Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಗ್ನ ಚಿತ್ರ ಇಂಟರ್ನೆಟ್ಟಿಗೆ, ಆಟಗಾರರು ತೆರೆ ಮರೆಗೆ

ಸಾಲ್ವಡಾರ್, ಜೂ.17: 20ನೇ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದ ಕ್ರೊವೇಷಿಯಾ ಈಗ ಮತ್ತೊಮ್ಮೆ ತಲೆ ತಗ್ಗಿಸುವ ಸುದ್ದಿ ಬಂದಿದೆ. ಕ್ರೊವೇಷಿಯಾ ಆಟಗಾರರಿಗೆ ಪಪರಾಜ್ಜಿಗಳ ಕಾಟ ಶುರುವಾಗಿದ್ದು, ಆಟಗಾರರ ನಗ್ನ ಚಿತ್ರಗಳು ಆನ್ ಲೈನ್ ನಲ್ಲಿ ತೂರಲಾಗಿದೆ.

ಕ್ರೊವೇಷಿಯಾ ಆಟಗಾರರು ತಮ್ಮ ಬೆತ್ತಲೆ ಚಿತ್ರಗಳು ಈಗ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದು ಭಾರಿ ಮುಜುಗರ ಉಂಟುಮಾಡಿವೆ. ಇದು ಆಟಗಾರರ ತಪ್ಪಲ್ಲ ಬಿಡಿ. ಮೊದಲ ಪಂದ್ಯದಲ್ಲಿ ಬಲಿಷ್ಠ ಬ್ರೆಜಿಲ್ ವಿರುದ್ಧ ಸೋಲು ನಿರೀಕ್ಷಿತವಾಗಿತ್ತು ಆದರೆ, ತಲೆ ಬಿಸಿ ಮಾಡಿಕೊಂಡ ಆಟಗಾರರು ಈಜುಕೊಳಕ್ಕಿಳಿದು ದಣಿವಾರಿಸಿಕೊಳ್ಳುತ್ತಿದ್ದರು.

ಆದರೆ, ಕೆಲ ಕಿಡಿಗೇಡಿಗಳು ಆಟಗಾರರು ತಂಗಿದ್ದ ಹೋಟೆಲ್‌ ಪ್ರವೇಶಿಸಿ ಅವರು ಸ್ನಾನ ಮಾಡುತ್ತಿದ್ದಾಗ ಕದ್ದು ಬೆತ್ತಲೆ ಚಿತ್ರ ತೆಗೆದು ಅವನ್ನು ಆನ್‌ಲೈನ್‌ನಲ್ಲಿ ಹರಿದಾಡುವಂತೆ ಮಾಡಿದ್ದಾರೆ. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

Croatia Players Shun Media After Nude Pics Leaked Online

ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಸೌಥಾಂಪ್ಟನ್ ಕ್ಲಬ್ ಪರ ಆಡುವ ಡೆಜಾನ್ ಲೊವ್ರೆನ್ ಹಾಗೂ ಮ್ಯಾಂಚೆಸ್ಟರ್ ಸಿಟಿ ಮಾಜಿ ಡಿಫೆನ್ಸ್ ಆಟಗಾರ ವೆಡ್ರಾನ್ ಕೊರ್ಲೂಕಾ ಹಾಗೂ ಲೊಕೊಮೊಟಿವ್ ಮಾಸ್ಕೋ ಅವರ ನಗ್ನವಾಗಿ ನಿಂತಿರುವ ಚಿತ್ರಗಳು ಆನ್ ಲೈನ್ ಗೆ ಸೇರಿದಲಾಗಿತ್ತು. ಸಿಮ್ಮಿಂಗ್ ಪೂಲ್ ಹತ್ತಿರ ಪೊದೆಯ ಬಳಿ ಮೂವರು ನಿಂತಿರುವ ಚಿತ್ರ ಇದಾಗಿದ್ದು, ಚಿತ್ರಗಳು ಲೀಕ್ ಆಗಿದ್ದರ ಬಗ್ಗೆ ಕೋಚ್ ನಿಕೊ ಕೊವಾಚ್ ಕಿಡಿಕಾರಿದ್ದಾರೆ.

ಆದರೆ, ಈ ಕೃತ್ಯದ ಕುರಿತು ಮಾಧ್ಯಮದೊಂದಿಗೆ ಮಾತನಾಡಲು ಕ್ರೊವೇಷಿಯಾ ಆಟಗಾರರು ನಿರಾಕರಿಸಿದ್ದಾರೆ. 'ಅನಾಮಿಕರು ನಿಮ್ಮ ಬೆತ್ತಲೆ ಚಿತ್ರವನ್ನು ತೆಗೆದರೆ, ಆ ಬಗ್ಗೆ ನಿಮಗೆ ಹೇಗನಿಸುತ್ತದೆ. ಇಂಥ ಸಂದರ್ಭದಲ್ಲಿ ಆಟಗಾರರು ನಿಮ್ಮೊಂದಿಗೆ ಹೇಗೆ ಮಾತನಾಡುತ್ತಾರೆ?' ಎಂದು ತಂಡದ ಕೋಚ್ ನಿಕೊ ಕೊವಾಚ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬೆತ್ತಲಾದ ಇಬ್ಬರು ಆಟಗಾರರು ಮಾಧ್ಯಮದೊಡನೆ ಮಾತನಾಡಲು ನಿರಾಕರಿಸಿದ್ದಾರೆ.

ಬ್ರೆಜಿಲ್ಲಿನ ಅರೆನಾ ಸಾವೊ ಪಾಲೋ ಕ್ರೀಡಾಂಗಣದಲ್ಲಿ ಆನಂದದ ಕ್ಷಣಗಳನ್ನು 66 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ಬ್ರೆಜಿಲ್ ವಿರುದ್ಧ 3-1 ಅಂತರದಲ್ಲಿ ಸೋಲು ಕಂಡಿತ್ತು. [ಬಲಿಷ್ಠ ಬ್ರೆಜಿಲ್ ಶುಭಾರಂಭ]

1998ರಲ್ಲಿ ಮೂರನೇ ಸ್ಥಾನಕ್ಕೇರಿದ್ದ ಕ್ರೊವೇಷಿಯಾ ಬುಧವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೆಮರೂನ್ ತಂಡವನ್ನು ಎದುರಿಸಲಿದೆ. ಕೆಮರೂನ್ ತಂಡ ಕೂಡಾ ಜೂ.13 ರಂದು ನಡೆದ ತನ್ನ ಮೊದಲ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+