ಫೀಫಾ ವಿಶ್ವಕಪ್: ಮೊರಾಕೋ ವಿರುದ್ಧ ಪೋರ್ಚುಗಲ್ 1-0ಯ ಗೆಲುವು

ಮಾಸ್ಕೋ, ಜೂ. 20: ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಪೋರ್ಚುಗಲ್-ಮೊರಾಕೋ ಮುಖಾಮುಖಿಯಲ್ಲಿ ಪೋರ್ಚುಗಲ್ 1-0 ಅಂತರದ ಗೆಲುವು ದಾಖಲಿಸಿದೆ. ಪೋರ್ಚುಗಲ್ ನಾಯಕ ಕ್ರಿಸ್ಚಿಯಾನೊ ರೊನಾಲ್ಡೋ ಗೋಲ್ ನೆರವಿನೊಂದಿಗೆ ಪೋರ್ಚುಗಲ್ ಗೆಲುವು ಸಾಧಿಸಿತು.
ಪಂದ್ಯಾರಂಭದಲ್ಲೇ ಪೋರ್ಚುಗಲ್ ಗೋಲ್ ಸಿಡಿಸಿದ್ದು ವಿಶೇಷ. ಅಂದರೆ 4ನೇ ನಿಮಿಷದಲ್ಲಿ ರೊನಾಲ್ಡೋ ಗೋಲ್ ಬಾರಿಸಿ ಪೋರ್ಚುಗಲ್ ಖಾತೆ ತೆರೆದರು. ಪಂದ್ಯದ ಮೊದಲಾರ್ಧದಲ್ಲಿ ಹೆಚ್ಚುವರಿ 3ನಿಮಿಷಗಳನ್ನು ಸೇರಿಸಲಾಯ್ತು.
46ನೇ ನಿಮಿಷದಲ್ಲಿ ಮೊರಾಕೋಗೆ ಫ್ರೀ ಕಿಕ್ ಅವಕಾಶ ಒದಗಿತ್ತು. ಆದರೆ ಅವಕಾಶವನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಮೊರಾಕೋ ವಿಫಲವಾಯಿತು. ಪಂದ್ಯದ ದ್ವಿತೀಯಾರ್ಧ ಆರಂಭದಲ್ಲೇ ಪೋರ್ಚುಗಲ್ ಎರಡನೇ ಗೋಲ್ ಬಾರಿಸಲು ಯತ್ನಿಸಿತು. ರೊನಾಲ್ಡೋ ಒದ್ದ ಚೆಂಡು ಮೊರಾಕೋ ಗೋಲ್ ಪೋಸ್ಟ್ ಗಿಂತ ಕೊಂಚ ಮೇಲಿಂದಾಗಿ ಹಾದು ಹೋಯಿತು.
ಪಂದ್ಯದ ದ್ವಿತೀಯಾರ್ಧದಲ್ಲಿ ಹೆಚ್ಚು ದಾಳಿ ರೀತಿಯ ಆಟ ಕಂಡುಬಂತು. ಎರಡೂ ತಂಡಗಳು ಎಷ್ಟು ಕೊಸರಾಡಿದರೂ ಗೋಲ್ ದಾಖಲಾಗಲಿಲ್ಲ. 58ನೇ ನಿಮಿಷದಲ್ಲಿ ಪೋರ್ಚುಗಲ್ ನ ಬರ್ನಾರ್ಡೊ ಸಿಲ್ವಾ ಪಂದ್ಯದಿಂದ ಹೊರ ನಡೆದರು. ಅವರ ಜಾಗಕ್ಕೆ ಗೆಲ್ಸನ್ ಮಾರ್ಟಿನ್ಸ್ ಸೇರಿಕೊಂಡರು.
ಪಂದ್ಯ ಮುಕ್ಯಾಯ ಹಂತಕ್ಕೆ ಬರುವಾಗ ಇತ್ತಂಡಗಳ ಆಟಗಾರರ ಬದಲಾವಣೆ ಹೆಚ್ಚಾಯಿತು. ಪಂದ್ಯ ಜಿದ್ದಾಜಿದ್ದಿಗೂ ಸಾಕ್ಷಿಯಾಯಿತು. ಮೊರಾಕೋ ತಂಡ ಪೋರ್ಚುಗಲ್ ಗೋಲನ್ನು ಸರಿ ದೂಗಿಸಲು ಎಷ್ಟು ಪ್ರಯತ್ನಪಟ್ಟರೂ ತಂಡದ ಪರ ಗೋಲ್ ದಾಖಲಾಗಲಿಲ್ಲ. ಅಂತಿಮವಾಗಿ ಪೋರ್ಚುಗಲ್ ಗೆಲುವನ್ನು ಸಂಭ್ರಮಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications