For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018 ಫೈನಲ್ ಯಾರು ಗೆಲ್ಲಲಿದ್ದಾರೆ? ಇಲ್ಲಿದೆ ಉತ್ತರ

By Mahesh
Tapir Cleopatra predicts Croatian win over France in Fifa World Cup final

ಬೆಂಗಳೂರು, ಜುಲೈ 14: ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2018 ಟೂರ್ನಮೆಂಟ್ ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಭವಿಷ್ಯವಾಣಿಗಳು ಬರುತ್ತಿವೆ. ಪ್ರಾಣಿ, ಪಕ್ಷಿಗಳ ನಂತರ ಕಂಪ್ಯೂಟರ್ ಭವಿಷ್ಯ ಈಗ ಸದ್ದು ಮಾಡುತ್ತಿದೆ. ಈ ನಡುವೆ ರಷ್ಯಾದ ನಿಜ್ನಿ ನೊವ್​ಗ್ರಾಡ್​ನಲ್ಲಿರುವ ಲಿಂಪೂ ಮೃಗಾಲಯದಲ್ಲಿರುವ ಟೇಪರ್ (ಸೊಂಡಿಲುಳ್ಳ ಹಂದಿ) ಫೀಫಾ ವಿಶ್ವಕಪ್ ಅಂತಿಮ ಹಣಾಹಣಿಯಲ್ಲಿ ಯಾರು ಗೆದ್ದು ಕಪ್ ಎತ್ತಲಿದ್ದಾರೆ ಎಂಬ ಭವಿಷ್ಯವನ್ನು ಸೂಚಿಸಿದೆ.

ಕ್ಲಿಯೋಪಾತ್ರ ಹೆಸರಿನ ಈ ಟೇಪರ್ ಸಾಮಾನ್ಯವಾಗಿ ತಿನ್ನುವ ಆಹಾರಗಳಾದ ಬಾಳೆಹಣ್ಣು, ಕ್ಯಾರೆಟ್​ಗಳನ್ನು ಸಣ್ಣ ಸಣ್ಣ ತುಂಡು ಮಾಡಿ ಎಲ್ಲ ಜಾರ್​ಗಳಲ್ಲೂ ಸಮಪ್ರಮಾಣದಲ್ಲಿ ಇರಿಸಲಾಗಿತ್ತು. ಬಳಿಕ ಕ್ಲಿಯೋಪಾತ್ರರನ್ನು ಜಾರ್​ನ ಬಳಿ ಬಿಟ್ಟಾಗ ಕ್ರೋವೇಷಿಯಾ ಬಾವುಟವಿದ್ದ ಜಾರ್ ನ ಆಹಾರವನ್ನು ತಿಂದಿದೆ.

ಈ ಹಿಂದೆ ಅರ್ಜೆಂಟೀನಾ ವಿಜಯಶಾಲಿಯಾಗಲಿದೆ ಅನ್ನುವುದು ಕ್ಲಿಯೋಪಾತ್ರ ಪ್ರಕಟಿಸಿರುವ ಭವಿಷ್ಯ ನುಡಿದಿತ್ತು. ಜೊತೆಗೆ 3ನೇ ಸ್ಥಾನದ ಕುರಿತಾಗಿ ಟೇಪರ್ ಕ್ಲಿಯೋಪಾತ್ರ ನುಡಿದ ಭವಿಷ್ಯ ಕೂಡಾ ಸುಳ್ಳಾಗಿದೆ. ಆಸ್ಟ್ರೇಲಿಯಾ ತಂಡ 3ನೇ ಸ್ಥಾನ ಬರಲಿದೆ ಎಂದು ಹೇಳಿತ್ತು. ಆದರೆ, ಅಸ್ಟ್ರೇಲಿಯಾ ಲೀಗ್ ಹಂತದಿಂದಲೇ ನಿರ್ಗಮಿಸಿದೆ.

ಪ್ರತಿ ಪಂದ್ಯಕ್ಕೂ ಮುನ್ನ 9 ವರ್ಷದ ಕ್ಲಿಯೋಪಾತ್ರ ಭವಿಷ್ಯ ಹೇಳುತ್ತಾ ಬಂದಿದೆ ಎಂದು ಮೃಗಾಲಯದ ನಿರ್ದೇಶಕ ವಾಸ್ಲಿ ಬಾಲ್ಡಿಗಿನ್ ಹೇಳಿದ್ದಾರೆ.

ಪ್ರತಿ ವಿಶ್ವಕಪ್ ಟೂರ್ನಮೆಂಟ್ ನಲ್ಲೂ ಅಧಿಕೃತ ಭವಿಷ್ಯ ನುಡಿಯುವ ಪ್ರಾಣಿಗೆ ವಿಶೇಷ ಸ್ಥಾನಮಾನ ಸಿಗುತ್ತದೆ. ಕರಾರುವಾಕ್ ಭವಿಷ್ಯ ತೋರಿಸುತ್ತಿದ್ದ ಆಕ್ಟೋಪಸ್ ಪಾಲ್ ಇನ್ನು ನೆನಪು ಮಾತ್ರ. ಈ ಬಾರಿ ರಷ್ಯಾದ ಸೈಂಟ್ ಪೀಟರ್ಸ್ ಬರ್ಗ್ ನ ಹರ್ಮಿಟೇಜ್ ಮ್ಯೂಸಿಯಂನಲ್ಲಿರುವ ಬಿಳಿ ಬಣ್ಣದ ಬೆಕ್ಕು ಸೇರಿದಂತೆ ಅನೇಕ ಪ್ರಾಣಿಗಳು ಭವಿಷ್ಯಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

Story first published: Saturday, July 14, 2018, 12:23 [IST]
Other articles published on Jul 14, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+