ಮೂಸ ಮೋಹಕ ಆಟ: ಐಸ್ ಲ್ಯಾಂಡ್ ವಿರುದ್ಧ ನೈಜೀರಿಯಾಕ್ಕೆ ಗೆಲುವು

ಮಾಸ್ಕೋ, ಜೂ. 22: ಫೀಫಾ ವಿಶ್ವಕಪ್ ಡಿ ಗ್ರೂಪಿನ ಪಂದ್ಯದಲ್ಲಿ ಐಸ್ ಲ್ಯಾಂಡ್ ವಿರುದ್ಧ ನೈಜೀರಿಯಾ 2-0 ಅಂತರದ ಗೆಲುವು ದಾಖಲಿಸಿದೆ. ಅಹ್ಮದ್ ಮೂಸ ಅವರು ಸಿಡಿಸಿದ ಅಮೋಘ ಎರಡು ಗೋಲ್ ಗಳ ನೆರವಿನಿಂದ ನೈಜೀರಿಯಾ ಜಯ ಸಾಧಿಸಿತು.
ಪಂದ್ಯದ ಸ್ಕೋರ್ ಕಾರ್ಡ್ ಮತ್ತು ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
49ನೇ ನಿಮಿಷದಲ್ಲಿ ಮೂಸ ಅವರು ನೈಜೀರಿಯಾ ಪರ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅದಾಗಿ 75ನೇ ನಿಮಿಷದಲ್ಲಿ ಮೂಸ ಅವರಿಂದ ಮತ್ತೊಂದು ಗೋಲ್ ಸಿಡಿಯಿತು. ಇಷ್ಟರಲ್ಲಾಗಲೇ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗಿತ್ತು.
ಪಂದ್ಯದ ಮೊದಲಾರ್ಧದಲ್ಲಿ 2 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಇತ್ತಂಡಗಳಿಂದ ಗೋಲ್ ದಾಖಲಾಗಿಲ್ಲ. ಆದರೆ ನೈಜೀರಿಯಾ ಆಟಗಾರರು ಆರಂಭದಿಂದಲೂ ಆಕರ್ಷಕ ಆಟವನ್ನು ಪ್ರದರ್ಶಿಸಿದರು. ಪಂದ್ಯದ ದ್ವೀತೀಯಾರ್ಧದಲ್ಲಿ ಗಳಿಸಿದ ಗೋಲ್ ಮೂಲಕ ನೈಜೀರಿಯಾ ಗೆದ್ದು ಬೀಗಿತು.
ಪಂದ್ಯದ ವೇಳೆ ಇತ್ತಂಡಗಳಿಂದ ಒಟ್ಟು ಐದು ಬಾರಿ ಆಟಗಾರರ ಬದಲಾವಣೆ ನಡೆಯಿತು. ದ್ವಿತೀಯಾರ್ಧದಲ್ಲಿ 6 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾದರೂ ಐಸ್ ಲ್ಯಾಂಡ್ ಗೋಲ್ ದಾಖಲಿಸಲಾಗದೆ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications