For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜಗತ್ತಿನ ಅಚ್ಚುಮೆಚ್ಚಿನ ಫುಟ್ಬಾಲ್ ತಂಡಗಳಲ್ಲಿ ಕೇರಳ ಬ್ಲಾಸ್ಟರ್ಸ್‌ಗೆ ಅಗ್ರ ಸ್ಥಾನ!

By Isl Media
Kerala Blasters: Kerala’s Own Football Club

ತಿರುವನಂತಪುರ: ಕೇರಳದ ಫುಟ್ಬಾಲ್ ಪ್ರೀತಿ ಶತಮಾನಗಳಷ್ಟು ಹಿಂದಿನದ್ದು. ಆದ್ದರಿಂದ ಯಾವುದೇ ರೀತಿಯ ಪೀಠಿಕೆ ಬೇಕಿಲ್ಲ. ಅಂತಾರಾಷ್ಟ್ರೀಯ ಪಂದ್ಯವೇ ಇರಲಿ ಅಥವಾ ಬಹಳ ಜನಪ್ರಿಯಗೊಂಡಿರುವ ಸೆವೆನ್ಸ್ ಆಗಿರಲಿ ಅಲ್ಲಿ ಫುಟ್ಬಾಲ್ ನ ಸ್ಫೂರ್ತಿ ಮನೆ ಮಾಡಿರುತ್ತದೆ. ಎಲ್ಲಿಯೇ ಫುಟ್ಬಾಲ್ ಕಿಕ್ ಸಿಕ್ಕರೂ ಕೇರಳದಲ್ಲಿ ಅದು ಜೀವಂತವಾಗಿರುತ್ತದೆ.

ಬ್ರಿಟಿಷ್ ಸೈನಿಕರು ಹಾಗೂ ಮಿಷಿನರಿಗಳ ಕಾಲದಿಂದಲೂ ಇಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿತ್ತು. ದೇಶವನ್ನು ಕ್ರಿಕೆಟ್ ಆವರಿಸಿದ್ದರೂ ಇಲ್ಲಿ ಫುಟ್ಬಾಲ್ ಜನಪ್ರಿಯತೆ ಕಂಡಿತ್ತು. ಇಲ್ಲಿಯ ಫುಟ್ಬಾಲ್ ಆಟಗಾರರು ತಮ್ಮ ಕ್ಲಬ್ ಗಳ ಮೂಲಕವೇ ಮನೆ ಮಾತಾಗಿದ್ದರು. ಆದರೆ 2014ರಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಜನ್ಮತಾಳುವುದಕ್ಕೆ ಮೊದಲು ಬಹಳ ಕಾಲದವರೆಗೆ ಅಲ್ಲೊಂದು ಬಿಡುವು ಮನೆಮಾಡಿತ್ತು. ಅನೇಕ ಕ್ಲಬ್ ಗಳು ಹೊಸ ರೂಪು ಪಡೆದವು, ಆದರೆ ಅಸ್ಥಿತ್ವ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ.

ಅಸ್ಥಿತ್ವಕ್ಕೆ ಬಂದ ಐದು ವರ್ಷಗಳಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಬಲಿಷ್ಠ ಶಕ್ತಿಯಾಗಿ ರೂಪುಗೊಂಡಿತು. ಈಗ ಈ ಕ್ಲಬ್ ಏಷ್ಯಾದಲ್ಲೇ ಅತಿ ಹೆಚ್ಚು ಬೆಂಬಲಿತ ಕ್ಲಬ್ ಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಫೇಸ್ಬುಕ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ತಲಾ ಹತ್ತು ಲಕ್ಷ ಅಭಿಮಾನಿಗಳು ಬೆಂಬಲಿಸುತ್ತಿಯಿದ್ದರೆ. ಬ್ಲಾಸ್ಟರ್ಸ್ ಗೆ ಅಗ್ರ ಕ್ಲಬ್ ಗಳಲ್ಲಿರುವಂತೆ ಆನ್ ಲೈನ್ ಆರ್ಮಿ ಕೂಡ ಇದೆ. ಜಗತ್ತಿನಲ್ಲೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಕ್ಲಬ್ ಗಳಲ್ಲಿ ದಕ್ಷಿಣ ಏಷ್ಯಾದಲ್ಲೇ ಅಗ್ರ 100 ಕ್ಲಬ್ ಗಳಲ್ಲಿ ಸ್ಥಾನ ಪಡೆದಿದೆ. ಏಷ್ಯಾ ಮತ್ತು ಜಾಗತಿಕ ಮಟ್ಟದಲ್ಲಿ 4.3 ದಶಲಕ್ಷ ಸರಾಸರಿ ಡಿಜಿಟಲ್ ಹಿಂಬಾಲಕರನ್ನು ಹೊಂದಿರುವ ಕೇರಳ ಬ್ಲಾಸ್ಟರ್ಸ್ ಪ್ರಸಿದ್ಧ ಕ್ಲಬ್ ಗಳಾದ ಲಾಸ್ ಏಂಜಲೀಸ್ ಗ್ಯಾಲೆಕ್ಸಿ (4.1 ದಶಲಕ್ಷ ), ಸೆಲ್ಟಿಕ್ ಎಫ್ ಸಿ (3.1 ದಶಲಕ್ಷ) ಮತ್ತು ಎಎಫ್ ಸಿ ಚಾಂಪಿಯನ್ ಕಾಶೀಮಾ ಅಂಟ್ಲರ್ಸ್ (0.5 ದಶಲಕ್ಷ) ಕ್ಲಬ್ ಗಳಿಗಿಂತ ಮೇಲುಗೈ ಸಾಧಿಸಿದೆ.

ಕೊಚ್ಚಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬ್ಲಾಸ್ಟರ್ಸ್ ತಂಡಕ್ಕೆ ಸಿಗುವ ಪ್ರೋತ್ಸಾಹವನ್ನು ಮರೆಯುವಂತಿಲ್ಲ. ಮೊದಲ ಮೂರು ವರ್ಷಗಳಲ್ಲಿ 60,000 ಮಂದಿ ಪ್ರೇಕ್ಷಕರು ಸೇರುತ್ತಿದ್ದ ಕ್ರೀಡಾಂಗಣದಲ್ಲಿ ಭದ್ರತೆಯ ದೃಷ್ಟಿಯಿಂದ 2017ರಲ್ಲಿ 40,000ಕ್ಕೆ ಸೀಮಿತಗೊಳಿಸಲಾಯಿತು. ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಂದು ತಂಡಕ್ಕೂ ಇಲ್ಲಿಯ ಪ್ರೇಕ್ಷಕರ ಬೆಂಬಲ ಸವಾಲಾಗಿ ಕಂಡುಬರುತ್ತಿತ್ತು.

Kerala Blasters: Kerala’s Own Football Club

''ಇಲ್ಲಿಯ ಅಭಿಮಾನಿಗಳು ತಂಡಕ್ಕೆ ಹೆಚ್ಚುವರಿ ಆಟಗಾರರಿದ್ದಂತೆ, ಕೊಚ್ಚಿಯಲ್ಲಿ ಆಡಲು ಬರುವ ಪ್ರತಿಯೊಂದು ಎದುರಾಳಿ ತಂಡಕ್ಕೆ ಇದೊಂದು ಕಠಿಣ ಸವಾಲು ಇದ್ದಂತೆ,'' ಎಂದು ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿಯಿಂದ ಕೇರಳ ಎಫ್ ಸಿ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುವಾಗ ಎಲ್ಕೋ ಶೇಟ್ಟೋರಿ ಹೇಳಿದ್ದಾರೆ.

ಐಎಸ್‌ಎಲ್ ನಲ್ಲಿ ಕ್ಲಬ್ ನ ಕೊರತೆ ಯಾವುದು ಎಂದು ಗಮನಿಸಿದಾಗ, ಎರಡು ಬಾರಿ ಫೈನಲ್ ಗೆ ಬಂದು ಎಟಿಕೆ ವಿರುದ್ಧ ಸೋಲನುಭವಿಸಿತ್ತು (2014 ಮತ್ತು 2016). ಕಳೆದ ಎರಡು ಋತುಗಳಲ್ಲಿ ತಂಡ ಪ್ಲೇ ಆಫ್ ತಲಪುವಲ್ಲಿ ವಿಫಲವಾಗಿತ್ತು. ಇತ್ತೀಚಿನ ಫಲಿತಾಂಶಗಳು ನಿರಾಸೆಯನ್ನುಂಟು ಮಾಡಿದ್ದರೂ ಶೇಟ್ಟೋರಿ ಅವರು ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದು ಮತ್ತು ಕೆಲವು ಪ್ರಮುಖ ಆಟಗಾರರನ್ನು ಕ್ಲಬ್ ಗೆ ಸೇರ್ಪಡೆಮಾಡಿದ್ದು ತಂಡದಲ್ಲಿ ಹೊಸ ಭರವಸೆಗೆ ಕಾರಣವಾಗಿದೆ.

"ಐಎಎಸ್‌ಎಲ್ ಭಾರತದಲ್ಲಿ ಹೊಸ ಫುಟ್ಬಾಲ್ ಕ್ರಾಂತಿಯನ್ನೇ ಉಂಟುಮಾಡಿದೆ. ಹೊಸ ವಿಶಿಷ್ಟ ಅಭಿಮಾನಿಗಳಿಗಳನ್ನು ವಿಲೀನ ಗೊಳಿಸುವ ಯೋಜನೆಗಳು ಅವರನ್ನು ತಂಡಕ್ಕೆ ಹತ್ತಿರವಾಗುವಂತೆ ಮಾಡಿದೆ. ಕೇರಳದಿಂದ ಹೊರಗಡೆ ಪಂದ್ಯಗಳು ನಡೆದರೂ ಅಲ್ಲಿಗೆ ಹೋಗಿ ತಂಡಕ್ಕೆ ಪ್ರೋತ್ಸಹ ನೀಡುತ್ತೀರುವುದು ವಿಶೇಷ," ಎಂದು ಮಂಜಪ್ಪಾಡ ಪ್ರಧಾನ ಸಮಿತಿ ಸದಸ್ಯ ಸೋಮು ಜೋಸೆಫ್ ಹೇಳಿದ್ದಾರೆ.

ಮಂಜಪ್ಪಾಡ ಪಡೆಯು ಯಥೇಷ್ಟವಾಗಿ ಸಾಮಾಜಿಕ ಜಾಲತಾಣಗಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ, ಅಲ್ಲದೆ ಪಂದ್ಯದ ದಿನದಂದು ಸದಸ್ಯರನ್ನು ವಿಭಿನ್ನ ರೀತಿಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಮನೆಯಂಗಣದಲ್ಲೇ ಇರಲಿ ಅಥವಾ ಹೊರಗಡೆ ಪಂದ್ಯ ನಡೆಯಲಿ ಅಲ್ಲಿ ಕೇರಳದ ಅಭಿಮಾನಿಗಳ ಶಬ್ದ ಹೆಚ್ಚಿರುತ್ತದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಪಂದ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ. ಮನೆಯಂಗಣದಲ್ಲೇ ಇರಲಿ ಅಥವಾ ಹೊರಗಡೆನೇ ಪಂದ್ಯ ನಡೆಯಲಿ ಅಲ್ಲಿ ಕೇರಳದ ಅಭಿಮಾನಿಗಳು ತಮ್ಮ ಛಾಪು ಮೂಡಿಸುತ್ತಾರೆ. ಋತುವಿಗೆ ಪೂರ್ವಭಾವಿಯಾಗಿ ಯುಎಇಯಲ್ಲಿ ಕೇರಳ ಕ್ಲಬ್ ಅಭ್ಯಾಸ ನಡೆಸಿತ್ತು. ಅಲ್ಲಿಯೂ ಯುಎಇ ನೆಲೆಸಿರುವ ಕೇರಳದ ಫುಟ್ಬಾಲ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಅಲ್ಲಿ 'ಹಳದಿ ಸಮುದ್ರವೇ' ನಿರ್ಮಾಣಗೊಂಡಿತ್ತು.

ಜಗತ್ತಿನುದ್ದಕ್ಕೂ ಹಬ್ಬಿರುವ ಮಲಯಾಳಿಗಳು ಈ ಕ್ಲಬ್ ಅನ್ನು ಅವರು ಹೆಮ್ಮೆಯಿಂದ ತಮ್ಮ ಸ್ವಂತ ಕ್ಲಬ್ ಎಂದು ಹೇಳಬಹುದು.

Story first published: Friday, October 11, 2019, 18:02 [IST]
Other articles published on Oct 11, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+