Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್ 2019: ಕೊಚ್ಚಿಯಲ್ಲಿ ಗೆಲ್ಲುವ ಅವಕಾಶ ಕೈ ಚೆಲ್ಲಿದ ಕೇರಳ

ISL 2019: Injury-time goal sees Goa rescue a point in Kerala

ಕೊಚ್ಚಿ, ಡಿಸೆಂಬರ್ 2: ಗಾಯದ ಸಮಸ್ಯೆ, ರೆಡ್ ಕಾರ್ಡ್ ಶಿಕ್ಷೆ, ಅಮಾನತ್ತಿನ ಪ್ರಮಾದ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದ ಬಲಿಷ್ಠ ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಪಡೆ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿ 2-2 ಗೋಲಿನಿಂದ ಸಮಬಲ ಸಾಧಿಸಿತು.

ಕೇರಳ ಬ್ಲಾಸ್ಟರ್ಸ್ ಪರ ಸರ್ಗಿಯೊ ಸೈಡಾನ್ಛ್ (2ನೇ ನಿಮಿಷ) ಹಾಗೂ ರಾಫೆಲ್ ಮೆಸ್ಸಿ ಬೌಲಿ (59ನೇ ನಿಮಿಷ) ಗೋಲು ಗಳಿಸಿದರೆ, ಎಫ್ ಸಿ ಗೋವಾ ಪರ ಮೌರ್ತದಾ ಫಾಲ್ (41ನೇ ನಿಮಿಷ) ಹಾಗೂ ರೊಡ್ರಿಗಸ್ (90+ ನಿಮಿಷ) ಗೋಲು ಗಳಿಸಿದರು.

ಪ್ರಥಮಾರ್ಧದಲ್ಲಿ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಮೌರ್ತದಾ ಫಾಲ್ ರೆಡ್ ಕಾರ್ಡ್ ಪಡೆದು ಹೊರ ನಡೆದದ್ದು ಕೇರಳಕ್ಕೆ ಜಯದ ಬಾಗಿಲು ತೆರೆದಂತಾಯಿತು. ರಾಫೆಲ್ ಮೆಸ್ಸಿ ಬೌಲಿ 59 ನೇ ನಿಮಿಷದಲ್ಲಿ ಗಳಿಸಿದ ಗೋಲು ಕೇರಳ ತಂಡದ ಪಾಲಿನ ಜಯದ ಗೋಲು ಎಂದು ಎಲ್ಲರೂ ಊಹಿಸಿದ್ದರು. ಹಳದಿ ಸೇನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಎದುರಾಳಿ ತಂದಲ್ಲಿ ಕೇವಲ ಹತ್ತು ಆಟಗಾರರು ಇದ್ದರೇನಂತೆ, ಕೇರಳದ ಡಿಫೆನ್ಸ್ ವಿಭಾಗಾದ ಶಕಿತಿ ಕುಂದಿದಾಗ ಲೆನ್ನಿ ರೊಡ್ರಿಗಸ್ (90+ನೇ ನಿಮಿಷ) ಗಳಿಸಿದ ಗೋಳು ಇತ್ತಂಡಗಳು ಅಂಕವನ್ನು ಹಚ್ಚಿಕೊಳ್ಳುವಂತೆ ಮಾಡಿತು.

ISL 2019: Injury-time goal sees Goa rescue a point in Kerala

ಸಮಬಲದ ಹೋರಾಟ
ಪಂದ್ಯ ಆರ್ಮಭಗೊಂಡ ಎರಡನೇ ನಿಮಿಷದಲ್ಲೇ ಸರ್ಗಿಯೊ ಸೈಡಾನ್ಛ್ ಗಳಿಸಿದ ಗೋಲಿನಿಂದ ಕೇರಳ ಮನೆಯಂಗಣದಲ್ಲಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿತು. ಕೇರಳಕ್ಕೆ ಇಲ್ಲೊಂದು ಜಯದ ಅಗತ್ಯ ಇದೆ. ಅದಕ್ಕೆ ಪೂರಕ ಎಂಬಂತೆ ಗೋವಾ ಹಲವು ನ್ಯೂನ್ಯತೆಯೊಂದಿಗೆ ಕೇರಳಕ್ಕೆ ಆಗಮಿಸಿತ್ತು. ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದರೂ ಕೇರಳ ಮನೆಯಂಗಣದ ಪ್ರೇಕ್ಷಕರ ಮುಂದೆ ಗೋವಾ ವಿರುದ್ಧ ಗೋಲಿನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವಿಫಲವಾಯಿತು. 41ನೇ ನಿಮಿಷದಲ್ಲಿ ಮೌರ್ತದಾ ಫಾಲ್ ಹೆಡರ್ ಮೂಲಕ ಗಳಿಸಿದ ಗೋಲು ಪ್ರಥಮಾರ್ಧವನ್ನು ಸಮಬಲಗೊಳಿಸಿತು. ಪ್ರಥಮಾರ್ಧದ ಅಂತಿಮ ಕ್ಷಣದಲ್ಲಿ ಓಗ್ಬ್ಯಾಚೆ ಗೋಲಿನ ಸಂಖ್ಯೆಯನ್ನು ದ್ವಿಗುಣ ಮಾಡುವ ಅವಕಾಶ ಹೊಂದಿದ್ದರು. ಆದರೆ ಮೊಹಮ್ಮದ್ ನವಾಜ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ರಕ್ಷಣೆಯಾದರು.

ಜಯದ ನಿರೀಕ್ಷೆಯಲ್ಲಿ ಕೇರಳ
ಇಂಡಿಯನ್ ಸೂಪರ್ ಲೀಗ್ ನ ೨೯ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಬಲಿಷ್ಠ ಎಫ್ ಸಿ ಗೋವಾಕ್ಕೆ ಆತಿಥ್ಯ ನೀಡಿತು. ಎರಡೂ ತಂಡಕ್ಕೂ ಇಲ್ಲಿ ಜಯದ ಅಗತ್ಯ ಇದೆ. ಆತಿಥೇಯ ಕೇರಳ ಲೀಗ್ ನ ಮೊದಲ ಪಂದ್ಯದಲ್ಲಿ ಗೆದ್ದಿದ್ದನ್ನು ಹೊರತುಪಡಿಸಿದರೆ ಮತ್ತೆ ಯಶಸ್ಸಿನ ಹಾದಿ ತುಳಿಯಲಿಲ್ಲ. ಕೇವಲ ನಾಲ್ಕು ಅಂಕ ಗಳಿಸಿದೆ. ಗಳಿಸಿದ್ದು ಕೇವಲ ಒಂದು ಗೋಲು, ಕೊಟ್ಟಿದ್ದು ನಾಲ್ಕು. ಬಾರ್ತಲೋಮಿಯೋ ಓಗ್ಬ್ಯಾಚೆ ಅವರನ್ನೇ ಕೇರಳ ಬ್ಲಾಸ್ಟರ್ಸ್ ಹೆಚ್ಚು ಅವಲಂಬಿಸಿದೆ. ಆದರೆ ಓಗ್ಬ್ಯಾಚೆ ಮೊದಲ ಪಂದ್ಯದಲ್ಲಿ ಗೋಲು ಗಳಿಸಿದ್ದನ್ನು ಹೊರತುಪಡಿಸಿದರೆ ಮತ್ತೆ ಗೋಳು ಗಳಿಸಿರಲಿಲ್ಲ. ಆದರೆ ತಂಡದಲ್ಲಿ ಗೋಲು ಗಳಿಸಬಲ್ಲ ಸರ್ಗಿಯೊ ಸಿಡೋನ್ಛ್, ಸಹಲ್ ಅಬ್ದುಲ್ ಸಮದ್ ಹಾಗೂ ಯುವ ಆಟಗಾರ ರಾಹುಲ್ ಕೆಪಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಡಿಫೆನ್ಸ್ ವಿಭಾಗದಲ್ಲಿ ರಾಜು ಗಾಯಕ್ವಾಡ್. ಜೆಸ್ಸೆಲ್ ಕಾರ್ನೇರಿಯೋ ತಂಡಕ್ಕೆ ಆಧಾರ ಎನಿಸಿದ್ದಾರೆ.

ಎಫ್ ಸಿ ಗೋವಾ ಜೆಮ್ಶೆಡ್ಪುರ ಎಫ್ ಸಿ ವಿರುದ್ಧ ಸೋಲುಂಡ ಆಘಾತದೊಂದಿಗೆ ಕೇರಳಕ್ಕೆ ಆಗಮಿಸಿದೆ. ಈ ಹಿಂದಿನ ಪಂದ್ಯಗಳಲ್ಲಿ ಕೇರಳ ವಿರುದ್ಧ ಪ್ರಭುತ್ವ ಸಾಧಿಸಿರುವ ಗೋವಾ ಹಿಂದಿನ ಸೋಲನ್ನು ಮರೆಯುವ ಗುರಿಯೊಂದಿಗೆ ಅಂಗಣಕ್ಕೆ ಕಾಲಿಟ್ಟಿತು. ಫರಾನ್ ಕೊರೊಮಿನಾಸ್ ತಂಡದಲ್ಲಿ ಇಲ್ಲಾಂದ್ರೆ ಗೋವಾ ಸೋಲು ಅನುಭವಿಸುವುದು ಸಾಮಾನ್ಯ ಎಂಬಂತಾಗಿದೆ. ಈ ಹಿಂದಿನ ಪಂದ್ಯದಲ್ಲಿ ಕೊರೊಮಿನಾಸ್ ಇಲ್ಲದ ಕಾರಣವೋ ಏನೋ ಗೋವಾ ತಂಡ ಜೆಮ್ಶೆಡ್ಪುರ ಎಫ್ ಸಿ ವಿರುದ್ಧ ಅಚ್ಚರಿಯ ಆಘಾತ ಅನುಭವಿಸಿತ್ತು. ಈಗ ಕೇರಳ ವಿರುದ್ಧವೂ ಕೊರೊಮಿನಾಸ್ ಗೈರು ಕಾಣುತ್ತಿದೆ, ಅಂದರೆ ಗೋವಾದ ಹಾದಿ ಕಠಿಣವಾಗಿದೆ. ಅಹಮದ್ ಜಹೌಹ್ ಹಿಂದಿನ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿರುವುದು ತಂಡಕ್ಕೆ ತುಂಬಲಾರದ ನಷ್ಟ. ಹ್ಯೂಗೋ ಬೌಮೌಸ್ ಹಾಗೂ ಸೈಮೆಂಲೆನ್ ದೌನ್ಗ್ಲೆ ಕೂಡ ಅಮಾನತ್ತಿನ ಕಾರಣ ಹೊರಗುಳಿದಿದ್ದಾರೆ. ಗೋವಾದ ಹಾದಿ ದುರ್ಗಮವಾಗಿರುವುದು ಸ್ಪಷ್ಟ.

Story first published: Monday, December 2, 2019, 11:06 [IST]
Other articles published on Dec 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+