
ಮಾಸ್ಕೋ, ಜೂ. 20: ಫೀಫಾ ವೀಶ್ವಕಪ್ ಗಾಗಿ ಇಂದು ಬಿ ಗ್ರೂಪಿನ ಪೋರ್ಚುಗಲ್-ಮೊರಾಕೋ ತಂಡಗಳು ಎದುರಾಗಿವೆ. ಪೋರ್ಚುಗಲ್ ನ ಮಿಡ್ ಫೀಲ್ಡರ್ ಜೊವೊ ಮಾರಿಯೋ ಅವರು ತಂಡವವನ್ನು ಮರಳಿ ಸೇರಿಕೊಂಡಿದ್ದು ಇಂದಿನ ಕದನ ಕುತೂಹಲ ಕೆರಳಿಸಿದೆ.
Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ರಷ್ಯಾದ ಜುಜ್ನಿಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಾಟದಲ್ಲಿ ಪೋರ್ಚುಗಲ್ ನ ಸ್ಟಾರ್ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೋ ಪ್ರಮುಖ ಆಟಕರ್ಷಣೆಯಾಗಿದ್ದಾರೆ. ಬಿ ಗ್ರೂಪಿನ ಕಳೆದ ಪಂದ್ಯದಲ್ಲೂ ರೊನಾಲ್ಡೋ ಮೂರು ಗೋಲುಗಳನ್ನು ಸಿಡಿಸಿ ಗಮನ ಸೆಳೆದಿದ್ದರು.
ಪೋರ್ಚುಗಲ್ ನಿಂದ ರುಯಿ ಪೆಟ್ರಿಸಿಯೋ; ಸೆಡ್ರಿಕ್, ಪೆಪೆ, ಜೋಸ್ ಫಾಂಟೆ, ರಾಫೆಲ್ ಗುರೆರೆರೊ; ಜೊವೊ ಮೌಂಟಿನ್ಹೋ, ವಿಲಿಯಂ ಕಾರ್ವಲ್ಹೋ, ಜೊವೊ ಮಾರಿಯೋ, ಬರ್ನಾರ್ಡೊ ಸಿಲ್ವಾ; ಗೊನ್ಕಾಲೊ ಗಿಡೆಸ್, ಕ್ರಿಸ್ಟಿಯಾನೊ ರೋನಾಲ್ಡೋ (ಕ್ಯಾಪ್ಟನ್) ಕಣಕ್ಕಿಳಿದಿದ್ದಾರೆ.
ಮೊರಾಕೊದಿಂದ ಮೊನಿರ್ ಎಲ್ ಕಜೌಯಿ; ನಬಿಲ್ ದಿರಾರ್, ಮೆಹ್ದಿ ಬೆನಟಿಯ (ಕ್ಯಾಪ್ಟನ್), ಮ್ಯಾನುಯೆಲ್ ಡಾ ಕೋಸ್ಟ, ಅಕ್ರಾಫ್ ಹಕಮಿ; Mbark ಬೌಸೌಫಾ, ಕರೀಮ್ ಎಲ್ ಅಹ್ಮದಿ; ನಾರ್ಡಿನ್ ಅಮ್ರಾಬಾತ್, ಯೂನೆಸ್ ಬೆಲ್ಹಂಡಾ, ಹಕಿಮ್ ಜಿಯಾಚ್; ಖಲೀದ್ ಬೋಟೈಬ್ ಪಂದ್ಯವನ್ನಾಡುತ್ತಿದ್ದಾರೆ.