FIFA World Cup Qualifiers: ಕತಾರ್‌ಗೆ ತಲೆ ಬಾಗಿದ ಬ್ಲೂ ಟೈಗರ್ಸ್

ದೋಹಾ: ದೋಹಾದ ಜಾಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಗುರುವಾರ (ಜೂನ್ 3) ನಡೆದ ಫೀಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಕತಾರ್ ವಿರುದ್ಧ ಭಾರತ 0-1ರ ಸೋಲನುಭವಿಸಿದೆ. ಇದರೊಂದಿಗೆ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳುವ ಭಾರತದ ಆಸೆಗೆ ತಣ್ಣೀರು ಬಿದ್ದಿದೆ.
ದ್ವಿತೀಯ ಸುತ್ತಿನ ಈ ಪಂದ್ಯದಲ್ಲಿ 17ನೇ ನಿಮಿಷದಲ್ಲಿ ಭಾರತದ ಡಿಫೆಂಡರ್ ರಾಹುಲ್ ಭೇಕೆಗೆ ರೆಡ್ ಕಾರ್ಡ್ ನೀಡಲಾಯ್ತು ಈಗಾಗಿ 10 ಮಂದಿಯ ತಂಡ ಸೆಣಸಾಡಿ ಸೋಲಬೇಕಾಯ್ತು. ಪಂದ್ಯದ ಆರಂಭಿಕ 15 ನಿಮಿಗಳೊಳಗೆ ಗೋಲ್ ದಾಖಲಾಗಿರಲಿಲ್ಲ. ಆದರೆ ಪ್ರಥಮಾರ್ಧದಲ್ಲಿ ಕತಾರ್‌ನ ಮಿಡ್ ಫೀಲ್ಡರ್ ಹಬ್ದಿಲ್ಲಾಝೀಝ್ ಹತೆಮ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು.
33ನೇ ನಿಮಿಷದಲ್ಲಿ ಹಬ್ದಿಲ್ಲಾಝೀಝ್ ಹತೆಮ್ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ ಭಾರತ ಎಷ್ಟು ಕೊಸರಾಡಿದರೂ ಗೋಲ್ ಬಾರಿಸಲಾಗಲಿಲ್ಲ. ಇದಕ್ಕೂ ಹಿಂದಿನ ಅಂದರೆ ಸೆಪ್ಟೆಂಬರ್ 2019ರಲ್ಲಿ ನಡೆದಿದ್ದ ಮೊದಲ ಹಂತದಲ್ಲಿ ಭಾರತ-ಕತಾರ್ ಮೊದಲ ಮುಖಾಮುಖಿಯಲ್ಲಿ ಗೋಲ್ ದಾಖಲಾಗದೆ ಪಂದ್ಯ ಡ್ರಾ ಅನ್ನಿಸಿತ್ತು.
ಈ ಪಂದ್ಯದ ಬಳಿಕ ಗ್ರೂಪ್ 'ಇ' ಪಾಯಿಂಟ್ಸ್ ಟೇಬಲ್‌ನಲ್ಲಿ ಕತಾರ್ ಮೊದಲ ಸ್ಥಾನದಲ್ಲಿದೆ. ಓಮನ್, ಅಫ್ಘಾನಿಸ್ತಾನ, ಭಾರತ, ಬಾಂಗ್ಲಾದೇಶ ಅನಂತರದ ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications