ಐಎಸ್‌ಎಲ್: ಒಡಿಶಾ ಎಫ್‌ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕೇರಳ ಬ್ಲಾಸ್ಟರ್ಸ್

ಇಂಡಿಯನ್ ಸೂಪರ್ ಲೀಗ್‌ನ 58ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಒಡಿಶಾ ಎಫ್‌ಸಿ ತಂಡಗಳು ಇಂದು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಒಡಿಶಾ ಎಫ್‌ಸಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 2-0 ಅಂತರದಿಂದ ಕೇರಳ ಬ್ಲಾಸ್ಟರ್ಸ್ ತಂಡ ಈ ಪಂದ್ಯವನ್ನು ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಕೇರಳ ಬ್ಲಾಸ್ಟರ್ಸ್ ತಂಡ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಆರಂಭದಿಂದಲೇ ಒಡಿಶಾ ವಿರುದ್ಧ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಯಾವ ಹಂತದಲ್ಲಿಯೂ ಎದುರಾಳಿ ತಂಡಕ್ಕೆ ಅವಕಾಶವನ್ನು ನೀಡಲೇ ಇಲ್ಲ. ಪಂದ್ಯದ 28ನೇ ನಿಮಿಷದಲ್ಲಿ ನಿಶು ಕುಮಾರ್ ಮೊದಲ ಗೋಲು ಗಳಿಸಿ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಈ ಮೂಲಕ ಕೇರಳ ತಂಡ ಆರಂಭಿಕ ಮೇಲುಗೈ ಸಾಧಿಸಿತ್ತು. ಅದಾದ ಬಳಿಕ ಪಂದ್ಯದ 40ನೇ ನಿಮಿಷದಲ್ಲಿ ಮತ್ತೊಂದು ಗೋಲು ಕೇರಳ ಬ್ಲಾಸ್ಟರ್ಸ್ ಪರವಾಗಿ ಸಿಡಿದಿತ್ತು. ಹರ್ಮನ್‌ಜೋತ್ ಖಬ್ರಾ ಎರಡನೇ ಗೋಲನ್ನು ತಮಡದ ಪರವಾಗಿ ಸಿಡಿಸಿದ್ದರು. ಈ ಮೂಲಕ ಮೊದಲಾರ್ಧದಲ್ಲಿಯೇ ಕೆಬಿಎಫ್‌ಸಿ ತಂಡ 2-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತ್ತು.
ಇನ್ನು ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಕೂಡ ಯಾವುದೇ ಗೋಲು ಗಳಿಸಲು ವಿಫಲವಾಯಿತು. ಹೀಗಾಗಿ ಪಂದ್ಯದ ಮುಕ್ತಾಯದ ವೇಳೆಗೆ ಕೇರಳ ಬ್ಲಾಸ್ಟರ್ಸ್ ತಂಡ 2-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.
ಕೇರಳ ಬ್ಲಾಸ್ಟರ್ಸ್ ತಂಡ ಟೂರ್ನಿಯಲ್ಲಿ ಈವರೆಗೆ ಒಟ್ಟು 11 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐದು ಪಂದ್ಯಗಳಲ್ಲಿ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. ಹೀಗಾಗಿ ಸದ್ಯ ಟೂರ್ನಿಯ ಅಗ್ರ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ಜೆಮ್ಶೆಡ್ಪುರ ಎಫ್‌ಸಿ ತಂಡ ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಒಡಿಶಾ ಎಫ್‌ಸಿ ತಂಡ ಈ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ 8ನೇ ಸ್ಥಾನದಲ್ಲಿಯೇ ಮುಂದುವರಿದಿದೆ. 10 ಪಂದ್ಯಗಳನ್ನು ಆಡಿರುವ ಒಡಿಶಾ ಎಫ್‌ಸಿ ತಂಡ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಉಳಿದ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಪ್ರಭುಸುಖಾನ್ ಗಿಲ್ (ಗೋಲ್ ಕೀಪರ್), ಎನೆಸ್ ಸಿಪೊವಿಕ್, ರುಯಿವಾ ಹಾರ್ಮಿಪಮ್, ನಿಶು ಕುಮಾರ್, ಲಾಲ್ತತಂಗ ಖೌಲ್‌ರಿಂಗ್, ಹರ್ಮನ್‌ಜೋತ್ ಖಬ್ರಾ, ಸಹಲ್ ಸಮದ್, ಆಡ್ರಿಯನ್ ಲೂನಾ (ನಾಯಕ), ಜೀಕ್ಸನ್ ಸಿಂಗ್, ಜಾರ್ಜ್ ಡಯಾಜ್, ಅಲ್ವಾರೊ ವಾಜ್ಕ್ವೆಜ್.
ಒಡಿಶಾ ಎಫ್‌ಸಿ: ಅರ್ಷದೀಪ್ ಸಿಂಗ್ (ಗೋಲ್ ಕೀಪರ್), ವಿಕ್ಟರ್ ಮೊಂಗಿಲ್ (ನಾಯಕ), ಹೆಕ್ಟರ್ ರಾಮಿರೆಜ್, ಜೇವಿಯರ್ ಹೆರ್ನಾಂಡೆಜ್, ನಂದಕುಮಾರ್ ಸೇಕರ್, ಜೆರ್ರಿ ಮಾವಿಹ್ಮಿಂಗ್ತಂಗ, ಹೆಂಡ್ರಿ ಆಂಟೊನಾಯ್, ಸಾಹಿಲ್ ಪನ್ವಾರ್, ಲಾಲ್ರುಅತ್ತರಾ, ಐಸಾಕ್ ಚಕ್ಚುವಾಕ್, ಲಿರಿಡಾನ್ ಕ್ರಾಸ್ನಿಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications