ಗೋವಾದ ಮನೆಯಲ್ಲಿ ಬೆಂಗಳೂರಿನ ಸಮಬಲದ ಹೋರಾಟ

ಗೋವಾ, ಅಕ್ಟೋಬರ್ 28: ಭಾರತದ ಅಂತಾರಾಷ್ಟ್ರೀಯ ಆಟಗಾರ ಉದಾಂತ್ ಸಿಂಗ್ 62ನೇ ನಿಮಿಷದಲ್ಲಿ ಬೆಂಗಳೂರು ಪರ ಗೋಲು ಗಳಿಸಿದರೆ ಫರಾನ್ ಕೊರೊಮಿನಾಸ್ (90+ನಿಮಿಷ ) ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ಕಳೆದ ಬಾರಿಯ ಫೈನಲಿಸ್ಟ್ ಗಳ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಕೊನೆಗೊಂಡಿತು.
ಬೆಂಗಳೂರು ತಂಡ ಪಂದ್ಯವನ್ನು ಗೆದ್ದೇ ಬಿಟ್ಟಿತು ಎಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ಆಶಿಕ್ ಕುರುನಿಯನ್ ಕೊನೆ ಕ್ಷಣದಲ್ಲಿ ಮಾಡಿದ ಪ್ರಮಾದ ಗೋವಾಕ್ಕೆ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟಿತು. ಪೆನಾಲ್ಟಿ ಹೊಡೆತವನ್ನು ಫರಾನ್ ಕೊರೊಮಿನಾಸ್ ಯಾವುದೇ ಪ್ರಮಾದ ಮಾಡದೆ ಗೋಲು ಗಳಿಸಿದರು.
ಗೋವಾ ವಿರುದ್ಧ ಇದುವರೆಗೂ ಬೆಂಗಳೂರು ಮೇಲುಗೈ ಸಾಧಿಸಿದೆ. ಇನ್ನೊಂದೆಡೆ ಗೋವಾ ತಂಡ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು, ಫರಾನ್ ಕೊರೊಮಿನಾಸ್ ಮತ್ತು ಸೆಮಿನಲಿನ್ ಡೌನ್ಗೆಲ್ ಅವರಂಥ ಆಟಗಾರರನ್ನು ಹೊಂದಿರುವ ಗೋವಾ ತಂಡವನ್ನು ಮನೆಯಂಗಣದಲ್ಲಿ ಸೋಲಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಉತ್ತರ ಅಂಗಣದಲ್ಲೇ ಸಿಕ್ಕಿದೆ.

ಗೋಲಿನ ಖಾತೆ ತೆರೆದ ಉದಾಂತ
62ನೇ ನಿಮಿಷದಲ್ಲಿ ಮಿಡ್ ಫೀಲ್ಡರ್ ಉದಾಂತ್ ಸಿಂಗ್ ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ಹಾಕಿಕೊಂಡಿತು. ಇದು ಈ ಋತುವಿನ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದು ಬೆಂಗಳೂರು ಪಾಲಿನ ಮೊದಲ ಗೋಲ್. ಯುವ ಆಟಗಾರ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಪರ ಗಳಿಸಿದ ಆರನೇ ಗೋಲು ಇದಾಗಿದೆ, ಕೀಪರ್ ಚೆಂಡನ್ನು ಬಹಳ ದೂರಕ್ಕೆ ತುಳಿದರು.
ಮ್ಯಾನುಯೆಲ್ ಒನವ್ ಹೆಡೆರ್ ಮೂಲಕ ನಿಯಂತ್ರಿಸಿದರು. ಉದಾಂತ್ ಸಿಂಗ್ ಚೆಂಡನ್ನು ನಿಯಂತ್ರಿಸುವಲ್ಲಿ ಸಫಲರಾದರು. ಅಲ್ಲೇ ಇದ್ದ ಮೌರ್ತಾದ ಫಾಲ್ ಅವರನ್ನು ವಂಚಿಸಿ ಗೋಲ್ ಬಾಕ್ಸ್ ಕೆಡೆಗೆ ಚೆಂಡನ್ನು ಕೊಂಡೊಯ್ದರು, ಈಗ ಕೀಪರ್ ಹೊರತಾಗಿ ಯಾರ ಅಡ್ಡಿಯೂ ಇರಲಿಲ್ಲ, ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.

