6ನೇ ಬಾರಿಗೆ ಫೀಫಾ ಪ್ರಶಸ್ತಿ ಗೆದ್ದು ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ

ಮಿಲಾನ್, ಸೆ.24: ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು 6ನೇ ಬಾರಿಗೆ ಫೀಫಾ ವಾರ್ಷಿಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಸತತ 5 ಬಾರಿ ಪ್ರಶಸ್ತಿ ಗೆದ್ದಿದ್ದ ಕ್ರಿಶ್ಚಿಯಾನೋ ರೊನಾಲ್ಡೋ ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ.
ಕಳೆದ ತಿಂಗಳು UEFA ಪ್ಲೇಯರ್ ಪ್ರಶಸ್ತಿ ಗೆದ್ದ ವರ್ಗಿಲ್ ವಾನ್ ಡಿಕ್ ಅವರನ್ನು ಬಾರ್ಸಿಲೋನಾದ ಸ್ಟ್ರೈಕರ್ ಮೆಸ್ಸಿ ಹಿಂದಿಕ್ಕಿ ಗೆದ್ದುಕೊಂಡಿದ್ದಾರೆ. ಯೂವೆಂಟಸ್ ಮುಂಪಡೆ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಅವರು ಕೂಡಾ ಪ್ರಶಸ್ತಿ ಪಡೆಯುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದರು.
ಮೆಸ್ಸಿ(32) ಹಾಗೂ ವಾನ್ ಡಿಕ್(28) ಈಗ ಪ್ರತಿಷ್ಠಿತ ಬಾಲನ್ ಡಿ ಓರ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಡಿಸೆಂಬರ್ 02ರಂದು ಪ್ರಶಸ್ತಿ ವಿಜೇತರ ಹೆಸರು ಘೋಷಿಸಲಾಗುತ್ತದೆ. ಕಳೆದ ಸೀಸನ್ ಚಾಂಪಿಯನ್ಸ್ ಲೀಗ್ ನಲ್ಲಿ ಬಾರ್ಸಿಲೋನಾದ ಪರ ಮೆಸ್ಸಿ 12 ಗೋಲುಗಳಿಸಿದ್ದರು. ಆದರೆ ಸೆಮಿಫೈನಲ್ ನಲ್ಲಿ ಲಿವರ್ ಪೂಲ್ ವಿರುದ್ಧ 4-0 ಅಂತರದಲ್ಲಿ ಸೋಲು ಕಂಡಿತ್ತು.
ಇದಲ್ಲದೆ ಮಹಿಳಾ ಫುಟ್ಬಾಲರ್ ವಿಭಾಗದಲ್ಲಿ ಅಮೆರಿಕದ ಮೆಗನ್ ರಾಪಿನೋಯಿ ಅವರು ಫೀಫಾ ಪ್ರಶಸ್ತಿ ಗಳಿಸಿದ್ದಾರೆ. ಗೋಲ್ ಕೀಪರ್ ವಿಭಾಗದಲ್ಲಿ ಆಲಿಸನ್ ಬೆಕರ್ ಹಾಗೂ ಮಹಿಳಾ ಗೋಲ್ ಕೀಪರ್ ವನ್ ವೀನೆನ್ ಡಾಲ್ ಅವರು ಪ್ರಶಸ್ತಿ ಗೆದ್ದಿದ್ದಾರೆ.
ರೋಮಾನಿಯನ್ ಮೂಲದ ಹಂಗೇರಿಯನ್ ಮುಂಪಡೆ ಆಟಗಾರ 18ವರ್ಷ ವಯಸ್ಸಿನ ಡೇನಿಯಲ್ ಜ್ಸೋರಿ ಅವರು ಫೀಫಾ ಪುಸ್ಕಸ್ ಪ್ರಶಸ್ತಿ(ಶ್ರೇಷ್ಠ ಗೋಲು) ಗೆದ್ದಿದ್ದಾರೆ. ಮೆಸ್ಸಿ ಹಾಗೂ ಯುವಾನ್ ಫರ್ನಾಂಡೋ ಕ್ವೈಂಟೆರೋ ಅವರನ್ನು ಹಿಂದಿಕ್ಕಿದ್ದಾರೆ.
ಚಾಂಪಿಯನ್ಸ್ ಲೀಗ್ ಗೆದ್ದ ಲಿವರ್ ಪೂಲ್ ಕೋಚ್ ಕ್ಲೋಪ್ ಅವರು ಟೊಟೆಂಹ್ಯಾಮ್ ಮಾರಿಸಿಯೋ ಪೊಶೆಟಿನೋ ಹಾಗೂ ಮ್ಯಾಂಚೆಸ್ಟರ್ ಸಿಟಿ ಪೆಪ್ ಗಾರ್ಡಿಯೋಲಾ ಹಿಂದಿಕ್ಕಿ ಶ್ರೇಷ್ಠ ಕೋಚ್ ಪ್ರಶಸ್ತಿ ಗೆದ್ದಿದ್ದಾರೆ. ಮಹಿಳಾ ಕೋಚ್ ಪ್ರಶಸ್ತಿ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಎಲ್ಲಿಸ್ ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications