ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಎರಡು ದಶಕದ ಬಳಿಕ ಕ್ರೋಷಿಯಾಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ

fifa world cup 2018 chance for croatia to take revenge

ಮಾಸ್ಕೊ, ಜುಲೈ 12: ಸುಮಾರು 20 ವರ್ಷಗಳ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕ್ರೋಷಿಯಾ ತಂಡಕ್ಕೆ ಕಾಲ ಕೂಡಿಬಂದಿದೆ.

1998ರ ಫೀಫಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ 2-1ರಿಂದ ಸೋಲು ಅನುಭವಿಸಿದ್ದ ಕ್ರೋಷಿಯಾ ತಂಡಕ್ಕೆ ಮುಯ್ಯಿ ತೀರಿಸಿಕೊಳ್ಳಲು ಇದು ಸೂಕ್ತ ಅವಕಾಶ ಎಂದು ಕ್ರೋಷಿಯಾ ಕೋಚ್ ಜ್ಲಾಟ್ಕೊ ಡಾಲಿಕ್ ಹೇಳಿದ್ದಾರೆ.

 ವಿಶ್ವಕಪ್: ಇಂಗ್ಲೆಂಡ್ ಗೆ ಆಘಾತವಿತ್ತ ಕ್ರೊವೇಷಿಯಾ ಫೈನಲ್ ಪ್ರವೇಶ ವಿಶ್ವಕಪ್: ಇಂಗ್ಲೆಂಡ್ ಗೆ ಆಘಾತವಿತ್ತ ಕ್ರೊವೇಷಿಯಾ ಫೈನಲ್ ಪ್ರವೇಶ

ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮಾರಿಯೋ ಮ್ಯಾಂಜುಕಿಕ್, ಇವಾನ್ ಪೆರಿಸಿವಿಚ್ ಅವರ ಗೋಲುಗಳ ನೆರವಿನಿಂದ ಕ್ರೋಷಿಯಾ ತಂಡ 2-1ರಿಂದ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇದೇ ಮೊದಲ ಬಾರಿಗೆ ಫೀಫಾ ವಿಶ್ವಕಪ್‌ನ ಫೈನಲ್ ಪ್ರವೇಶಿಸಿರುವ ಕ್ರೋಷಿಯಾ, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಫ್ರಾನ್ಸ್‌ನ ಸವಾಲನ್ನು ಎದುರಿಸಲಿದೆ.

fifa world cup 2018 chance for croatia to take revenge

1998ರಲ್ಲಿ ನಾನು ಫ್ರಾನ್ಸ್‌ನಲ್ಲಿ ತಂಡವನ್ನು ಬೆಂಬಲಿಸಲು ತೆರಳಿದ್ದೆ. ಮೊದಲ ಮೂರು ಪಂದ್ಯದ ಬಳಿಕ ನಾನು ತವರಿಗೆ ಮರಳಬೇಕಾಗಿತ್ತು.

ಇಪ್ಪತ್ತು ವರ್ಷದ ಹಿಂದಿನ ಈ ಪಂದ್ಯದಲ್ಲಿ ಆಗ ಗೋಲು ಬಾರಿಸಿದ್ದ ಲಿಲಿಯನ್ ತುರಾನ್ ಬಗ್ಗೆ ಕ್ರೋಷಿಯಾದ ಎಲ್ಲರೂ ಮಾತನಾಡುತ್ತಾರೆ. ಆಗ 2-1ರಲ್ಲಿ ಸೋತಿದ್ದೆವು.

ಹೀಗಾಗಿ ಈ ಪಂದ್ಯ ಐತಿಹಾಸಿಕ ಮಹತ್ವ ಪಡೆದಿದೆ. ನಮಗೆ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಎರಡೂ ತಂಡಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿವೆ ಮತ್ತು ಫೈನಲ್‌ಗೆ ತಲುಪಲು ಅರ್ಹವಾಗಿವೆ.

ಫೈನಲ್‌ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಲು ಅಣಿಯಾಗುವತ್ತ ನಾವು ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಈ ಆಟಗಾರರಿಗೆ ನಾನು ಫುಟ್ಬಾಲ್ ಹೇಳಿಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಏಕೆಂದರೆ ಅವರು ಈಗಾಗಲೇ ಅದ್ಭುತವಾಗಿ ಆಡುತ್ತಿದ್ದಾರೆ. ನಾನು ಬೇರೆಯ ಕೆಲವು ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದೇನೆ. ಇದನ್ನು ಅವರು ಒಪ್ಪಿಕೊಂಡಿದ್ದಾರೆ.

ಆರಂಭದಲ್ಲಿ ಅವರಲ್ಲಿ ಸಂಪೂರ್ಣ ನಂಬಿಕೆ ಮತ್ತು ಆತ್ಮವಿಶ್ವಾಸ ಇರಲಿಲ್ಲ. ಆದರೆ, ಟೂರ್ನಿ ಸಾಗುತ್ತಿದ್ದಂತೆಯೇ ಅವರು ಆತ್ಮವಿಶ್ವಾಸ ಗಳಿಸಿಕೊಂಡರು. ಮಾನಸಿಕವಾಗಿ ಹಾಗೂ ಬಲದಲ್ಲಿ ಹೆಚ್ಚು ಶಕ್ತಿಯುತವಾಗಿದ್ದಾರೆ.

ಕೋಚ್ ನೀಡುವ ಸೂಚನೆಗಳನ್ನು ಕರಾರುವಕ್ಕಾಗಿ ಸಾಧಿಸುವ ಗುಣವುಳ್ಳ ತಂಡಗಳು ಈ ಟೂರ್ನಿಯಲ್ಲಿ ಗೆದ್ದಿವೆ. ನಾವು ಸತತವಾಗಿ ಮೂರು ಪಂದ್ಯಗಳಲ್ಲಿ 1-0ಯಿಂದ ಹಿಂದಿದ್ದೆವು. ಈ ಎಲ್ಲಾ ಹಿನ್ನಡೆಯನ್ನೂ ಎದುರಿಸಿ ಗೆದ್ದೆವು. ಈ ಬಾರಿ ಅದನ್ನು ಹೆಚ್ಚುವರಿ ಸಮಯದಲ್ಲಿ ಸಾಧಿಸಿದೆವು.

ಫುಟ್ಬಾಲ್‌ನ ಎಲ್ಲ ಅಗತ್ಯ ಗುಣಗಳ ಜತೆಗೆ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ನಾವು ಹೆಮ್ಮೆಯುಳ್ಳ, ಬಿಟ್ಟುಕೊಡದ ಗುಣದ ಜನರಿರುವ ದೇಶದವರು ಎಂದು ಕೋಚ್ ಜ್ಲಾಟ್ಕೊ ಡಾಲಿಕ್ ಹೇಳಿದ್ದಾರೆ.

Story first published: Thursday, July 12, 2018, 12:34 [IST]
Other articles published on Jul 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X