ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗೋವಾದ ಫುಟ್ಬಾಲ್ ಪ್ರೀತಿಗೆ ಹೊಸಬೆಳಕು 'ಎಫ್‌ಸಿ ಗೋವಾ'

By Isl Media
ISL 2019: FC Goa, Rekindling Goa’s love for football

ಗೋವಾ, ಅಕ್ಟೋಬರ್ 12: ಒಂದಾನೊಂದು ಕಾಲದಲ್ಲಿ ಗೋವಾ ಫುಟ್ಬಾಲ್ ಬಲಿಷ್ಠ ನಾಲ್ಕು ಫುಟ್ಬಾಲ್ ಕ್ಲಬ್ ಗಳ ಯಶಸ್ಸಿನೊಂದಿಗೆ ಆತುಕೊಂಡಿತ್ತು. ಅದು ಕೋಲ್ಕತ್ತಾದ ಮೂರು ಕ್ಲಬ್ ಗಳಿಗಿಂತಲೂ ಬಲಿಷ್ಠವಾಗಿತ್ತು. ಡೆಂಪೋ ಸ್ಪೋರ್ಟ್ಸ್ ಕ್ಲಬ್, ಸಾಲಗಾವ್ಕರ್ ಸ್ಪೋರ್ಟ್ಸ್ ಕ್ಲಬ್, ಚುರ್ಚಿಲ್ ಬ್ರದರ್ಸ್ ಹಾಗೂ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ಇವು ಭಾರತದ ಫುಟ್ಬಾಲ್ ನಲ್ಲಿ ಅತ್ಯಂತ ಪ್ರತಿಷ್ಠಿತ ಕ್ಲಬ್ ಎನಿಸಿದ್ದವು. ಇವುಗಳಲ್ಲಿ ಮೂರು ಕ್ಲಬ್ ಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದಿವೆ. ಸ್ಪೋರ್ಟಿಂಗ್ ಕ್ಲಬ್ ಹಲವು ಬಾರಿ ಪ್ರಶಸ್ತಿ ಸುತ್ತಿನ ಸಮೀಪ ಬಂದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು.

ಈಗ ಗೋವಾದ ಫುಟ್ಬಾಲ್ ಅಂದರೆ ಅದು ವಿಭಿನ್ನ ಜಗತ್ತು. ಭಾರತದ ಅಗ್ರ ಡಿವಿಜನ್ ಫುಟ್ಬಾಲ್ ಲೀಗ್ ನಲ್ಲಿ ಪ್ರಭುತ್ವ ಸಾಧಿಸಿ ನಂತರ ಅಸ್ಥಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿತ್ತು. ಆದರೆ ಸಂದಿಗ್ಧ ಪರಿಸ್ಥಿತಿಯಿಂದ ಚೇತರಿಸಿದ ಗೋವಾ ಫುಟ್ಬಾಲ್ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಫ್ ಸಿ ಗೋವಾ ಮೂಲಕ ಆ ವಲಯದ ಫುಟ್ಬಾಲ್ ನಲ್ಲಿ ಹೊಸ ಇತಿಹಾಸ ಬರೆಯಿತು. ಐದೇ ವರ್ಷಗಳಲ್ಲಿ ಕಾಡೆತ್ತುಗಳು ಖ್ಯಾತಿಯ ಎಫ್ ಸಿ ಗೋವಾ ಗೋವಾದ ಪ್ರತಿಯೊಬ್ಬ ಫುಟ್ಬಾಲ್ ಅಭಿಮಾನಿಯೂ ಅನುಸರಿಸುವ ಫುಟ್ಬಾಲ್ ಕ್ಲಬ್ ಆಗಿ ರೂಪುಗೊಂಡಿತು. ಗೋವಾ ಫುಟ್ಬಾಲ್ ನಲ್ಲಿ ತುಂಬಾ ಆಳವಾದ ಫುಟ್ಬಾಲ್ ಸಂಸ್ಕೃತಿಯನ್ನು ಬೇರೂರಿದೆ . ಅದಕ್ಕೆ ಹೊಸ ರೂಪವನ್ನು ಕೊಡಬೇಕಾಗಿದ್ದು, ಆ ಬಗ್ಗೆ ತಳಮಟ್ಟದಲ್ಲಿ ಉತ್ತಮ ರೀತಿಯ ಕೆಲಸಗಳು ನಡೆಯುತ್ತಿವೆ.

6ನೇ ಬಾರಿಗೆ ಫೀಫಾ ಪ್ರಶಸ್ತಿ ಗೆದ್ದು ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ6ನೇ ಬಾರಿಗೆ ಫೀಫಾ ಪ್ರಶಸ್ತಿ ಗೆದ್ದು ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ

ಗೋವಾದಲ್ಲಿರುವ ಈ ಫುಟ್ಬಾಲ್ ಸಂಸ್ಕೃತಿಯಿಂದಾಗಿ ಗೋವಾ ತಂಡಕ್ಕೆ ಐ ಎಎಸ್ ಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಯಿತು. ಕೇವಲ ಒಂದು ಬಾರಿ ಮಾತ್ರ ಗೋವಾ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಸರ್ಗಿಯೊ ಲೊಬೆರಾ ಅವರ ತರಬೇತಿಯಲ್ಲಿ ಗೋವಾ ತಂಡ ಭಾರತದ ಫುಟ್ಬಾಲ್ ನಲ್ಲಿ ಸ್ಪೇನ್ ಮಾದರಿಯ ಫುಟ್ಬಾಲ್ ಸವಿಯನ್ನು ನೀಡಿತ್ತು. ದಾಳಿ ಮತ್ತು ನಿಯಂತ್ರಣದ ಆಟದಲ್ಲಿ ಗೋವಾ ಮೇಲುಗೈ ಸಾಧಿಸಿತ್ತು.

''ನನ್ನ ಪ್ರಕಾರ ನಮ್ಮ ಕ್ಲಬ್ ಸೌದಾಯವೊಂದನ್ನು ಪ್ರತಿನಿಧಿಸುತ್ತಿದ್ದು, ಈಗ ಅದು ನಮ್ಮ ಆಟದ ಗುಣವಿಶೇಷವಾಗಿದೆ. ನಮ್ಮ ಅಭಿಮಾನಿಗಳಿಲ್ಲದೆ ನಾವು ಯಾವುದೇ ಕೆಲಸವನ್ನು ಮಾಡುವುದಿಲ್ಲ. ನಮ್ಮ ಚಟುವಟಿಕೆಗಳು, ಮಾರುಕಟ್ಟೆ ಹಾಗೂ ಋತುವಿನ ಟಿಕೆಟ್ ಯಾವುದೇ ಇದ್ದರೂ ನಾವು ಅಭಿಮಾನಿಗಳನ್ನು ಸೇರಿಸಿಕೊಂಡಿರುತ್ತೇವೆ. ಹೀರೋ ಐಎಸ್ ಎಲ್ ನಲ್ಲಿ 1000 ಸೀಸನ್ ಟಿಕೆಟ್ ಹೊಂದಿರುವವರು ಇರುವುದು ನಮ್ಮ ಕ್ಲಬ್ ನಲ್ಲಿ ಮಾತ್ರ. ಈ ವರ್ಷ ನಾವು 1500 ಸೀಸನ್ ಟಿಕೆಟ್ ದಾರರನ್ನು ಹೊಂದಲಿದ್ದೇವೆ,'' ಎಂದು ಎಫ್ ಸಿ ಗೋವಾದ ಅಧ್ಯಕ್ಷ ಅಕ್ಷಯ್ ಟಂಡನ್ ಹೇಳಿದ್ದಾರೆ.

ಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿ

ಟಂಡನ್ ಅವರ ಕಾರ್ಯ ವೈಖರಿ ಅಷ್ಟಕ್ಕೇ ಸೀಮಿತವಾಗಿಲ್ಲ. ಹಿರಿಯರ ತಂಡವನ್ನು ಉತ್ತೇಜಿಸುವುದರ ಜತೆಯಲ್ಲಿ ಕಾಡೆತ್ತುಗಳ ಖ್ಯಾತಿಯ ಗೋವಾ ತಂಡ ಯುವ ಅಕಾಡೆಮಿ ಮೂಲಕ ವಯೋಮಿತಿಯ ಆಟಗಾರರನ್ನು ಹಿರಿಯರ ತಂಡದೊಂದಿಗೆ ಬೆಸೆದಿದೆ. ಎಫ್ ಸಿ ಗೋವಾ ಅಭಿವೃದ್ಧಿ ತಂಡ 2018-19ನೇ ಸಾಲಿನ ಗೋವಾ ಪ್ರೊ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಜಯದ ಹಾದಿಯಲ್ಲಿ ತಂಡ ಬಲಿಷ್ಠ ಎದುರಾಳಿಗಳಾದ ಸಾಲಗಾವ್ಕರ್, ಚುರ್ಚಿಲ್ ಬ್ರದರ್ಸ್, ಡೆಂಪೋ ಹಾಗೂ ಸ್ಪೋರ್ಟಿಂಗ್ ತಂಡಗಳನ್ನು ಸೋಲಿಸಿ ಆ ವಲಯದಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿತ್ತು.

ಹಿರಿಯರ ತಂಡದಲ್ಲಿ ಆಡುವ ಕನಸು ಹೊತ್ತಿರುವವರಿಗಾಗಿ ಎಫ್ ಸಿ ಗೋವಾ 14, 16, 18 ಹಾಗೂ 20 ವರ್ಷ ವಯೋಮಿತಿಯ ತಂಡಗಳನ್ನು ಹೊಂದಿದೆ. ಎರಡು ವರ್ಷಗಳಲ್ಲಿ ಮೊಹಮ್ಮದ್ ನವಾಜ್, ಲಿಸ್ಟಾನ್ ಕೊಲಕೋ, ಸವಿಯರ್ ಗಾಮ ಮತ್ತು ಜೊನಾಥನ್ ಕಾರ್ಡೋಜೋ ಶ್ರೇಷ್ಠ ದರ್ಜೆಯ ಆಟಗಾರರಾಗಿ ಬೆಳೆದಿದ್ದು, ಇನ್ನೂ ಅನೇಕ ಆಟಗಾರರು ಈ ಹಂತವನ್ನು ತಲಪುವ ಹಂಬಲದಲ್ಲಿದ್ದಾರೆ.

ಕ್ರಿಸ್ಚಿಯಾನೊ ರೊನಾಲ್ಡೋಗೆ ಕೆಟ್ಟ ದಿನ, ತಮಾಷೆಯ ಆ್ಯಡ್‌ ನೋಡಿ: ವಿಡಿಯೋಕ್ರಿಸ್ಚಿಯಾನೊ ರೊನಾಲ್ಡೋಗೆ ಕೆಟ್ಟ ದಿನ, ತಮಾಷೆಯ ಆ್ಯಡ್‌ ನೋಡಿ: ವಿಡಿಯೋ

ಗೋವಾ ತಂಡದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸ್ಥಳೀಯ ಆಟಗಾರರಿದ್ದಾರೆ. ಕಳೆದ ಋತುವಿನಲ್ಲಿ ಇತರ ಕ್ಲಬ್ ಗಳಿಗಿಂತ ಹೆಚ್ಚು ಎಂಬಂತೆ ಎಂಟು ಮಂದಿ ಸ್ಥಳೀಯ ಆಟಗಾರರು ಆಡಿದ್ದರು. ಪ್ರಮುಖವಾಗಿ ಮಂದಾರ ರಾವ್ ದೇಸಾಯಿ, ಬ್ರೆನ್ದಾನ್ ಫೆರ್ನಾಂಡೀಸ್ ಮತ್ತು ಲೆನ್ನಿ ರಾಡ್ರಿಗಸ್ ಯಾವಾಗಲೂ ತಂಡದಲ್ಲಿ ಸ್ಥಾನ ಪಡೆದಿರುತ್ತಾರೆ.

