ವಿಶ್ವಕಪ್ 2018: ಪೋರ್ಚುಗೀಸರ ಗೆಲುವು ತಡೆದ ಪರ್ಷಿಯನ್ನರು


ಬೆಂಗಳೂರು, ಜೂನ್ 26: ಫೀಫಾ ವಿಶ್ವಕಪ್ 2018ರ ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ಪೋರ್ಚುಗೀಸ್ ಹಾಗೂ ಇರಾನ್ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡು ಬಂದಿದೆ.
ಪೋರ್ಚುಗಲ್ ವಿರುದ್ಧ ಇರಾನ್ ಪಂದ್ಯದ ಲೈವ್ ಸ್ಕೋರ್, ಕಾಮೆಂಟ್ರಿ
ಈ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆದ್ದರೆ ಪೋರ್ಚುಗೀಸ್ ತಂಡವು ಬಿ ಗುಂಪಿನಲ್ಲಿ ಸ್ಪೇನ್ ಗಿಂತ ಮೇಲಕ್ಕೇರಿ, ಅಗ್ರಸ್ಥಾನ ತಲುಪಲಿದೆ. 16ರ ಹಂತಕ್ಕೇರಲು ಸ್ಪೇನ್ ಹಾಗೂ ಪೋರ್ಚುಗಲ್ ಎರಡು ತಂಡಗಳು ಅರ್ಹವಾಗಿವೆ.
33 ವರ್ಷ ವಯಸ್ಸಿನ ಸ್ಟಾರ್ ಆಟಗಾರ ರೊನಾಲ್ಡೋ ಅವರು ತಮ್ಮ ತಂಡವನ್ನು ಮುಂದಿನ ಹಂತಕ್ಕೇರಿಸಲು ಶ್ರಮಿಸಿದ್ದು, ಸಾರ್ಥಕವಾಯಿತು.
ಆದರೆ, ಪೋರ್ಚುಗೀಸರಿಗೆ ಮುನ್ನಡೆ ತಂದು ಕೊಟ್ಟಿದ್ದು, ರಿಕಾರ್ಡೋ ಕ್ವಾರೆಸ್ಮಾ. 44ನೇ ನಿಮಿಷದಲ್ಲಿ ಬಾಕ್ಸಿನ ಸ್ವಲ್ಪ ಹೊರಗಡೆ ಎಡಬದಿಯಿಂದ ಸೂಪರ್ ಕಿಕ್ ತೆಗೆದುಕೊಂಡು ಗೋಲು ಬಾರಿಸಿದರು.
ಆದರೆ, ಪಂದ್ಯದ 92ನೇ ನಿಮಿಷದಲ್ಲಿ ಕರೀಮ್ ಅನ್ಸಾರಿಫಾರ್ದ್ ಅದ್ಭುತ ಗೋಲು ಗಳಿಸಿ, ಪೋರ್ಚುಗೀಸರ ಗೆಲುವನ್ನು ತಡೆದು ಪಂದ್ಯ 1-1 ರಲ್ಲಿ ಡ್ರಾ ಆಗುವಂತೆ ಮಾಡಿದರು. ಈ ಪಂದ್ಯದಲ್ಲಿ ರೊನಾಲ್ಡೋ ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದು ಅಭಿಮಾನಿಗಳು ಮರೆಯುವಂತಿಲ್ಲ.
ಈ ಗೆಲುವಿನೊಂದಿಗೆ 5 ಅಂಕ ಗಳಿಸಿದರೂ ಗೋಲುಗಳ ಅಂತರದಿಂದ ಸ್ಪೇನ್ ಬಿ ಗುಂಪಿನ ಅಗ್ರಸ್ಥಾನಕ್ಕೇರಿದೆ. 16ರ ಹಂತದಲ್ಲಿ ಸ್ಪೇನ್ (ಬಿ1) ವಿರುದ್ಧ ರಷ್ಯಾ(ಎಬಿ) ಸೆಣಸಲಿದೆ. ಪೋರ್ಚುಗೀಸ್ (ಬಿ2) ವಿರುದ್ಧ ಉರುಗ್ವೆ(ಎ1) ಕಾದಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications