ಐಎಸ್‌ಎಲ್: ಮೊದಲ ಪಂದ್ಯದಲ್ಲೇ ಸಿಡಿದೆದ್ದ ಕೇರಳಕ್ಕೆ ಜಯದ ಆರಂಭ

ಕೊಚ್ಚಿ, ಅಕ್ಟೋಬರ್ 21: ಹೊಸ ಕೋಚ್, ಹೊಸ ಹೀರೋ, ಹೊಸ ಉಲ್ಲಾಸ ಇವುಗಳಿಂದ ತುಂಬಿರುವ ಕೇರಳ ಬ್ಲಾಸ್ಟರ್ಸ್ ತಂಡ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಎಟಿಕೆ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಆರನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿದೆ.
ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಯಶಸ್ಸಿನ ಹಾದಿ ತುಳಿಯುವಲ್ಲಿ ಕೇರಳ ವಿಫಲವಾಗಿತ್ತು. ಬಾರ್ತಲೋಮ್ಯೋ ಒಗ್ಬೇಚೆ ( 30 ಮತ್ತು 40ನೇ ನಿಮಿಷ ) ಗಳಿಸಿದ ಎರಡು ಗೋಲು ಕೇರಳ ಬ್ಲಾಸ್ಟರ್ಸ್ ತಂಡದ ಶುಭಾರಂಭಕೆ ಕಾರಣವಾಯಿತು. ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮೊದಲ ಪಂದ್ಯಕ್ಕೆ ಮಂಜಪ್ಪಾಡ ಪಡೆ ಕಿಕ್ಕಿರಿದು ಸೇರಿತ್ತು. ತನ್ನ ಹಿಂದಿನ ಆಟವನ್ನೇ ಮುಂದುವರಿಸಿದ ಒಗ್ಬೇಚೆ ಎಲ್ಲಿಯೂ ತಪ್ಪಿನ ಹೆಜ್ಜೆ ಇಡಲಿಲ್ಲ. ನಾರ್ತ್ ಈಸ್ಟ್ ಯುನೈಟೆಡ್ ನಲ್ಲಿ ತೋರಿದ ಆಟವನ್ನೇ ಮುಂದುವರಿಸಿ ತಂಡಕ್ಕೆ ಅಗತ್ಯ ಜಯ ತಂದುಕೊಟ್ಟರು.
45 ನೇ ನಿಮಿಷದಲ್ಲಿ ಬಾರ್ತಲೋಮ್ಯೋ ಒಗ್ಬೇಚೆ ಎರಡನೇ ಗೋಲು ಗಳಿಸುವ ಮೂಲಕ ಪ್ರಥಮಾರ್ಧದಲ್ಲಿ ತಂಡ 2-1 ಅಂತರದಲ್ಲಿ ಮುನ್ನಡೆಯಲು ಕಾರಣರಾದರು. ಕಳೆದ ಋತುವಿನಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಒಗ್ಬೇಚೆ ಎರಡನೇ ಸ್ಥಾನದಲ್ಲಿದ್ದರು. ಒಟ್ಟು ಗೋಳು ಗಳಿಕೆ 16. ನಾರ್ತ್ ಈಸ್ಟ್ ಯುನೈಟೆಡ್ ನ ಯಶಸ್ಸಿಗೆ ಒಗ್ಬೇಚೆ ಪಾತ್ರ ಪ್ರಮುಖವಾಗಿತ್ತು.

ಒಗ್ಬೇಚೆ ಸಮಬಲ
ಕೇರಳ ಬ್ಲಾಸ್ಟರ್ಸ್ ತಂಡ ಸೇರಿದ ಬಾರ್ತಲೋಮ್ಯೋ ಒಗ್ಬೇಚೆ ಗೋಲು ಗಳಿಸುವ ಸಂಭ್ರಮವನ್ನು ಮುಂದುವರಿಸಿದ್ದಾರೆ. ಇದರಿಂದ ಎಟಿಕೆಯ ಮುನ್ನಡೆಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 30ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಮೂಲಕ ತಂಡದ ಪರ ಋತುವಿನ ಮೊದಲ ಗೋಲು ಗಳಿಸಿದಾಗ ಕೊಚ್ಚಿಯ ಅಂಗಣದಲ್ಲಿ ಹಳದಿ ಅಲೆ ಎದ್ದಿತು. ಇದರೊಂದಿಗೆ ಪಂದ್ಯ 1-1 ರಲ್ಲಿ ಸಮಬಲಗೊಂಡಿತು.

ಮಿಂಚಿನ ಮುನ್ನಡೆ
ಪಂದ್ಯ ಆರಂಭಗೊಂಡ ಆರನೇ ನಿಮಿಷದಲ್ಲಿ ಕಾರ್ಲ್ ಮೇಕ್ ಹಗ್ ಗಳಸಿದ ಗೋಲಿನಿಂದ ಎಟಿಕೆ ಆರಂಭದಲ್ಲೇ ಮುನ್ನಡೆ ಕಂಡಿತು. ಆರನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಗೋಲು ಗಳಿಸಿದ ಕೀರ್ತಿಗೆ ಪಾತ್ರರಾದರು. 6ನೇ ನಿಮಿಷದಲ್ಲಿ ದಾಖಲಾದ ಈ ಗೋಲು, ಇದು ಮೊದಲ ಪಂದ್ಯದಲ್ಲಿ ದಾಖಲಾದ ಅತ್ಯಂತ ವೇಗದ ಗೋಲು ಕೂಡ ಹೌದು. ಕೊಲ್ಕತಾ ಪಡೆಗೆ 1-0 ಮುನ್ನಡೆ.

ಲೆಟ್ಸ್ ಫುಟ್ಬಾಲ್ !!!
ಇಂಡಿಯನ್ ಸೂಪರ್ ಲೀಗ್ ಹಿಂದೆಂದಿಗಿಂತಲೂ ಉತ್ತಮ ಸಿದ್ದತೆಯೊಂದಿಗೆ ಮತ್ತೆ ಬಂದಿದೆ. ಬದ್ಧ ಎದುರಾಳಿಗಳಾದ ಕೇರಳ ಬ್ಲಾಸ್ಟರ್ಸ್ ಹಾಗೂ ಎರಡು ಬಾರಿ ಚಾಂಪಿಯನ್ ಎಟಿಕೆ ತಂಡಗಳು ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆರನೇ ಋತುವಿನ ಮೊದಲ ಪಂದ್ಯಕ್ಕೆ ಸಜ್ಜಾದವು. ಕಳೆದ ಎರಡು ಋತುಗಳಲ್ಲಿ ಕೊಲ್ಕತ್ತಾ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಲಿಲ್ಲ, ಇದರಿಂದ ಮೊದಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಂಟೋನಿಯೋ ಹಬ್ಬಾಸ್ ಪ್ರಮುಖ ತರಬೇತುದಾರರಾಗಿ ತಂಡವನ್ನು ಸೇರಿಕೊಂಡರು. ಅದೇ ರೀತಿ ರಾಯ್ ಕೃಷ್ಣ, ಮೈಕೆಲ್ ಸುಸೈರಾಜ್, ಹಾಗೂ ಜಾಬ್ಬೀ ಜಸ್ಟಿನ್ ಅವರಂತ ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ನಾರ್ತ್ ಈಸ್ಟ್ ಯುನೈಟೆಡ್ ತಂಡದ ಕೋಚ್ ಆಗಿದ್ದ ಎಲ್ಕೋ ಶೆಟ್ಟೋರಿ ಈಗ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಹೊಸ ಯಶಸ್ಸು ನೀಡಲು ಆಗಮಿಸದ್ದಾರೆ. ಜತೆಯಲ್ಲಿ ಕಳೆದ ಬಾರಿ ಉತ್ತಮ ರೀತಿಯಲ್ಲಿ ಮಿಂಚಿದ್ದ ಬರ್ತಲೋಮ್ಯೂ ಒಗ್ಬೇಚೆ ತಂಡದ ಶಕ್ತಿಯನ್ನು ಹೆಚ್ಚಿಸಿರುವುದು ಸ್ಪಷ್ಟ. ಕೇರಳ ತಂಡಕ್ಕೆ ಮಂಜಪ್ಪಾಡ ಅಂದರೆ ಅಭಿಮಾನಿಗಳ ಬೆಂಬಲ, ಮನೆಯಂಗಣದಲ್ಲಿ ಈ ಬಾರಿ ಕೇರಳ ಬ್ಲಾಸ್ಟರ್ಸ್ ಉತ್ತಮ ಪ್ರದರ್ಶನ ತೋರುವ ಆಶಯದೊಂದಿಗೆ ಹೆಜ್ಜೆ ಇಟ್ಟಿತು.

ಉದ್ಘಾಟನೆ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಉದ್ಯಮಿ ನೀತಾ ಅಂಬಾನಿ, ನಟ ಚಿರಂಜೀವಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಐಎಸ್ ಎಲ್ ಆರನೇ ಆವೃತ್ತಿಗೆ ಚಾಲನೆ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications