ಫೀಫಾ ವಿಶ್ವಕಪ್: ಪೋರ್ಚುಗಲ್ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ ಗೆ

ಮಾಸ್ಕೋ, ಜು. 1: ಫೀಫಾ ವಿಶ್ವಕಪ್ ಶನಿವಾರದ ಅಂತಿಮ 16ನೇ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಉರುಗ್ವೆ 2-1ರ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಉರುಗ್ವೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದು, ಪೋರ್ಚುಗಲ್ ಪ್ರತಿಷ್ಠಿತ ಪಂದ್ಯದಿಂದ ಹೊರನಡೆದಿದೆ.
ಪಂದ್ಯದ ಸ್ಕೋರ್ ಕಾರ್ಡ್, ಕಾಮೆಂಟರಿಗಾಗಿ ಕ್ಲಿಕ್ ಮಾಡಿ
ಪಂದ್ಯದ ಪ್ರಥಮಾರ್ಧದಲ್ಲಿ ಒಂದು ಗೋಲ್ ಮತ್ತು ದ್ವಿತೀಯಾರ್ಧದಲ್ಲಿ ಒಂದು ಗೋಲ್ ಬಾರಿಸಿದ ಉರುಗ್ವೆ ವಿಜಯದ ನಗೆ ಬೀರಿತು. ಸ್ಟಾರ್ ಆಟಗಾರ ರೊನಾಲ್ಡೋ ಇದ್ದ ಪೋರ್ಚುಗಲ್ ಪಂದ್ಯದ ದ್ವಿತೀಯಾರ್ಧದಲ್ಲಿ ಒಂದು ಗೋಲ್ ದಾಖಲಿಸಿ ಸೋಲೊಪ್ಪಿಕೊಂಡಿತು.
ಉರುಗ್ವೆಯ ಎಡಿಸನ್ ಕವಾನಿ ಅವರು 7ನೇ ನಿಮಿಷದಲ್ಲಿ ಮೊದಲ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ ದ್ವಿತೀಯಾರ್ಧದಲ್ಲಿ ಪೋರ್ಚುಗಲ್ ನ ಪೆಪೆ ಅವರು 55ನೇ ನಿಮಿಷದಲ್ಲಿ ಗೋಲ್ ಸಿಡಿಸಿ ಅಂಕವನ್ನು ಸರಿದೂಗಿಸಿದ್ದರು. ಆದರೆ ಉರುಗ್ವೆಯ ಕವಾನಿ ಅವರು 62ನೇ ನಿಮಿಷದಲ್ಲಿ ಬಾರಿಸಿದ ಎರಡನೆಯ ಗೋಲ್ ಉರುಗ್ವೆಯನ್ನು ಗೆಲುವಿನ ಗೆರೆ ದಾಟಿಸಿತು.
ಶನಿವಾರದ ಅಂತಿಮ 16ನೇ ಸುತ್ತಿನ ಎರಡೂ ಪಂದ್ಯಗಳು ಸ್ಟಾರ್ ಆಟಗಾರ ತಂಡಕ್ಕೆ ವಿರುದ್ಧ ಫಲಿತಾಂಶ ನೀಡಿದ್ದು ವಿಶೇಷವೆನಿಸಿತು. ಮೊದಲ ಪಂದ್ಯದಲ್ಲಿ ಮೆಸ್ಸಿ ಬಳಗವಾದ ಅರ್ಜೆಂಟೀನಾ ತಂಡ ಫ್ರಾನ್ಸ್ ಎದುರು 4-3ರ ಸೋಲು ಕಂಡರೆ, ಇತ್ತ ರೊನಾಲ್ಡೋ ಮುಂದಾಳತ್ವದ ಪೋರ್ಚುಗಲ್ ಕೂಡ ನಿರಾಶೆಯನ್ನನುಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications