ಫೀಫಾ ವಿಶ್ವಕಪ್: 1-1ರಿಂದ ಅರ್ಜೆಂಟೀನಾ vs ಐಸ್ ಲ್ಯಾಂಡ್ ಪಂದ್ಯ ಡ್ರಾ

ಮಾಸ್ಕೋ, ಜೂ. 16: ಫೀಫಾ ವಿಶ್ವಕಪ್ 2018ರ ಡಿ ಗ್ರೂಪ್ ನ ಅರ್ಜೆಂಟೀನಾ ಮತ್ತು ಐಸ್ ಲ್ಯಾಂಡ್ ನಡುವಣ ಕುತೂಹಲಕಾರಿ ಪಂದ್ಯದಲ್ಲಿ ಎರಡೂ ತಂಡಗಳು 1-1ರ ಸಮಬಲ ಸಾಧಿಸಿವೆ.
ಪಂದ್ಯದ ಗೋಲ್ ವಿವರ, ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ಸೆರ್ಗಿಯೋ ಅಗುರೊ ಅವರು 19ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಮೊದಲ ಗೋಲ್ ಸಿಡಿಸಿದರೆ, 23ನೇ ನಿಮಿಷದಲ್ಲಿ ಐಸ್ ಲ್ಯಾಂಡ್ ಪರ ಆಲ್ಫ್ರೆಡ್ ಫಿನ್ಬೋಗಾಸನ್ ಗೋಲ್ ದಾಖಲಿಸಿ ಪಂದ್ಯವನ್ನು ಡ್ರಾ ಗೊಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಎರಡು ಗೋಲ್ ದಾಖಲಾಗಿದ್ದು ಬಿಟ್ಟರೆ, ದ್ವಿತೀಯಾರ್ಧ ಇತ್ತಂಡಗಳ ಭರ್ಜರಿ ಕಾದಾಟಕ್ಕೆ ಸಾಕ್ಷಿಯಾಯಿತು.
ಶನಿವಾರದ ಎರಡನೇ ಪಂದ್ಯದಲ್ಲಿನ ಅರ್ಜೆಂಟೀನಾ ಮತ್ತು ಐಸ್ ಲ್ಯಾಂಡ್ ತಂಡಗಳ ಮುಖಾಮುಖಿಯಲ್ಲಿ 24ನೇ ನಿಮಿಷ ಮುಕ್ತಾಯಕ್ಕೆ ಎರಡೂ ತಂಡಗಳು 1-1ರ ಮುನ್ನಡೆಯಲ್ಲಿತ್ತು.
ಅರ್ಜೆಂಟೀನಾ ಪರ ಸೆರ್ಗಿಯೋ ಅಗುರೊ ಅವರು 19ನೇ ನಿಮಿಷದಲ್ಲಿ ಮೊದಲ ಗೋಲ್ ಸಿಡಿಸಿ ಅರ್ಜೆಂಟೀನಾಕ್ಕೆ 1-0ಯ ಮುನ್ನಡೆ ತಂದು ಕೊಟ್ಟಿದ್ದರು. ಆದರೆ 23ನೇ ನಿಮಿಷದಲ್ಲಿ ಐಸ್ ಲ್ಯಾಂಡ್ ಕೂಡ ಗೋಲ್ ಖಾತೆ ತೆರೆದು ಅಂಕವನ್ನು 1-1ಕ್ಕೆ ಸರಿದೂಗಿಸಿತು.
ಅನಂತರ ಬಹಳ ಹೊತ್ತಿನವರೆಗೆ ಎರಡೂ ತಂಡಗಳಿಂದಲೂ ಗೋಲ್ ದಾಖಲಾಗಲಿಲ್ಲ. 62ನೇ ನಿಮಿಷದಲ್ಲಿ ಐಸ್ ಲ್ಯಾಂಡ್ ನ ಜೊಹಾನ್ ಗುಡ್ಮಂಡ್ಸನ್ ಅವರು ಗಾಯಗೊಂಡು ಮೈದಾನದಿಂದ ನಿರ್ಗಮಿಸಿದರು. ಗಿಸ್ಸಾಸನ್ ಅವರು ತೆರವಾದ ಸ್ಥಾನವನ್ನು ತುಂಬಿದರು.
63ನೇ ನಿಮಿಷದಲ್ಲಿ ಅರ್ಜೆಂಟೀನಾಕ್ಕೆ ಪೆನಾಲ್ಟಿ ಶೂಟ್ ಗೆ ಅವಕಾಶ ದೊರೆಯಿತು. ಆದರೆ ಮೆಸ್ಸಿ ಒದ್ದ ಚೆಂಡು ಗೋಲ್ ತರಲಿಲ್ಲ. ಈ ಸಂದರ್ಭ ಐಸ್ ಲ್ಯಾಂಡ್ ಗೋಲ್ ಕೀಪರ್ ಕೈಚಳಕ ಮೆರೆದರು.
87ನೇ ನಿಮಿಷದಲ್ಲೂ ಅರ್ಜೆಂಟೀನಾ ಗೋಲ್ ಗಾಗಿ ಪ್ರಯತ್ನಿಸಿತಾದರೂ ಐಸ್ ಲ್ಯಾಂಡ್ ಗೋಲ್ ಕೀಪರ್ ಗೋಲ್ ತಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications