬಗ್ಗೆ ಟ್ವೀಟ್ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ
'ಬರಿಗಾಲಿನಲ್ಲಿ ಇಂಥ ಅದ್ಭುತ ಪ್ರತಿಭೆ ಪ್ರದರ್ಶಿಸುವ ಈತನಿಗೆ ಹಣ ಬಲ, ನೇಮಾರ್, ಮೆಸ್ಸಿಗೆ ಸಿಕ್ಕ ಬೆಂಬಲ ಸಿಕ್ಕಿದ್ದರೆ ಯಾವ ರೀತಿ ಬೆಳೆಯುತ್ತಿದ್ದರೋ ಸುಮ್ಮನೆ ಊಹಿಸಿ ನೋಡಿ' ಎಂದು ಟ್ವೀಟ್ ಮಾಡಲಾಗಿದೆ. ಇನ್ನೇಕೆ ತಡ ನೀವು ಈ ಪ್ರತಿಭೆಯನ್ನು ಕಣ್ತುಂಬಿಸಿಕೊಳ್ಳಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications