ಫೀಫಾ ವಿಶ್ವಕಪ್ 2018: ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಗೆದ್ದಿದ್ದು ಇಲ್ಲಿ!

ಮಾಸ್ಕೋ, ಜುಲೈ 16: ಈ ಬಾರಿಯ ಫೀಫಾ ವಿಶ್ವಕಪ್ ಪಂದ್ಯಾಟಕ್ಕೆ ಜುಲೈ 15ರಂದು ತೆರೆ ಬಿದ್ದಿದೆ. ಇನ್ನು 2022ಕ್ಕೆ ಕತಾರ್ ನಲ್ಲಿ ಈ ಪ್ರತಿಷ್ಠಿತ ಕೂಟವನ್ನು ನೋಡಲಿದ್ದೇವೆ. ಆದರೆ ಫೀಫಾ ವಿಶ್ವಕಪ್ ಗುಂಗು ಕಳೆದುಹೋಗುವ ಮುನ್ನ ಫೈನಲ್ ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾದೆದುರು ಗೆದ್ದಿದ್ದು ಎಲ್ಲೆಲ್ಲಿ ಅಂತ ನೋಡಿಕೊಂಡು ಬರೋಣವೆ?
2018ರ ಫೀಫಾ ವಿಶ್ವಕಪ್ ಮುದ್ದಕ್ಕೂ ಕ್ರೊವೇಷಿಯಾವೂ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಹಾಗಾಗಿ ಸಹಜವಾಗಿಯೇ ಫೈನಲ್ ನಲ್ಲಿ ಕ್ರೊವೇಷಿಯಾವೂ ಗೆದ್ದೀತು ಎಂದು ಭಾವಿಸಲಾಗಿತ್ತು. ಆದರೆ ಫೈನಲ್ ನಲ್ಲಿ ಅದ್ಭುತ ಆಟವಾಡಿದ ಬಲಿಷ್ಟ ಫ್ರಾನ್ಸ್ ಗೆಲುವನ್ನು ತನ್ನಡೆಗೆ ತಂದುಕೊಂಡಿತು. ಫ್ರಾನ್ಸ್ ಗೆಲುವಿಗೆ ಇಲ್ಲೊಂದಿಷ್ಟು ಕಾರಣಗಳಿವೆ.

1. ದಾಳಿಕೋರರು
ಭಾನುವಾರ ನಡೆದ ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ದಾಳಿಯಾತ್ಮಕ ಆಟವಾಡಿತು. ಫ್ರಾನ್ಸ್ ನಲ್ಲಿ ಕೈಲ್ಯಾನ್ ಎಂಬಾಪೆ, ಆಂಟೊಯಿನ್ ಗ್ರೀಜ್ಮನ್ ಮತ್ತು ಪಾಲ್ ಪೋಗ್ಬಾ ಈ ಮೂವರೂ ಪ್ರಖರ ದಾಳಿ ನಡೆಸಿದರು. ಫ್ರಾನ್ಸ್ ದಾಳಿಯಾತ್ಮಕ ಆಟಕ್ಕೆ ಕ್ರೊವೇಷಿಯಾದ ಚೊಚ್ಚಲ ಫೀಫಾ ವಿಶ್ವಕಪ್ ಕನಸು ಭಗ್ನಗೊಂಡಿತು.

2. ಮೊದಲೆರಡು ಗೋಲುಗಳ ಹುಮ್ಮಸ್ಸು
ಲುಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕುತೂಹಲಕಾರಿ ಫೀಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಆರಂಭದಿಂದಲೂ ಮುನ್ನಡೆ ಸಾಧಿಸಿತ್ತು. ಅದರಲ್ಲೂ ಪಂದ್ಯದ ಮೊದಲಾರ್ಧ ಮುಕ್ತಾಯದ ವೇಳೆ ಫ್ರಾನ್ಸ್ ಖಾತೆಯಲ್ಲಿ ಎರಡು ಗೋಲ್ ಗಳಿದ್ದವು. ಕ್ರೊವೇಷಿಯಾ ಖಾತೆಯಲ್ಲಿದ್ದುದು ಆಗ ಬರೀ ಒಂದು ಗೋಲ್. ಈ ಮುನ್ನಡೆ ಸಹಜವಾಗೇ ಫ್ರಾನ್ಸ್ ಗೆ ಇನ್ನಷ್ಟು ಹುಮ್ಮಸ್ಸು ತುಂಬಿತು.

3. ಬಿಟ್ಟುಕೊಡಲಿಲ್ಲ
ಫ್ರಾನ್ಸ್ ತಂಡದಲ್ಲಿದ್ದ ಸ್ಯಾಮ್ಯುಯೆಲ್ ಉಮ್ತಿಟಿ (ಬಾರ್ಸಿಲೋನಾ) ಮತ್ತು ರಾಫೆಲ್ ವರನೆ (ರಿಯಲ್ ಮ್ಯಾಡ್ರಿಡ್) ಅವರೂ ಉತ್ತಮ ಆಟವಾಡಿದ್ದು ಫೈನಲ್ ನಲ್ಲಿ ಕಂಡುಬಂತು. ಇವರಿಬ್ಬರು ಕ್ರೊವೇಷಿಯಾದ ಗೋಲ್ ಪ್ರಯತ್ನಕ್ಕೆಲ್ಲಾ ಅಡ್ಡಗಾಲು ಹಾಕುತ್ತಾ ಸಾಗಿದ್ದು, ಪ್ರವೇಷಿಯಾವನ್ನು ಕುಗ್ಗಿಸಿತು.

4. ಜಾಣ ಆಟ
ನಾಕೌಟ್ ಹಂತದ ಪಂದ್ಯಗಳಲ್ಲಿ ಕ್ರೊವೇಷಿಯಾ ಪೆನಾಲ್ಟಿ ಶೂಟೌಟ್ ನಲ್ಲಿ ಪಂದ್ಯ ಗೆದ್ದುಕೊಂಡ ಉದಾಹರಣೆಯಿದೆ. ಫೈನಲ್ ನಲ್ಲೂ ಕ್ರೊವೇಷಿಯಾಕ್ಕೆ ಪೆನಾಲ್ಟಿ ಶೂಟೌಟ್ ಗೆ ಅವಕಾಶ ಲಭಿಸಿದ್ದರೆ ಕ್ರೊವೇಷಿಯಾವೇ ಕಪ್ ಜಯಿಸುವ ಸಾಧ್ಯತೆಯಿತ್ತು. ಫ್ರಾನ್ಸ್ ಆಟಗಾರರ ಇದಕ್ಕೆ ಅವಕಾಶ ಕೊಡದೆ ಜಾಣ ಆಟ ಪ್ರದರ್ಶಿಸಿದರು. ಪಂದ್ಯದುಕ್ಕೂ ಫ್ರಾನ್ಸ್ ಎದುರಾಳಿಯನ್ನು ಒತ್ತಡಕ್ಕೀಡು ಮಾಡುತ್ತಾ ಸಾಗಿತು.

5. ಪರ್ಫೆಕ್ಟ್ ಪ್ಲಾನ್
ಎರಡು ವರ್ಷಗಳಿಗೆ ಹಿಂದೆ ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಪೋರ್ಚುಗಲ್ ಎದುರು ತನ್ನ ತಂಡ ಸೋತಿದ್ದನ್ನು ಫ್ರಾನ್ ಕೋಚ್ ಡಿಡಿಯರ್ ಡೆಸ್ಚಾಂಪ್ಸ್ ಮರೆತಿರಲಿಲ್ಲ. ಹಾಗಾಗಿ ಈ ಬಾರಿ ಡಿಡಿಯರ್, ತಂಡ ಗೆಲ್ಲಲು ಬೇಕಾದ ಯೋಚನೆಗಳನ್ನೆಲ್ಲಾ ಸರಿಯಾಗಿ ರೂಪಿಸಿಕೊಂಡಿದ್ದರು. ಫ್ರಾನ್ಸ್ ಗೆಲ್ಲಲು ಇದೂ ಪ್ರಮುಖ ಅಂಶವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications