ಕೇನ್, ಮೊಡ್ರಿಚ್, ಎಂಬಾಪೆ ಸೇರಿದಂತೆ ವಿಶ್ವಕಪ್ ಪ್ರಶಸ್ತಿ ವಿಜೇತರ ಪಟ್ಟಿ


ಮಾಸ್ಕೋ, ಜುಲೈ 16: ಜಾಗತಿಕ ಫುಟ್ಬಾಲ್ ಹಬ್ಬಕ್ಕೆ ತೆರೆ ಬಿದ್ದಿದೆ. 2018ರ ಫೀಫಾ ವಿಶ್ವಕಪ್ ಟೂರ್ನಮೆಂಟ್ ನ ರೋಚಕ ಅಂತಿಮ ಹಣಾಹಣಿಯಲ್ಲಿ ಫ್ರಾನ್ಸ್ ಪ್ರಶಸ್ತಿ ಗೆದ್ದರೆ, ಕ್ರೋವೇಷಿಯಾ ಎಲ್ಲರ ಹೃದಯ ಗೆದ್ದುಕೊಂಡಿದೆ. ಪ್ರತಿ ವರ್ಷದಂತೆ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಂತರ ಅನೇಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಹ್ಯಾರಿಕೇನ್ ಚಿನ್ನದ ಬೂಟು, ಲೂಕಾ ಮೊಡ್ರಿಚ್ ಚಿನ್ನದ ಚೆಂಡು ಹಾಗೂ ಕಿಲಿಯಾನ್ ಎಂಬಾಪೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ವಿಶ್ವಕಪ್ ಪ್ರಶಸ್ತಿಗಳ ಪೈಕಿ ಗೋಲ್ಡನ್ ಬೂಟ್ ಅತ್ಯಂತ ಮುಖ್ಯವಾದದ್ದು, ಇದಲ್ಲದೆ, ಗೋಲ್ಡನ್ ಚೆಂಡು, ಗ್ಲೋವ್, ಯಂಗ್ ಪ್ಲೇಯರ್, ಫೇರ್ ಪ್ಲೇ, ಮ್ಯಾನ್ ಆಫ್ ದಿ ಮ್ಯಾಚ್, ಮನರಂಜನಾ ತಂಡ, ಆಲ್ ಸ್ಟಾರ್ ಟೀಮ್ ಪ್ರಶಸ್ತಿ ನೀಡಲಾಗಿದೆ.
ಗೋಲ್ಡನ್ ಬೂಟ್ ಅಡಿಡಾಸ್ ಗೋಲ್ಡನ್ ಶೂ ಎಂದು ಕರೆಯಲಾಗುತ್ತಿತ್ತು. 2006ರ ನಂತರ ಗೋಲ್ಡನ್ ಬೂಟ್ ಎಂದೇ ಕರೆಯುತ್ತಾರೆ. ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸುವ ಆಟಗಾರನಿಗೆ ಈ ಪ್ರಶಸ್ತಿ ಸಿಗಲಿದೆ. 1982ರ ನಂತರ ಸಿಲ್ವರ್ ಹಾಗೂ ಕಂಚಿನ ಬೂಟು ಕೂಡಾ ನೀಡಲಾಗುತ್ತಿದೆ.
ಟೂರ್ನಿಯ ನೀಡಲಾಗುವ ಪ್ರಶಸ್ತಿ, ಬಿರುದುಗಳು ಯಾರು ವಿಜೇತರು ಮುಂತಾದ ವಿವರಗಳನ್ನು ಮುಂದೆ ಓದಿ...
ದ ಗೋಲ್ಡನ್ ಬಾಲ್
ದ ಗೋಲ್ಡನ್ ಬಾಲ್ : ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ) . : ಲುಕಾ ಮೊಡ್ರಿಚ್ (ಕ್ರೋವೇಷಿಯಾ)
ದ ಗೋಲ್ಡನ್ ಬೂಟ್
ದ ಗೋಲ್ಡನ್ ಬೂಟ್ : ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಹೊಡೆದ ಪಟುವಿಗೆ ಚಿನ್ನದ ಬೂಟು ಲಭಿಸುತ್ತದೆ. : ಹ್ಯಾರಿ ಕೇನ್ (ಇಂಗ್ಲೆಂಡ್) 6 ಗೋಲು. ಲುಕಾಕು, ಗ್ರೀಜ್ಮಾನ್ ತಲಾ 4 ಗೋಲು ಬಾರಿಸಿ ಪೈಪೋಟಿ ನೀಡಿದರು.
ಶ್ರೇಷ್ಠ ಗೋಲ್ ಕೀಪರ್ ಗೆ ಯಾಷಿನ್ ಪ್ರಶಸ್ತಿ
ಶ್ರೇಷ್ಠ ಗೋಲ್ ಕೀಪರ್ ಗೆ ಯಾಷಿನ್ ಪ್ರಶಸ್ತಿ : ಥಿಬಾಯು ಕೌರ್ಟಿಯಿಸ್ (ಬೆಲ್ಜಿಯಂ). ಬೆಲ್ಜಿಯಂ ಈ ಬಾರಿ ಇಂಗ್ಲೆಂಡ್ ಸೋಲಿಸಿ ಮೂರನೇ ಸ್ಥಾನ ಗಳಿಸಿದ ಸಾಧನೆ ಮಾಡಿದೆ.
ಶ್ರೇಷ್ಠ ಯುವ ಫುಟ್ಬಾಲ್ ಪಟು
ಶ್ರೇಷ್ಠ ಯುವ ಫುಟ್ಬಾಲ್ ಪಟು :21 ವರ್ಷ ವಯಸ್ಸಿನೊಳಗಿನ ಯುವ ಆಟಗಾರಿಗೆ ಪ್ರಶಸ್ತಿ : ಕಿಲಿಯಾನ್ ಎಂಬಾಪೆ(ಫ್ರಾನ್ಸ್) .1958ರಲ್ಲಿ ಪೀಲೆ ನಂತರ ಫೀಫಾ ವಿಶ್ವಕಪ್ ನಲ್ಲಿ ಗೋಲು ಬಾರಿಸಿದ ಸಾಧನೆ ಮಾಡಿದ ಫ್ರಾನ್ಸ್ ಹಾಗೂ ಪಿಎಸ್ ಜಿ ತಂಡದ ಪ್ರತಿಭೆ ಎಂಬಾಪೆ(19)
ಮೀಸಲು ಫೇರ್ ಪ್ಲೇ ಪ್ರಶಸ್ತಿ
ಮೀಸಲು ಫೇರ್ ಪ್ಲೇ ಪ್ರಶಸ್ತಿ : ಜನ ಮೆಚ್ಚುಗೆ ಪಡೆವ ಸಭ್ಯ ತಂಡವನ್ನು ಆರಿಸಲಾಗುತ್ತದೆ. : ಸ್ಪೇನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications