Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ 2018 ಮುನ್ನೋಟ: ಪೋರ್ಚುಗಲ್ ವಿರುದ್ಧ ಸ್ಪೇನ್ ಮೇಲುಗೈ ನಿರೀಕ್ಷೆ

Portugal v Spain Preview: Silva still wary despite Lopetegui departure

ಬೆಂಗಳೂರು, ಜೂನ್ 15: ಫೀಫಾ ವಿಶ್ವಕಪ್ 2018 ಜಾಗತಿಕ ಫುಟ್ಬಾಲ್ ಸಮರಕ್ಕೆ ಮಾಸ್ಕೋದಲ್ಲಿ ಭರ್ಜರಿಯಾಗಿ ಆರಂಭ ಸಿಕ್ಕಿದೆ. ಆರಂಭಿಕ ಪಂದ್ಯದಲ್ಲಿ ಅತಿಥೇಯ ರಷ್ಯಾ ಭರ್ಜರಿಯಾಗಿ ಜಯದಾಖಲಿಸಿದ್ದು, ಸೌದಿ ಅರೇಬಿಯಾ ವಿರುದ್ಧ 5-0 ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ.

ಜೂನ್ 15ರಂದು ಮೂರು ಪಂದ್ಯಗಳು ನಡೆಯಲಿದ್ದು, ಮೊದಲಿಗೆ (5:30ಕ್ಕೆ)ಈಜಿಪ್ಟ್ ಹಾಗೂ ಉರುಗ್ವೆ ನಡುವೆ ಪಂದ್ಯವಿದೆ. ಮೊರಕ್ಕೋ ಹಾಗೂ ಇರಾನ್ ನಡುವೆ 8.30ಕ್ಕೆ ಎರಡನೆ ಪಂದ್ಯ ಹಾಗೂ 11.30ಕ್ಕೆ ಪೋರ್ಚುಗಲ್ ಹಾಗೂ ಸ್ಪೇನ್ ಮಹತ್ವದ ಪಂದ್ಯ ನಿಗದಿಯಾಗಿದೆ. ಈ ಪಂದ್ಯದ ಮುನ್ನೋಟ ಇಲ್ಲಿದೆ ...

ಸ್ಪೇನ್ ವಿರುದ್ಧ ಪೋರ್ಚುಗಲ್ ಪಂದ್ಯದ ಅಂಕಿ ಅಂಶ

ವಿಶ್ವಕಪ್ ಆರಂಭಕ್ಕೂ ಮುನ್ನ ಕೋಚ್ ಲೊಪೆಟೆಗುಯಿ ಅವರು ತಂಡದಿಂದ ಹೊರನಡೆದಿದ್ದು, ಹಿನ್ನಡೆಯಾದರೂ, ಸ್ಪೇನ್ ತಂಡ ಬಲಿಷ್ಠವಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಸಾಲಿನಲ್ಲಿ ನಿಂತಿದೆ. ಪೋರ್ಚುಗಲ್ ಗೆ ಸ್ಟಾರ್ ಆಟಗಾರ ರೊನಾಲ್ಡೋ ಬಲ ಇದೆ.

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ.

ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಸಂಭಾವ್ಯ ತಂಡ:
ಪೋರ್ಚುಗಲ್ :
ಗೋಲ್ ಕೀಪರ್ : ರುಯಿ ಪ್ಯಾಟ್ರಿಕೋ
ಡಿಫೆಂಡರ್ : ಸೆಡ್ರಿಕ್, ಪೆಪೆ, ಗುರೆರಿಯೋ, ಫಾಂಟೆ,
ಮಿಡ್ ಫಿಲ್ಡರ್ಸ್ : ಮೌನ್ಟಿನ್ಹೋ, ಕರ್ವಾಲ್ಹೋ, ಮಾರಿಯೋ, ಬಿ ಸಿಲ್ವಾ
ಫಾರ್ವರ್ಡ್ಸ್ : ರೋನಾಲ್ಡೋ, ಗುಯೆಡೆಸ್

ಸ್ಪೇನ್ :
ಗೋಲ್ ಕೀಪರ್ : ಡಿ ಗಿಯಾ
ಡಿಫೆಂಡರ್ಸ್ : ಒಡಿರ್ಯೊಜೊಲಾ, ರಮೋಸ್, ಪೀಕೆ, ಆಲ್ಬಾ
ಮಿಡ್ ಫೀಲ್ದರ್ಸ್ : ಬುಸ್ಕೆಟ್ಸ್, ಇನಿಯಸ್ಟಾ, ಇಸ್ಕೊ, ಥಿಯಾಗೋ, ಸಿಲ್ವಾ
ಫಾರ್ವಡ್ಸ್: ಡಿಯಾಗೋ ಕಾಸ್ಟಾ

ಬೆಟ್ಟಿಂಗ್ :
ಬೆಟ್ಟಿಂಗ್ ಲೋಕದಲ್ಲಿ ಸ್ಪೇನ್ ಪರ 11/10 ಬಿಡ್ಡಿಂಗ್ ಇದ್ದು ನೆಚ್ಚಿನ ತಂಡ ಎನಿಸಿದೆ. ಪೋರ್ಚುಗಲ್ 3/1 ನಷ್ಟಿದೆ. ರೊನಾಲ್ಡೊ ಗೋಲು ಹೊಡೆಯುವುದರ ಬಗ್ಗೆ 4/1ರಂತೆ ಬೆಟ್ಟಿಂಗ್ ನಡೆದಿದೆ. ಡಿಯಾಗೋ ಕೋಸ್ಟರ್ 9/2 ರಂತೆ ಟ್ರೆಂಡಿಂಗ್ ಇದೆ.

Story first published: Friday, June 15, 2018, 12:56 [IST]
Other articles published on Jun 15, 2018
Read in English: Preview: Portugal v Spain
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+