ಬೆಕ್ ಹ್ಯಾಮ್ ಭವಿಷ್ಯ : ಇಂಗ್ಲೆಂಡ್ ಜತೆ ಯಾವ ತಂಡ ಫೈನಲಿಗೆ?

ಬೆಂಗಳೂರು, ಜೂನ್ 21: ಇಂಗ್ಲೆಂಡ್ ತಂಡದ ಮಾಜಿ ನಾಯಕ ಡೇವಿಡ್ ಬೆಕ್ ಹ್ಯಾಮ್ ಅವರು ಫೀಫಾ ವಿಶ್ವಕಪ್ 2018ನಲ್ಲಿ ಯಾವ ತಂಡಗಳು ಫೈನಲಿಗೇರಲಿವೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಟುನೀಷಿಯಾ ವಿರುದ್ಧ 2-1ರ ಅಂತರದಲ್ಲಿ ಇಂಗ್ಲೆಂಡ್ ಗೆದ್ದು, ಭರ್ಜರಿ ಆರಂಭ ಪಡೆದಿದೆ.
ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು
2006ರಲ್ಲಿ ಬೆಕ್ ಹ್ಯಾಮ್ ನಾಯಕತ್ವದಲ್ಲಿ ಅಂಗ್ಲರ ತಂಡವು ಕ್ವಾರ್ಟರ್ ಫೈನಲ್ ಹಂತಕ್ಕೇರಿತ್ತು. ವಿಶ್ವಕಪ್ 1966ರಲ್ಲಿ ವೆಂಬ್ಲಿಯಲ್ಲಿ ಜರ್ಮನಿ ಸೋಲಿಸಿ ಕಪ್ ಗೆದ್ದಿದ್ದ ಇಂಗ್ಲೆಂಡ್ ತಂಡವು ನಂತರ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಮೂರು ವಿಶ್ವಕಪ್ ಟೂರ್ನಮೆಂಟ್ ಆಡಿದ್ದ ಡೇವಿಡ್ ಬೆಕ್ ಹ್ಯಾಮ್ ಅವರು ಮಾತನಾಡಿ, ಇಂಗ್ಲೆಂಡ್ ಅತ್ಯಂತ ಯುವ ತಂಡ ಹೊಂದಿದ್ದು, ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಡೇವಿಡ್ ಬೆಕಮ್ ಗೂ ಉಂಟು ವೇಶ್ಯೆ ಸಹವಾಸ?
ಗರೇತ್ ಸೌಥ್ ಗೇಟ್ ಕೋಚಿಂಗ್ ಮೇಲೆ ನಂಬಿಕೆಯಿದೆ. ಇಂಗ್ಲೆಂಡ್ ತಂಡವು ಈ ಬಾರಿ ಫೈನಲ್ ಹಂತಕ್ಕೇರಲಿದೆ ಎಂದಿದ್ದಾರೆ.
ಇಂಗ್ಲೆಂಡ್ ಫೈನಲ್ ಪ್ರವೇಶಿಸಲಿದ್ದು, ಅರ್ಜೆಂಟೀನಾ ತಂಡವು ಸೆಮಿ ಫೈನಲ್ ಅಥವಾ ಫೈನಲ್ ನಲ್ಲಿ ಎದುರಿಸುವ ನಿರೀಕ್ಷೆಯಿದೆ. ಐಸ್ ಲ್ಯಾಂಡ್ ವಿರುದ್ಧ 1-1 ಡ್ರಾ ಸಾಧಿಸಿದ ಅರ್ಜೆಂಟೀನಾ ಉತ್ತಮ ಲಯದಲ್ಲಿಲ್ಲ.
ಬೆಕಮ್ ಆದ ಧೋನಿ, ಅಪ್ಪನಿಗೆ ನೀರು ಕುಡಿಸಿದ ಝೀವಾ
ಮೆಸ್ಸಿ ಬೇರೆ ಆ ಪಂದ್ಯದಲ್ಲಿ ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದರು. ಆದರೂ, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಭರವಸೆ ಇದೆ ಎಂದರು.
ಜೂನ್ 21ರಂದು ರಾತ್ರಿ 11.30ಕ್ಕೆ ಆರ್ಜೆಂಟೀನಾ ಹಾಗೂ ಕ್ರೋವೇಷಿಯಾ ಪಂದ್ಯ ನಡೆಯಲಿದೆ. ಜೂನ್ 24ರಂದು ಇಂಗ್ಲೆಂಡ್ ಹಾಗೂ ಪನಾಮಾ ಸೆಣಸಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications