For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪುನರಾರಂಭಗೊಳ್ಳಲಿವೆ ಸರ್ಬಿಯಾ, ಕ್ರೊಯೇಷಿಯಾ ಫುಟ್ಬಾಲ್‌ ಲೀಗ್‌ಗಳು

Serbia, Croatia football leagues to resume

ನವದೆಹಲಿ, ಮೇ 7: ಕೊರೊನಾವೈರಸ್‌ನಿಂದಾಗಿ ನಿಲುಗಡೆಯಾಗಿದ್ದ ಸರ್ಬಿಯನ್ ಮತ್ತು ಕ್ರೊಯೇಷಿಯನ್ ಫುಟ್ಬಾಲ್‌ ಲೀಗ್‌ಗಳು ಮೇ 30 ಮತ್ತು ಜೂನ್ 6ರಂದು ಪುನರಾರಂಭಗೊಳ್ಳಲಿವೆ. ಬುಧವಾರ (ಮೇ 6) ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದಾರೆ.

ಎರಡೂ ರಾಷ್ಟ್ರಗಳಲ್ಲಿನ ಫುಟ್ಬಾಲ್‌ ಲೀಗ್‌ಗಳು ಮತ್ತೆ ಆರಂಭಗೊಳ್ಳುತ್ತಿವೆಯಾದರೂ ಪಂದ್ಯಗಳ ವೇಳೆ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧ ಹೇರಾಗಿದೆ. ಹೀಗಾಗಿ ಪಂದ್ಯಗಳು ಮುಚ್ಚಿದ ಸ್ಟೇಡಿಯಂನಲ್ಲಿ ಅಂದರೆ ಪ್ರೇಕ್ಷಕರಿಲ್ಲದ ಖಾಲಿ ಸ್ಟೇಡಿಯಂನಲ್ಲಿ ನಡೆಯುವುದನ್ನು ನಿರೀಕ್ಷಿಸಲಾಗಿದೆ.

'2019/2020 ಸೀಸನ್‌ನ ಕೊನೆಯ ನಾಲ್ಕು ಸುತ್ತುಗಳು ನಡೆಯಲಿವೆ ಎಂದು ನಿರ್ಧರಿಸಲಾಗಿದೆ,' ಎಂದು ಸರ್ಬಿಯನ್ ಫುಟ್ಬಾಲ್ ಫೆಡರೇಶನ್ (ಎಫ್‌ಎಸ್‌ಎಸ್) ವೆಬ್‌ಸೈಟ್‌ ಹೇಳಿದೆ.

ಕ್ವಾರ್ಟರ್-ಫೈನಲ್ ಹಂತವನ್ನು ತಲುಪಿರುವ ಸರ್ಬಿಯನ್ ಕಪ್ ಸಹ ಜೂನ್ 24ರಂದು ನಡೆಯುವ ಫೈನಲ್ ಪಂದ್ಯದೊಂದಿಗೆ ಪೂರ್ಣಗೊಳ್ಳಲಿದೆ. ಈ ಮಧ್ಯೆ, ಕ್ರೊಯೇಷಿಯಾದ ಫುಟ್ಬಾಲ್ ಫೆಡರೇಶನ್ (ಎಚ್‌ಎನ್‌ಎಸ್)ನ ಸೀಸನ್ ಮೇ 30 ರಂದು ನಡೆಯುವ ರಾಷ್ಟ್ರೀಯ ಕಪ್ ಸೆಮಿಫೈನಲ್‌ನೊಂದಿಗೆ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Story first published: Thursday, May 7, 2020, 10:19 [IST]
Other articles published on May 7, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+