''ನಾವು ನಮ್ಮ ಅಭಿಮಾನಿಗಳಿಗೆ ಋಣಿಯಾಗಿರುತ್ತೇವೆ. ಅವರಿಗಾಗಿ ನಾವು ಉತ್ತಮ ರೀತಿಯಲ್ಲಿ ಆಡುತ್ತೇವೆ. ಸಮುದಾಯದೊಂದಿಗೆ ನಾವು ಯಾವಾಗಲೂ ಸೇರಿಕೊಂಡಿರುತ್ತೇವೆ. ಗೋವಾದವರು ಹಾಗೂ ಸ್ಥಳೀಯರಿಗೆ ನಮ್ಮ ತಂಡದಲ್ಲಿ ಅವಕಾಶ ನೀಡಲು ನಾವು ಬದ್ಧರಾಗಿರುತ್ತೇವೆ. ಇದಕ್ಕೆಲ್ಲ ನಮ್ಮ ಅಭಿಮಾನಿಗಳೇಇಗೆ ಧನ್ಯವಾದ ಹೇಳಬೇಕು. ಗೋವಾದ ಸಮುದಾಯ ಈಗ ನಮ್ಮ ಆಟದ ಒಂದು ಭಾಗವಾಗಿದೆ. ಅವರು ನಮಗೆ ಏನು ನೀಡಿದ್ದಾರೋ ಅದನ್ನು ಅವರಿಗೆ ಹಿಂದುರುಗಿಸಲು ಸಿದ್ಧರಾಗಿದ್ದೇವೆ. ಅವರ ಹೆಮ್ಮೆಯನ್ನು ಕಾಪಾಡುವುದು ನಮ್ಮ ಸದ್ಯದ ಕರ್ತವ್ಯವಾಗಿದೆ,'' ಎಂದು ಟಂಡನ್ ಹೇಳಿದ್ದಾರೆ.

ಗೋವಾದಲ್ಲಿ ನಡೆಯುವ ಪ್ರತಿಯೊಂದು ಪಂದ್ಯಗಳಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಫಟೋರ್ಡದ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಆಗಮಿಸುವ ಕಾರುಗಳು ತುಂಬಿರುತ್ತವೆ, ಮುಖಗಳಿಗೆ ಬಣ್ಣ ಬಳಿದಿರುತ್ತದೆ, ಧ್ವಜಗಳು ಹಾರಾಡುತ್ತಿರುತ್ತವೆ, ಎಲ್ಲೆಡೆ ಹರಡಿರುತ್ತದೆ. ಅಂಗಣದಲ್ಲಿ ಗೋವಾ ತಂಡ ಬೆಂಕಿಯಂತೆ ಕಂಡು ಬರುತ್ತದೆ, ಅದೇ ರೀತಿ ಕೆಲವು ಅಭೂತಪೂರ್ವ ಕೆಲಸಗಳನ್ನೂ ಮಾಡುತ್ತಿದೆ. ಫೋರ್ಕಾ ಗೋವಾ ಫೌಂಡೇಶನ್ ಪ್ರತೀ ವರ್ಷ 1000ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿಯನ್ನು ನೀಡುತ್ತಿದೆ. ಇದು ಬಹಳ ಕಾಲದ ವರೆಗೆ ಮುಂದುವರಿಯಲಿದೆ.

Story first published: Saturday, October 12, 2019, 16:29 [IST]
Other articles published on Oct 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X