ಅಪ್ಪಂದಿರ ದಿನದ ವಿಶೇಷ : ವಿಶ್ವಕಪ್ ಸ್ಟಾರ್ ಫುಟ್ಬಾಲರ್ಸ್

ಬೆಂಗಳೂರು, ಜೂನ್ 18: ರಷ್ಯಾದಲ್ಲಿ ಫೀಫಾ ವಿಶ್ವಕಪ್ ಗೆ ಭರ್ಜರಿ ಕಿಕ್ ಸಿಕ್ಕಿದೆ. ವಿವಿಧ ದೇಶಗಳ ಫುಟ್ಬಾಲ್ ಆಟಗಾರರಿಗೆ ಇಂದು ಫಾದರ್ಸ್ ಡೇ ಸಂಭ್ರಮ. ಸ್ಟಾರ್ ಆಟಗಾರರಾದ ಲಿಯೊನೆಲ್ ಮೆಸ್ಸಿ, ರೊನಾಲ್ಡೋ, ನೇಮಾರ್ 'ಸ್ಟಾರ್ ಅಪ್ಪ' ಎನಿಸಿಕೊಂಡಿದ್ದಾರೆ.
ಹಲವು ಫುಟ್ಬಾಲ್ ತಾರೆಯರು ಸಂಸಾರಸ್ಥರಾದರೂ ಜನಪ್ರಿಯತೆ ಕಡಿಮೆಯಾಗಿಲ್ಲ. ಮಹಿಳಾ ಅಭಿಮಾನಗಳ ಪಾಲಿಗೆ ನೇಮಾರ್, ಮೆಸ್ಸಿ, ರೋನಾಲ್ಡೋ, ರೋಡ್ರಿಗೇಜ್ ಇಂದಿಗೂ ಫೇವರೀಟ್.
ಫುಟ್ಬಾಲ್ ತಾರೆಯರು ಮದುವೆಯಾಗದೆ ಕೂಡಾ ಲಿವ್ ಇನ್ ಸಂಬಂಧ ಮೂಲಕ ಮಕ್ಕಳು ಪಡೆದುಕೊಂಡಿದ್ದಾರೆ. ಆದರೆ, ಹಲವು ವರ್ಷಗಳಿಂದ ತಮ್ಮ ಗೆಳೆತಿಯರ ಜತೆ ಗಟ್ಟಿ ಸಂಬಂಧ ಹೊಂದಿದ್ದಾರೆ.
ಫುಟ್ಬಾಲ್ ತಾರೆಯರು ತಮ್ಮ ಮಕ್ಕಳು ಕೂಡಾ 'ಬ್ಯೂಟಿಫುಲ್ ಗೇಮ್' ನ ಭಾಗವಾಗಬೇಕು ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಹಲವು ತಾರೆಯರು ತಮ್ಮ ಮಕ್ಕಳನ್ನು ಈಗಾಗಲೇ ಮೈದಾನಕ್ಕಿಳಿಸಿದ್ದಾರೆ. ಫಾದರ್ಸ್ ಡೇ ನಿಮಿತ್ತ, ಫುಟ್ಬಾಲ್ ಆಟಗಾರರು ಹಾಗೂ ಅವರ ಮಕ್ಕಳ ಚಿತ್ರ ನಿಮಗಾಗಿ ಇಲ್ಲಿದೆ...
ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು
ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.
ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಗೆರಾಡ್ ಪಿಕೆ- ಶಕೀರಾ ಪುತ್ರ
ಸ್ಪಾನೀಷ್ ಫುಟ್ಬಾಲ್ ಆಟಗಾರ ಗೆರಾರ್ಡ್ ಪಿಕೆ ಹಾಗೂ ಪಾಪ್ ಗಾಯಕಿ ಶಕೀರಾ ಅವರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ವಾಕಾ ವಾಕಾ ಹಾಡಿನ ಮೂಲಕ ಪರಿಚಯವಾಗಿ ಪ್ರೇಮವಾಗಿ ಬೆಳೆಯಿತು. 2013ರಲ್ಲಿ ಇವರಿಗೆ ಜನಿಸಿದ ಪುತ್ರನ ಹೆಸರು ಮಿಲನ್.. ಇದೇ ಕಂದ ಬ್ರೆಜಿಲ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2014 ಆಶಯ ಗೀತೆ 'ಲಲಾ ಲಾಲಾಲ ಲಾಲ' ಹಾಡಿನಲ್ಲಿ ತನ್ನ ತಾಯಿ ಜತೆ ಕಾಣಿಸಿಕೊಂಡಿದ್ದ.

ಮಗನ ಜತೆ ನೇಮಾರ್ ಜ್ಯೂನಿಯರ್
ನೇಮಾರ್ ಹಾಗೂ ಅವರ ಹಳೆ ಗೆಳತಿ ಕರೊಲಿನಾ ನೊಗ್ಯುರಿಯಾ ಡಾಂಟಸ್ ಗೆ ಹುಟ್ಟಿದ ಮಗು ಡೇವಿಡ್ ಲುಕ್ಕಾ ಡ ಸಿಲ್ವ. 2011ರಲ್ಲಿ ನೇಮಾರ್ 19 ನೇ ವರ್ಷವಾಗಿದ್ದಾಗಲೇ ಅಪ್ಪನಾಗುವ ಯೋಗ ಲಭಿಸಿತ್ತು. ಈಗ ಹೊಸ ಗೆಳತಿ ಜತೆ ಇರುವ ನೇಮಾರ್ ತಮ್ಮ ಪುತ್ರನನ್ನು ಬಾರ್ಸಿಲೋನ ಕ್ಲಬ್ ನ ಸದಸ್ಯ ಮಾಡುವ ಆಸೆ ಇರಿಸಿಕೊಂಡಿದ್ದಾರೆ. ಸದ್ಯ ರಷ್ಯಾದಲ್ಲಿ ನಡೆದಿರುವ ವಿಶ್ವಕಪ್ ನಲ್ಲಿ ಬ್ರೆಜಿಲ್ ತಂಡದ ಪ್ರಮುಖ ಆಟಗಾರರಾಗಿ ಕಣಕ್ಕಿಳಿದಿದ್ದಾರೆ.

ಜರ್ಮನಿ ತಾರೆ ಮೆಸುಟ್ ಓಜಿಲ್
ಟರ್ಕಿ ಮೂಲದವರಾದ ಮೆಸುಟ್ ಓಜಿಲ್ ಜರ್ಮನಿ ಹಾಗೂ ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸೆನಲ್ ಪರ ಆಡುವ ಫುಟ್ಬಾಲ್ ತಾರೆ. ಖಾಸಗಿ ಬದುಕಿನ ಬಗ್ಗೆ ಹೆಚ್ಚು ಪ್ರಚಾರ ನೀಡಲು ಇಷ್ಟಪಡದ ಓಜಿಲ್ ಗಂಡು ಮಗುವೊಂದರ ಹೆಮ್ಮೆಯ ತಂದೆ ಎಂದು ಮಾತ್ರ ಹೇಳಿಕೊಂಡಿದ್ದಾರೆ. ಈ ಬಾರಿ ಕೂಡಾ ಜರ್ಮನಿ ಪರ ಆಡುತ್ತಿದ್ದಾರೆ.

ಜೂನಿಯರ್ ರೊನಾಲ್ಡೊ
ಪೋರ್ಚುಗೀಸ್ ಕ್ರಿಶ್ಚಿಯನ್ ರೊನಾಲ್ಡೋ ಅವರ ಪುತ್ರನಿಗೆ ಜ್ಯೂನಿಯರ್ ಎಂದೆ ಕರೆಯಲಾಗುತ್ತದೆ. ರೊನಾಲ್ಡೋ ಪುತ್ರನಿಗೆ ತನ್ನ ತಾಯಿ ಯಾರು ಎಂಬುದು ಇನ್ನೂ ತಿಳಿದಿಲ್ಲ. ಅಪ್ಪನ ತದ್ರೂಪಿನಂತೆ ಕಾಣುವ ಜ್ಯೂನಿಯರ್ ತನ್ನ ಅಪ್ಪನಿಗೆ ಸಿಕ್ಕ ಫುಟ್ಬಾಲ್ ನ ಅತ್ಯುನ್ನತ ಗೌರವ ಪ್ರಶಸ್ತಿಯೊಂದಿಗೆ ಇರುವುದನ್ನು ಕಾಣಬಹುದು. ಚಿತ್ರದಲ್ಲಿ ಪೀಲೆ ಅವರು ಕೂಡಾ ಇದ್ದಾರೆ. [ಅಪ್ಪ ರೋನಾಲ್ಡೊನ ರಹಸ್ಯ ಕಥೆ ಇಲ್ಲಿ ಓದಿ]

ಲಿಯೊನೆಲ್ ಮೆಸ್ಸಿ ಹಾಗೂ ಅವರ ಮಗ
ಅರ್ಜೆಂಟಿನಾದ ತಾರೆ ಲಿಯಾನೆಲ್ ಮೆಸ್ಸಿ ಅವರು ತಮ್ಮ ಮಗ ಥಿಯಾಗೋ ಜತೆ ಇರುವ ಚಿತ್ರ. ಮೆಸ್ಸಿ ಹಾಗೂ ಆತನ ಗೆಳತಿ ಅಂಟೊನೆಲ್ಲಾ ರೊಕುಜೊ ಅವರ ಪುತ್ರನಾಗಿ ಥಿಯಾಗೋ ನವಂಬರ್ 2, 2012ರಲ್ಲಿ ಜನಿಸಿದ. ಬಾರ್ಸಿಲೋನ ಪರ ಆಡುವ ಮೆಸ್ಸಿ ಪುತ್ರನ ಜತೆ ಕುಳಿತ ಚಿತ್ರ ಇದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications