

ಬರ್ಲಿನ್, ಜೂ. 4: ಮುಂಬರಲಿರುವ 2018ರ ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಜರ್ಮನ್ ನ ಪರಿಷ್ಕೃತ ಮತ್ತು ಅಂತಿಮ ತಂಡ ಪ್ರಕಟಗೊಂಡಿದ್ದು, ಆಕ್ರಮಣಕಾರಿ ಮಿಡ್ ಫೀಲ್ಡರ್ ಲೆರಾಯ್ ಸೇನ್ ಅವರನ್ನು ಕೈ ಬಿಡಲಾಗಿದೆ. ಗೋಲ್ ಕೀಪರ್ ಆಗಿ ಮ್ಯಾನುಯೆಲ್ ನ್ಯೂಯರ್ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
23 ಆಟಗಾರರಿರುವ ಜರ್ಮನ್ ತಂಡದಿಂದ ಸೇನ್ ಅವರನ್ನು ಹೊರಗಿಟ್ಟಿದ್ದು ಅಚ್ಚರಿ ಮೂಡಿಸಿದೆ. ಹಾಲಿಚಾಂಪಿಯನ್ ಆಗಿರುವ ಜರ್ಮನ್ ತಂಡದಿಂದ ಸ್ಟಾರ್ ಆಟಗಾರನ ಹೆಸರು ಕಾಣಸದಿರುವುದರು ಫುಟ್ಬಾಲ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಜೋಕಿಮ್ ಲೊವ್ ತರಬೇತುದಾರರಾಗಿರುವ ಜರ್ಮನ್ ತಂಡದಿಂದ ಸೇನ್ ಅವರನ್ನು ಕೈ ಬಿಟ್ಟಿರುವ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲವಾದರೂ, ಜೋಕಿಮ್ ಅವರು ನೂತನ ತಂಡ ಬಲಿಷ್ಟವಾಗಿದೆ ಎಂದಿದ್ದಾರೆ.

ಜರ್ಮನ್ ಅಂತಿಮ ತಂಡ ಕೆಳಗಿದೆ
ಗೋಲ್ ಕೀಪರ್ಸ್: ಮ್ಯಾನುಯೆಲ್ ನ್ಯೂಯರ್ (ಬೇಯರ್ನ್ ಮ್ಯೂನಿಚ್), ಮಾರ್ಕ್-ಆಂಡ್ರೆ ಟೆರ್ ಸ್ಟೀಗನ್ (ಬಾರ್ಸಿಲೋನಾ), ಕೆವಿನ್ ಟ್ರ್ಯಾಪ್ (ಪ್ಯಾರಿಸ್ ಸೇಂಟ್ ಜರ್ಮೈನ್).
ಡಿಫೆಂಡರ್ಸ್: ಜೆರೋಮ್ ಬೋಟೆಂಗ್ (ಬೇಯೆರ್ನ್ ಮ್ಯೂನಿಚ್), ಮ್ಯಾಥಿಯಸ್ ಗಿಂಟರ್ (ಬೊರುಸ್ಸಿ ಮೊನ್ಚೆನ್ಗ್ಲ್ಯಾಡ್ಬ್ಯಾಕ್), ಜೋನಸ್ ಹೆಕ್ಟರ್ (ಕಲೋನ್), ಮ್ಯಾಟ್ಸ್ ಹಮ್ಮೆಲ್ಸ್ (ಬೇಯರ್ನ್ ಮ್ಯೂನಿಚ್), ಜೋಶುವಾ ಕಿಮ್ಮಿಚ್ (ಬೇಯರ್ನ್ ಮ್ಯೂನಿಚ್), ಮಾರ್ವಿನ್ ಪ್ಲಾಟ್ಟನ್ಹಾರ್ಡ್ಟ್ (ಹೆರ್ತಾ ಬರ್ಲಿನ್), ಆಂಟೋನಿಯೊ ರುಡಿಜರ್ (ಚೆಲ್ಸಿಯಾ), ನಿಕ್ಲಾಸ್ ಸುಯೆಲೆ (ಬೇಯರ್ನ್ ಮ್ಯೂನಿಚ್).
ಮಿಡ್ಫೀಲ್ಡರ್ಸ್: ಜೂಲಿಯನ್ ಬ್ರಾಂಟ್ (ಬೇಯರ್ ಲಿವರ್ಕುಸೆನ್), ಜೂಲಿಯನ್ ಡ್ರೇಕ್ಸ್ಲರ್ (ಪ್ಯಾರಿಸ್ ಸೇಂಟ್ ಜರ್ಮೈನ್), ಲಿಯಾನ್ ಗೊರೆಟ್ಜ್ಕಾ (ಸ್ಖಾಲ್ಕೆ 04), ಇಲ್ಕೆ ಗುಂಡೋಗನ್ (ಮ್ಯಾಂಚೆಸ್ಟರ್ ಸಿಟಿ), ಸಾಮಿ ಖೆಡಿರಾ (ಜುವೆಂಟಸ್), ಟೋನಿ ಕ್ರೂಸ್ (ರಿಯಲ್ ಮ್ಯಾಡ್ರಿಡ್), ಥಾಮಸ್ ಮುಲ್ಲರ್ (ಬೇಯೆರ್ನ್ ಮ್ಯೂನಿಕ್) , ಮಾರ್ಕೊ ರೀಸ್ (ಬೋರುಸಿಯ ಡಾರ್ಟ್ಮಂಡ್), ಸೆಬಾಸ್ಟಿಯನ್ ರೂಡಿ (ಬೇಯರ್ನ್ ಮ್ಯೂನಿಚ್), ಮೆಸತ್ ಒಜಿಲ್ (ಆರ್ಸೆನಲ್).
ಫಾರ್ವರ್ಡ್ಸ್: ಮಾರಿಯೋ ಗೊಮೆಜ್ (ವಿಎಫ್ ಬಿ ಸ್ಟಟ್ಗಾರ್ಟ್), ಟಿಮೊ ವರ್ನರ್ (ಆರ್ಬಿ ಲಿಪ್ಜಿಗ್).