Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್: ಪ್ರಶಸ್ತಿಗೆ ಕಣ್ಣಿಟ್ಟಿದೆ ಬಲಿಷ್ಟ ತಂಡ ಪೋರ್ಚುಗಲ್

FIFA world cup 2018 : ಪ್ರಶಸ್ತಿಗೆ ಕಣ್ಣಿಟ್ಟಿದೆ ಬಲಿಷ್ಟ ತಂಡ ಪೋರ್ಚುಗಲ್
Portugal World Cup 2018 squad and team guide

ಲಿಸ್ಬನ್, ಜೂ. 5: ಫುಟ್ಬಾಲ್ ಕ್ಷೇತ್ರದಲ್ಲಿ ಖ್ಯಾತಿಯಾಗಿರುವ ಮತ್ತೊಂದು ದೇಶವೆಂದರೆ ಅದು ಪೋರ್ಚುಗಲ್. ಅರ್ಜೆಂಟೀನಾ, ಬ್ರೆಜಿಲ್ ನಲ್ಲಿ ಫುಟ್ಬಾಲ್ ಹುಚ್ಚು ಅಭಿಮಾನಿಗಳಿರುವಂತೆ ಇಲ್ಲೂ ಫುಟ್ಬಾಲ್ ಪ್ರಿಯರು ಜಾಸ್ತಿ. ಫುಟ್ಬಾಲ್ ಕ್ಷೇತ್ರದಲ್ಲಿ ಬಲಾಡ್ಯ ರಾಷ್ಟ್ರವಾಗಿಯೂ ಪೋರ್ಚುಗಲ್ ಗುರುತಿಸಿಕೊಂಡಿದೆ.

ಫೀಪಾ ವಿಶ್ವ ರ್ಯಾಂಕಿಂಗ್ ನಲ್ಲಿ ಸದ್ಯ 4ನೇ ಸ್ಥಾನದಲ್ಲಿರುವ ಪೋರ್ಚುಗಲ್ ತಂಡದಲ್ಲಿ ಸ್ಟಾರ್ ಆಟಗಾರರ ಬಣವೇ ಇದೆ. ಅದರಲ್ಲೂ ಕ್ರಿಸ್ಚಿಯಾನೊ ರೊನಾಲ್ಡೋ ಅತೀ ಆಕರ್ಷಣೀಯ ಆಟಗಾರ.
ಅಧಿಕ ಗೋಲ್ ದಾಖಲಿಸಿದ ಸಾಧಕರ ಸಾಲಿನಲ್ಲಿ ಮೊದಲನೆಯವರಾಗಿ ರೊನಾಲ್ಡೋ ಇದ್ದು, ಪೋರ್ಚುಗಲ್ ಹೆಚ್ಚು ಅವಲಂಬಿತರಾಗಿರುವ ಆಟಗಾರರು ಇವರು. ಈವರೆಗೆ 149 ಪಂದ್ಯಗಳಲ್ಲಿ 81 ಗೋಲ್ ಸಾಧನೆಯಿಂದ ಗುರುತಿಸಿಕೊಂಡಿದ್ದಾರೆ.

ಫೀಫಾ ವಿಶ್ವಕಪ್ ಗೆ ಇನ್ನುಳಿದಿರುವುದು ಬರೀ 10 ದಿನಗಳು ಮಾತ್ರ. ಮಹಾನ್ ಸಮರಕ್ಕೆ ಸಜ್ಜಾಗುತ್ತಿರುವ ವಿಶ್ವದ 32 ಫುಟ್ಬಾಲ್ ತಂಡಗಳಲ್ಲಿ ಪೋರ್ಚುಗಲ್ ಪ್ರಶಸ್ತಿಗಾಗಿ ಕಣ್ಣಿಟ್ಟಿರುವ ಬಲಿಷ್ಟ ತಂಡ. ಪೋರ್ಚುಗಲ್ ಗೆ ಸಂಬಂಧಿಸಿ ಕಿರು ಮಾಹಿತಿ ಇಲ್ಲಿವೆ..

ಪೋರ್ಚುಗಲ್ ತಂಡದ ಬಲ: 23 ಜನ
ಗ್ರೂಪ್: ಬಿ. ಇದರಲ್ಲಿ ಪೋರ್ಚುಗಲ್, ಸ್ಪೇನ್, ಮೊರಾಕೋ, ಇರಾನ್ ದೇಶಗಳಿವೆ
ಗೋಲ್ ಕೀಪರ್ಸ್: ಆಂಟನಿ ಲೊಪ್ಸ್, ಬೆಟೊ, ರುಯಿ ಪೆಟ್ರಿಸಿಯೊ.
ಡಿಫೆಂಡರ್ಸ್: ಬ್ರೂನೋ ಅಲ್ವೆಸ್, ಸೆಡ್ರಿಕ್ ಸೋರೆಸ್, ಜೋಸ್ ಫಾಂಟೆ, ಮಾರಿಯೋ ರುಯಿ, ಪೆಪೆ, ರಾಫೆಲ್ ಗುರೆರೆರೊ, ರಿಕಾರ್ಡೊ ಪೆರೇರಾ, ರುಬೆನ್ ಡಯಾಸ್.
ಮಿಡ್ ಫೀಲ್ಡರ್ಸ್: ಆಡ್ರಿಯನ್ ಸಿಲ್ವಾ, ಬ್ರೂನೋ ಫೆರ್ನಾಂಡಿಸ್, ಜೊವೊ ಮಾರಿಯೋ, ಜೊವೊ ಮೌಟಿನ್ಹೋ, ಮ್ಯಾನುಯೆಲ್ ಫೆರ್ನಾಂಡಿಸ್, ವಿಲಿಯಂ ಕಾರ್ವಾಲ್ಹೋ, ಆಂಡ್ರೆ ಸಿಲ್ವಾ, ಬರ್ನಾರ್ಡೊ ಸಿಲ್ವಾ.
ಸ್ಟ್ರೈಕರ್ಸ್: ಕ್ರಿಸ್ಟಿಯಾನೋ ರೊನಾಲ್ಡೊ, ಗೆಲ್ಸನ್ ಮಾರ್ಟಿನ್ಸ್, ಗೊನ್ಕಾಲೊ ಗೈಡೆಸ್, ರಿಕಾರ್ಡೋ ಕ್ವಾರೆಸ್ಮಾ.
ಕೋಚ್ : ಫರ್ನಾಂಡೊ ಸ್ಯಾಂಟೋಸ್

ಸ್ಟಾರ್ ಆಟಗಾರರು: ಕ್ರಿಸ್ಟಿಯಾನೋ ರೊನಾಲ್ಡೋ, ಆಂಡ್ರೆ ಸಿಲ್ವಾ
ಫಿಫಾ ವಿಶ್ವ ಕಪ್ ಇತಿಹಾಸ: ಆರು ಬಾರಿ ಅರ್ಹತೆ; ಅತ್ಯುತ್ತಮ ಮೂರನೇ ಸ್ಥಾನ (1966).
ಸ್ಪರ್ಧೆಗಳು: 15 ನೇ ಜೂನ್ - ಸ್ಪೇನ್, 20 ಜೂನ್ - ಮೊರಾಕೊ, 25 ಜೂನ್ - ಇರಾನ್

Story first published: Friday, June 8, 2018, 18:13 [IST]
Other articles published on Jun 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+