ರಕ್ಷಣಾತ್ಮಕ ಆಟ
ಎರಡು ಬಲಿಷ್ಠ ತಂಡಗಳು ಆಡಲು ಆರಂಭಿಸಿದರೆ ಅಲ್ಲಿ ಸುಲಭವಾಗಿ ಗೋಲನ್ನು ನಿರೀಕ್ಷಿಸಲಾಗದು. ಗೋವಾ ಮತ್ತು ಬೆಂಗಳೂರು ಎಫ್ ಸಿ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಇದಕ್ಕೆ ಸಾಕ್ಷಿಯಾಯಿತು. ಉತ್ತಮ ರೀತಿಯಲ್ಲಿ ಇತ್ತಂಡಗಳು ಚೆಂಡನ್ನು ನಿಯಂತ್ರಿಸಿ ಎದುರಾಳಿಯ ಗೋಲ್ ಬಾಕ್ಸ್ ಕಡೆಗೆ ಕೊಂಡೊಯ್ದರೂ ಗೋಲು ಗಳಿಸುವಲ್ಲಿ ವಿಫಲವಾದವು. ಗೋವಾ ತಂಡಕ್ಕೆ ಫ್ರೀ ಕಿಕ್ ಒಂದು 19ನಿಮಿಷದಲ್ಲಿ ಸಿಕ್ಕಿದ್ದನ್ನು ಹೊರತುಪಡಿಸಿದರೆ ಎಲ್ಲಿಯೂ ಉತ್ತಮ ಅವಕಾಶ ಕೂಡಿ ಬರಲಿಲ್ಲ. ಪರಿಣಾಮ0-0ಯಲ್ಲಿ ಪ್ರಥಮಾರ್ಧ ಅಂತ್ಯ. ದಿಮಸ್ ಡೆಲ್ಗಡೊ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದರು.
ಐಎಸ್‌ಎಲ್: ಗೋವಾದ ಫುಟ್ಬಾಲ್ ಪ್ರೀತಿಗೆ ಹೊಸಬೆಳಕು 'ಎಫ್‌ಸಿ ಗೋವಾ'

ಕಳೆದ ಬಾರಿಯ ಫೈನಲ್
ಇಂಡಿಯನ್ ಸೂಪರ್ ಲೀಗ್ ನ 9ನೇ ಪಂದ್ಯದಲ್ಲಿ ಎಫ್ ಸಿ ಗೋವಾ ಹಾಗೂ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡಗಳು ಮುಖಾಮುಖಿ ಯಾದವು. ಇದು ಒಂದು ರೀತಿಯಲ್ಲಿ ಕಳೆದ ಬಾರಿಯ ಫೈನಲ್ ನ ಪುನರಾವರ್ತನೆ ಎಂದರೆ ತಪ್ಪಾಗಲಾರದು. ಕಳೆದ ವರ್ಷ ಫೈನಲ್ ನಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು. ಆ ನಂತರ ಇದೆ ಮೊದಲ ಬಾರಿಗೆ ಅಂಗಣಕ್ಕಿಳಿದವು. ಪರಿಸ್ಥಿತಿ ಫೈನಲ್ ರೀತಿಯಲ್ಲಿ ಇಲ್ಲದೇ ಇರಬಹುದು ಆದರೆ ಪಂದ್ಯದಲ್ಲಿ ಕುತೂಹಲ ಇರುವುದಂತೂ ಸ್ಪಷ್ಟ. ಏಕೆಂದರೆ ಐಎಸ್ ಎಲ್ ನಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿವೆ.

ಬೆಂಗಳೂರಿಗೆ ಜಯದ ಅಗತ್ಯವಿದೆ
ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿದ ಬಳಿಕ ಬೆಂಗಳೂರಿಗೆ ಇಲ್ಲಿ ಜಯದ ಅಗತ್ಯವಿದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಗೋಲ್ ಗಳಿಸುವಲ್ಲಿ ವಿಫಲವಾಗಿದ್ದರೂ ಸಾಕಷ್ಟು ಬಾರಿ ಅವಕಾಶಗಳನ್ನು ಸೃಷ್ಟಿ ಮಾಡಿತ್ತು.ಸುನಿಲ್ ಛೆಟ್ರಿ , ಉದಾಂತ್ ಸಿಂಗ್, ಆಶಿಕ್ ಕುರುನಿಯನ್ ಅವರಂಥ ಆಟಗಾರರಿಂದ ಕೂಡಿರುವ ತಂಡಕ್ಕೆ ಗೋಲು ಗಳಿಸುವುದು ಅಷ್ಟು ಕಷ್ಟ ಅಲ್ಲ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications