FIFA World Cup 2022: ಜಿಯೋ ಸಿನಿಮಾದಲ್ಲಿ ಫುಟ್ಬಾಲ್ ಲೈವ್ ನೋಡಿ ಬೆಚ್ಚಿದ ಅಭಿಮಾನಿಗಳು! ಐಪಿಎಲ್ ಕಥೆ ಏನು?

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ಕ್ಕೆ ಭಾನುವಾರ ಅದ್ಧೂರಿ ಚಾಲನೆ ದೊರೆತಿದೆ. ಮುಂದಿನ 28 ದಿನಗಳಲ್ಲಿ 64 ಪಂದ್ಯಗಳು ನಡೆಯಲಿವೆ. ವಿಶ್ವದಾದ್ಯಂತ 500 ಕೋಟಿಗೂ ಹೆಚ್ಚು ಜನ ಈ ಬಾರಿ ಫುಟ್ಬಾಲ್ ವಿಶ್ವಕಪ್ ವೀಕ್ಷಣೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಭಾರತದಲ್ಲೂ ಕೋಟ್ಯಂತರ ಮಂದಿ ಫುಟ್ಬಾಲ್ ಅಭಿಮಾನಿಗಳಿದ್ದಾರೆ. ಅದರಲ್ಲೂ ಕೇರಳ, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿದಂತೆ ಹಲವೆಡೆ ಫುಟ್ಬಾಲ್‌ಗೆ ಹೆಚ್ಚಿನ ಕ್ರೇಜ್ ಇದೆ. ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಭಾನುವಾರ ಪಂದ್ಯಾವಳಿಗೆ ಚಾಲನೆ ನೀಡಿದ ನಂತರ ಮೊದಲ ಪಂದ್ಯ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವೆ ನಡೆಯಿತು. ಮೊದಲನೇ ಪಂದ್ಯದಲ್ಲಿ ಈಕ್ವೆಡಾರ್ 2-0 ಅಂತರದಲ್ಲಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಜಿಯೋ ಸಿನಿಮಾ ಈಬಾರಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳನ್ನು ನೇರಪ್ರಸಾರ ಮಾಡುತ್ತಿದೆ. ಆದರೆ, ಮೊದಲ ದಿನ ಲೈವ್ ವೀಕ್ಷಿಸಿದ ಜನ ಬೆಚ್ಚಿ ಬಿದ್ದಿದ್ದಾರೆ.
ಜಿಯೋ ಸಿನಿಮಾದ ಲೈವ್ ಸ್ಟ್ರೀಮಿಂಗ್ ಸಾಕಷ್ಟು ಕಳಪೆಯಾಗಿದೆ ಎಂದು ಅಭಿಮಾನಿಗಳು ದೂರಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಹಲವರು ತಮ್ಮ ಬೇಸರ ಹೊರಹಾಕಿದ್ದಾರೆ.
ಕಳಪೆ ಸ್ಟ್ರೀಮಿಂಗ್ ಅನುಭವ ಎಂದು ದೂರು
ವರ್ಣರಂಜಿತ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಿದ ಅಭಿಮಾನಿಗಳಿಗೆ ಕಳಪೆ ಲೈವ್ ಸ್ಟ್ರೀಮಿಂಗ್‌ನಿಂದ ಸಾಕಷ್ಟು ಕಿರಿಕಿಯಾಗಿದೆ. ಲೈವ್ ಸ್ಟ್ರೀಮಿಂಗ್ ವೇಳೆಯಲ್ಲಿ ಬಫರಿಂಗ್ ಸಮಸ್ಯೆ ಹೆಚ್ಚಾಗಿತ್ತು. ಉದ್ಘಾಟನಾ ಸಮಾರಂಭದ ನಂತರ ಕತಾರ್ ಮತ್ತು ಈಕ್ವೆಡಾರ್ ನಡುವಿನ ಪಂದ್ಯವನ್ನು ವೀಕ್ಷಿಸುವಾಗ ಕೂಡ ಲೈವ್ ಸ್ಟ್ರೀಮಿಂಗ್‌ನಲ್ಲಿ ಸಾಕಷ್ಟು ಸಮಸ್ಯೆಯಾಗಿದೆ.
ವಿಶ್ವದ ಅತಿ ದೊಡ್ಡ ಪಂದ್ಯಾವಳಿ ಉತ್ತಮ ಸ್ಟ್ರೀಮಿಂಗ್ ಹೊಂದಿಲ್ಲದಿರುವ ಬಗ್ಗೆ ಅನೇಕ ಬಳಕೆದಾರರು ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಭಾರತದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಲೈವ್‌ನಲ್ಲಿ ವೀಕ್ಷಿಸಲು ಬೇರೆ ಯಾವುದಾರೂ ಮಾರ್ಗವಿದ್ದರೆ ಹೇಳಿ ಎಂದು ಕೇಳಿದ್ದಾರೆ.
IND vs NZ: ನೇಪಿಯರ್ ತಲುಪಿದ ಟೀಂ ಇಂಡಿಯಾ, ಸರಣಿ ವೈಟ್‌ವಾಷ್ ಮಾಡುವ ಉತ್ಸಾಹದಲ್ಲಿ ಹಾರ್ದಿಕ್ ಪಾಂಡ್ಯ ಪಡೆ

ಅಪ್ಲಿಕೇಶನ್ ಅಪ್‌ಡೇಟ್ ಮಾಡಿದ್ರೂ ಸಮಸ್ಯೆ
ಟ್ವಿಟರ್‌ನಲ್ಲಿ ಅಭಿಮಾನಿಗಳು ದೂರುತ್ತಿದ್ದಂತೆ ಜಿಯೋ ಸಿನಿಮಾದ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರತಿಕ್ರಿಯೆ ನೀಡಿತು. ಅತ್ಯುತ್ತಮ ಲೈವ್ ಸ್ಟ್ರೀಮಿಂಗ್‌ಗಾಗಿ ಅಪ್ಲಿಕೇಶನ್ ನವೀಕರಿಸಬೇಕು ಎಂದು ಹೇಳಿತು. ಅಪ್ಲಿಕೇಶನ್ ನವೀಕರಣ ಮಾಡಿದ ನಂತರವೂ ಯಾವುದೇ ಸುಧಾರಣೆಯಾಗಲಿಲ್ಲ, ಬಳಕೆದಾರರು ಮತ್ತೆ ಅದೇ ಸಮಸ್ಯೆಯನ್ನು ಅನುಭವಿಸಿದರು.
ಫಿಫಾ ವಿಶ್ವಕಪ್ ಲೈವ್ ಅನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ. ಏರ್ ಟೆಲ್, ವೊಡಾ, ಜಿಯೋ ಮತ್ತು ಬಿಎಸ್‌ಎನ್‌ಎಲ್ ಚಂದಾದಾರರು ಉಚಿತವಾಗಿ ವೀಕ್ಷಿಸಬಹುದು.

ಐಪಿಎಲ್ 2023ರ ನೇರಪ್ರಸಾರ ಹೀಗಾದರೆ?
ಭಾರತದಲ್ಲಿ ಫುಟ್ಬಾಲ್ ವಿಶ್ವಕಪ್ ನೇರಪ್ರಸಾರ ಮಾಡಲು ರಿಲಯನ್ಸ್ ವೈಯಾಕಾಂ18 500 ಕೋಟಿ ರುಪಾಯಿ ಪಾವತಿಸಿದೆ. 2023ರ ಐಪಿಎಲ್ ನೇರಪ್ರಸಾರ ಮಾಡುವ ಹಕ್ಕನ್ನು 23,758 ಕೋಟಿ ರುಪಾಯಿಗಳಿಗೆ ಪಡೆದುಕೊಂಡಿದೆ. ಐಪಿಎಲ್ ಪಂದ್ಯಕ್ಕೆ ವೀಕ್ಷಕರನ್ನು ಸೆಳೆಯಲು, ಕ್ರೀಡಾಭಿಮಾನಿಗಳು ಜಿಯೋ ಸಿನಿಮಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲಿ ಎಂದು ಫಿಫಾ ವಿಶ್ವಕಪ್ ವೀಕ್ಷಣೆಗೆ ಯಾವುದೇ ಶುಲ್ಕ ವಿಧಿಸಿಲ್ಲ. ಇದು ಮಾರ್ಕೆಟಿಂಗ್ ತಂತ್ರ ಎಂದು ಹೇಳಲಾಗಿದೆ.
ಆದರೆ, ಫಿಫಾ ವಿಶ್ವಕಪ್ ಲೈವ್ ಸ್ಟ್ರೀಮಿಂಗ್ ಈ ರೀತಿ ಕಳಪೆಯಾಗಿದ್ದು, ಐಪಿಎಲ್‌ನಲ್ಲಿ ಕೂಡ ಹೀಗಾದರೆ ಹೇಗೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಜಿಯೋ ಸಿನಿಮಾ ಇದೇ ಮೊದಲ ಬಾರಿಗೆ ನೇರ ಪ್ರಸಾರ ಮಾಡುತ್ತಿದ್ದು, ಈ ಮೊದಲು ಈ ರೀತಿಯ ಪಂದ್ಯಾವಳಿಗಳನ್ನು ನೇರಪ್ರಸಾರ ಮಾಡಿದ ಅನುಭವ ಹೊಂದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications