ಲಿಯೊನೆಲ್ ಮೆಸ್ಸಿಗೆ 21 ತಿಂಗಳುಗಳ ಕಾಲ ಜೈಲು ಶಿಕ್ಷೆ
ಬಾರ್ಸಿಲೋನಾ, ಮೇ 24: ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಅವರಿಗೆ ಸ್ಥಳೀಯ ನ್ಯಾಯಾಲಯವೊಂದು ನೀಡಿದ್ದ 21 ತಿಂಗಳ ಜೈಲು ಶಿಕ್ಷೆ ಆದೇಶವನ್ನು ಸ್ಪಾನೀಷ್ ಸುಪ್ರೀಂಕೋರ್ಟ್ ಬುಧವಾರದಂದು ಎತ್ತಿ ಹಿಡಿದಿದೆ.
ತೆರಿಗೆ ವಂಚನೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಅರ್ಜೆಂಟೀನಾದ ಸೂಪರ್ ಸ್ಟಾರ್ ಮೆಸ್ಸಿ ಹಾಗೂ ಮೆಸ್ಸಿ ಅವರ ಅಪ್ಪ ಜೊರ್ಜ್ ಅವರಿಗೆ 21 ತಿಂಗಳ ಸೆರೆಮನೆ ವಾಸ ಘೋಷಿಸಲಾಗಿದೆ ಎಂದು ಸ್ಪಾನೀಷ್ ಮಾಧ್ಯಮ ವರದಿ ಮಾಡಿದೆ.[ಕ್ಲಾಸಿಕ್ ಪಂದ್ಯದಲ್ಲಿ ರೋಚಕ ಜಯ ತಂದಿತ್ತ ಲಿಯೊನೆಲ್ ಮೆಸ್ಸಿ]

2016ರ ಮೇ ತಿಂಗಳಿನಲ್ಲಿ ಮೆಸ್ಸಿ ವಿರುದ್ಧ ಬಹುದೊಡ್ಡ ತೆರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. 4.1 ಮಿಲಿಯನ್ ಯುರೋಗಳಿಗೂ ಅಧಿಕ ಮೊತ್ತದ ತೆರಿಗೆಯನ್ನು ಸ್ಪೇನಿನಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. [ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲರ್ಸ್: ಮೆಸ್ಸಿ, ರೊನಾಲ್ಡೊ ಅಲ್ಲ!]
ಇಷ್ಟು ಮೊತ್ತವನ್ನು 2007 ರಿಂದ 2009ರ ಅವಧಿಯಲ್ಲಿ ಮೆಸ್ಸಿ ಹಾಗೂ ಅವರ ತಂದೆಯವರು ಬೆಲಿಜ್, ಉರುಗ್ವೆಯಲ್ಲಿ ಅಡಗಿಸಿಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೆಸ್ಸಿ, 'ನನಗೆ ಆರ್ಥಿಕ ವ್ಯವಹಾರಗಳು ತಿಳಿದಿಲ್ಲ, ಫುಟ್ಬಾಲ್ ಆಟ ಅಷ್ಟೆ ಗೊತ್ತು' ಎಂದಿದ್ದರು.
ಜೈಲಿಗೆ ಹೋಗಬೇಕಿಲ್ಲ: ಆದರೆ, ಇಬ್ಬರು ಕೂಡಾ ದಂಡ ಪಾವತಿಸುವ ಮೂಲಕ ಜೈಲುಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಅವಕಾಶವನ್ನು ಸ್ಪಾನೀಷ್ ಕಾನೂನು ನೀಡಿದೆ. 2 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಆದೇಶಕ್ಕೆ ಮಾತ್ರ ಈ ರೀತಿ ಸೌಲಭ್ಯ ಲಭ್ಯವಿದೆ.
ಕೋರ್ಟ್ ಆದೇಶದಂತೆ ಮೆಸ್ಸಿ ಅವರು 2 ಮಿಲಿಯನ್ ಯುರೋ (2.21 ಮಿಲಿಯನ್ ಡಾಲರ್) ಹಾಗೂ ಅವರ ತಂದೆ 1.5 ಮಿಲಿಯನ್ ಯುರೋ ಪಾವತಿಸಿ ಜೈಲುವಾಸವನ್ನು ತಪ್ಪಿಸಿಕೊಳ್ಳಬಹುದು.
ಸ್ಪಾನೀಷ್ ಲಾ ಲೀಗಾದಲ್ಲಿ ಬಾರ್ಸಿಲೋನಾ ಪರ 37 ಗೋಲು ಬಾರಿಸಿ ಚಿನ್ನದ ಬೂಟು ಗೆದ್ದಿರುವ ಮೆಸ್ಸಿ ಅವರು ಈ ಋತುವಿನಲ್ಲಿ ಎಲ್ಲಾ ಯುರೋಪಿಯನ್ ಲೀಗ್ ಗಳಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications