ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ನೇಪಿಯರ್ ತಲುಪಿದ ಟೀಂ ಇಂಡಿಯಾ, ಸರಣಿ ವೈಟ್‌ವಾಷ್ ಮಾಡುವ ಉತ್ಸಾಹದಲ್ಲಿ ಹಾರ್ದಿಕ್ ಪಾಂಡ್ಯ ಪಡೆ

IND vs NZ: Team India Reached Nepier For The 3rd T20I, Hardik Pandya And Co Aiming For Whitewash The Series

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 65 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ 3ನೇ ಪಂದ್ಯಕ್ಕಾಗಿ ನೇಪಿಯರ್ ತಲುಪಿದೆ. ನವೆಂಬರ್ 22ರ ಮಂಗಳವಾರ ಇಲ್ಲಿನ ಮೆಕ್‌ಲೀನ್ ಪಾರ್ಕ್‌ನಲ್ಲಿ ಸರಣಿಯ ಕೊನೆಯ ಪಂದ್ಯವನ್ನು ಆಡಲಿದೆ.

ಸರಣಿಯ ಮೊದಲನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ವೈಟ್‌ವಾಷ್ ಮಾಡುವ ಉತ್ಸಾಹದಲ್ಲಿದೆ.

IND vs NZ: ಟಿ20ನಲ್ಲಿ ನಂ.1 ಪಟ್ಟ ಪಡೆದಿರುವ ಸೂರ್ಯಕುಮಾರ್ ಮುಂದಿನ ಗುರಿ ಇದು!IND vs NZ: ಟಿ20ನಲ್ಲಿ ನಂ.1 ಪಟ್ಟ ಪಡೆದಿರುವ ಸೂರ್ಯಕುಮಾರ್ ಮುಂದಿನ ಗುರಿ ಇದು!

ನೇಪಿಯರ್ ತಲುಪಿದ ನಂತರ ಹಲವು ಟೀಂ ಇಂಡಿಯಾ ಆಟಗಾರರು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದರೆ. ಕುಲದೀಪ್ ಯಾದವ್ ತಂಡದ ಇತರೆ ಆಟಗಾರರ ಜೊತೆ ನೇಪಿಯರ್ ನಗರದ ಬೀದಿಗಳಲ್ಲಿ ಓಡಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸೋಮವಾರ ಸಂಜೆ ಟೀಂ ಇಂಡಿಯಾ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದು, ಮಂಗಳವಾರದ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಿದೆ. ಸೂರ್ಯಕುಮಾರ್ ಯಾದವ್ ಹೊರತುಪಡಿಸಿ 2ನೇ ಟಿ20 ಪಂದ್ಯದಲ್ಲಿ ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕೋಚ್ ವಿವಿಎಸ್ ಲಕ್ಷ್ಮಣ್ ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ. ಮೂರನೇ ಟಿ20 ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದು, ಟಿಮ್ ಸೌಥಿ ನಾಯಕರಾಗಲಿದ್ದಾರೆ.

ರಿಷಬ್‌ ಪಂತ್‌ಗೆ ಮತ್ತೊಂದು ಅವಕಾಶ?

ರಿಷಬ್‌ ಪಂತ್‌ಗೆ ಮತ್ತೊಂದು ಅವಕಾಶ?

ಸಾಕಷ್ಟು ಚರ್ಚೆಯ ನಂತರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ರಿಷಬ್ ಪಂತ್ ಮತ್ತು ಇಶಾನ್ ಕಿಶಾನ್ ಜೋಡಿ ಭಾರತದ ಪರವಾಗಿ ಇನ್ನಿಂಗ್ಸ್ ಆರಂಭಿಸಿದರು. ರಿಷಬ್ ಪಂತ್ 13 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಮತ್ತೆ ನಿರಾಸೆ ಮೂಡಿಸಿದರು.

ಪಂತ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದರು. ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳನ್ನಾಡಿದ್ದ ಪಂತ್ ರನ್ ಗಳಿಸಲಿಲ್ಲ, ನಂತರ ನ್ಯೂಜಿಲೆಂಡ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದರೂ ಕೂಡ ರನ್ ಗಳಿಸಲಿಲ್ಲ. ಮೂರನೇ ಪಂದ್ಯದಲ್ಲಿ ಕೂಡ ಅವರು ಅವಕಾಶ ಪಡೆಯುವ ಸಾಧ್ಯತೆ ಇದ್ದು, ಉತ್ತಮ ಪ್ರದರ್ಶನ ನೀಡಬೇಕಾಗಿದೆ.

ನೇಪಿಯರ್ ಹವಾಮಾನ ವರದಿ

ನೇಪಿಯರ್ ಹವಾಮಾನ ವರದಿ

ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಮೌಂಗನುಯಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದ ಸಮಯದಲ್ಲಿ ಕೂಡ ಮಳೆಯಿಂದಾಗಿ ಅರ್ಧಗಂಟೆಗಳ ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ಆದರೆ, ನೇಪಿಯರ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಆತಂಕವಿಲ್ಲ. ನೇಪಿಯರ್ ನಲ್ಲಿ ಮಂಗಳವಾರ ಬೆಳಿಗ್ಗೆ ಮಳೆಯಾಗುವ ಸಾಧ್ಯತೆ ಇದ್ದರೂ, ಪಂದ್ಯದ ಆರಂಭದ ವೇಳೆಗೆ ಮಳೆ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮೆಕ್ ಲೀನ್ ಪಿಚ್‌ ಬ್ಯಾಟಿಂಗ್ ಸ್ನೇಹಿ ಆಗಿದ್ದು, ಮತ್ತೊಂದು ಹೈ ಸ್ಕೋರ್ ಪಂದ್ಯವನ್ನು ನಿರೀಕ್ಷಿಸಬಹುದು. ಇಲ್ಲಿ ಸರಾಸರಿ ಮೊತ್ತ 182 ಆಗಿದೆ. ಇಂಗ್ಲೆಂಡ್ ಇಲ್ಲಿ 20 ಓವರ್ ಗಳಲ್ಲಿ 241 ರನ್ ಗಳಿಸಿರುವುದು ಹೆಚ್ಚಿನ ಸ್ಕೋರ್ ಆಗಿದೆ.

ಮೂರನೇ ಪಂದ್ಯಕ್ಕೆ ಸಂಭಾವ್ಯ XI

ಮೂರನೇ ಪಂದ್ಯಕ್ಕೆ ಸಂಭಾವ್ಯ XI

ಭಾರತ: ಇಶಾನ್ ಕಿಶನ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ(ನಾಯಕ), ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಿಚೆಲ್ ಬ್ರೇಸ್‌ವೆಲ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ (ನಾಯಕ), ಆಡಮ್ ಮಿಲ್ನೆ, ಲಾಕಿ ಫರ್ಗುಸನ್

Story first published: Monday, November 21, 2022, 12:26 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X