ಪೆನಾಲ್ಟಿಯನ್ನು ಗೋಲಾಗಿಸದೆ ಫೇಲಾದ ಫೇಮಸ್ ಆಟಗಾರರ ವಿಡಿಯೋ

ಬೆಂಗಳೂರು, ಜೂ. 26: ಸೋಮವಾರದ ಫೀಫಾ ವಿಶ್ವಕಪ್ ಬಿ ಗ್ರೂಪಿನ ಇರಾನ್-ಪೋರ್ಚುಗಲ್ ಪಂದ್ಯದಲ್ಲಿ ಎರಡೂ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು. ಇದರಲ್ಲಿ ಗೆಲುವು ಪೋರ್ಚುಗಲ್ ಪರವಾಗಿದ್ದರೂ ಕ್ರಿಸ್ಚಿಯಾನೊ ರೊನಾಲ್ಡೋ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸದೆ ವಿಫಲರಾಗಿದ್ದರಿಂದ ಮಹತ್ವದ ಪಂದ್ಯ ಡ್ರಾದಿಂದ ಅಂತ್ಯಗೊಂಡಿತ್ತು.
ಪಂದ್ಯದ ಬಳಿಕ ಪೋರ್ಚುಗಲ್ ಸ್ಟಾರ್ ಆಟಗಾರ ರೊನಾಲ್ಡೋ ಅವರು ಪೋರ್ಚುಗಲ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪೋರ್ಚುಗಲ್ ತಂಡದ ಕೋಚ್ ಫರ್ನಾಂಡೋ ಸ್ಯಾಂಟೊಸ್ ಅವರೂ ರೊನಾಲ್ಡೋ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಕುತೂಹಲಕಾರಿ ಸಂಗತಿಯೆಂದರೆ ಪ್ರತಿಷ್ಠಿತ ಟೂರ್ನಿಯ ವೇಳೆ ಇಂಥ ಅನೇಕ ಆಟಗಾರರು ವಿಫಲರಾದ ನಿದರ್ಶನಗಳಿವೆ. ಬ್ರೆಜಿಲ್ ನ ರೊನಾಲ್ಡಿನೊ, ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಇಂಗ್ಲೆಂಡ್ ನ ಡೇವಿಡ್ ಬೆಕ್ಹ್ಯಾಮ್ ಎಲ್ಲರೂ ಈ ಯಾದಿಯಲ್ಲಿ ಸೋತವರೆ.
ಕೆಲವೊಂದು ಒತ್ತಡದ ಸಂದರ್ಭಗಳಲ್ಲಿ ಸ್ಟಾರ್ ಆಟಗಾರರಿಂದಲೂ ಇಂಥ ತಪ್ಪು ಯಾ ವೈಫಲ್ಯಗಳಾಗುವುದು ಸಹಜ. ಯಾಕೆಂದರೆ ಸೋಲಿಗೆ ಮೆಸ್ಸಿ, ರೊನಾಲ್ಡೋ, ಮರಡೋನಾ ಎನ್ನುವ ಬೇಧವೇ ಇಲ್ಲನೋಡಿ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications